ಮದುವೆಯಾಗಲು ಮನೆಗೆ ಬರುತ್ತಿದ್ದು ಯುವ ಯೋಧ ಶವವಾಗಿ ಬಂದ

ಉಮೇಶ ಗೌರಿ (ಯರಡಾಲ)

ಗೋಕಾಕ: ಎಂಟು ದಿನಗಳಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದು ಮನೆಗೆ ಆಗಮಿಸುವಾಗ ಮಾರ್ಗ ಮಧ್ಯ ರೈಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಹೌದು ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಯುವ ಯೋಧ ಕಾಶಿನಾಥ ಶಿಂದಗೇರಿ (28) ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪಂಜಾಬನ ಲೂಧಿಯಾನ ಎಂಬಲ್ಲಿ ಇ ಘಟನೆ ನಡೆದಿದ್ದು ಯೋಧನ ಸ್ವಗ್ರಾಮ ಕನಸಗೇರಿಯಲ್ಲಿ ದುಖಃ ಮಡುಗಟ್ಟಿದ ವಾತವರಣ ಸೃಷ್ಠಿಯಾಗಿದ್ದು ಮುಂಜಾನೆ ಯೋಧನ ಪಾರ್ಥಿವ ಶರೀರ ಆಗಮಿಸಿದ್ದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂತಿಮ ಯಾತ್ರೆ ಜರುಗಿತು.

ಅಂತಿಮ ಯಾತ್ರೆಯಲ್ಲಿ ಸೇರಿದ ಜನಸಾಗರ

ಅದ್ದೂರಿಯಾಗಿ ಮದುಮೆ ಮಾಡಿಕೊಂಡು ಮಡದಿ ಜೊತೆ ದಿಬ್ಬಣದ ಮೆರವಣೆಗೆ ಮಾಡಿಕೊಳ್ಳಬೇಕಾದ ಯುವ ಯೋಧನ ಶವದ ಅಂತಿಮ ಯಾತ್ರೆಯ ಮೆರವಣಿಗೆಯನ್ನು ನೋಡಿದ ಗ್ರಾಮಸ್ಥರು, ರಾಜಕಾರಣಿಗಳು, ಜನಪ್ರತಿನಿಧಿಗಳು ಸ್ನೇಹಿತರು ಸೇರಿದಂತೆ ಇತರರು ಮರಮರ ಮರಗಿದರು ಇದರಿಂದ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಠಿಯಾಗಿತ್ತು. ಮೃತ ಯೋದನಿಗೆ ಮೂರು ಜನ ಸಹೋದರರು ತಂದೆ ತಾಯಿ ಇದ್ದಾರೆ.

Share This Article
";