ಮಕ್ಕಳಿಗೆ ABCD ಕಲಿಸದ ಶಿಕ್ಷಕಿ:– ಪರಿಸ್ಥಿತಿ ನೋಡಿದ ಎಸಿ ಶಾಕ್

ರಾಯಚೂರು: ತಾಲೂಕಿನ ಲಿಂಗನಖಾನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ  ದಿಢೀರ್ ಭೇಟಿ ನೀಡಿದ ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತ (AC) ರಜನಿಕಾಂತ್ ಚವ್ಹಾಣ್ ಅಲ್ಲಿನ ಪರಿಸ್ಥಿತಿ ಕಂಡು ಶಾಕ್ ಆಗಿದ್ದಾರೆ.

ಎರಡನೇ ತರಗತಿ ಮಕ್ಕಳಿಗೆ ಇಂಗ್ಲಿಷ್ (English) ವರ್ಣಮಾಲೆ ಪರಿಚಯವೇ ಇಲ್ಲದ್ದನ್ನು ತಿಳಿದು ದಿಢೀರ್ ಭೇಟಿ ವೇಳೆ ಎಸಿ ಗರಂ ಆಗಿದ್ದಾರೆ. ಮಕ್ಕಳಿಗೆ ABCD ಓದಲು ಬರುವುದಿಲ್ಲ ಏನ್ ಕಲಿಸುತ್ತಿದ್ದಿರಿ ಎಂದು ಶಿಕ್ಷಕಿ  ಹಾಗೂ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆಗಳನ್ನೇ ಹೇಳುತ್ತಿರುವುದನ್ನು ಬಿಟ್ಟು ಮಕ್ಕಳಿಗೆ ಕಲಿಸುವ ಕಡೆಯೂ ಗಮನಹರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್ (Covid-19) ಕಾರಣಕ್ಕೆ ಎರಡು ವರ್ಷದಿಂದ ಮಕ್ಕಳು ಓದಿನಲ್ಲಿ ಹಿಂದೆ ಬಿದ್ದಿದ್ದಾರೆ ಅನ್ನೋ ಶಿಕ್ಷಕಿಯ ಸಮಜಾಯಿಷಿಗೆ ಅಧಿಕಾರಿ ಗರಂ ಆದರು. ನಾನೇ ಶಿಕ್ಷಕನಾಗಿ ಬರಲೇ ಎರಡೇ ದಿನದಲ್ಲಿ ಎಬಿಸಿಡಿ ಕಲಿಸುತ್ತೇನೆ. ಒಂದು ವಾರದೊಳಗೆ ಮಕ್ಕಳಿಗೆ ಎಬಿಸಿಡಿ ಕಲಿಸಬೇಕು. ಮಕ್ಕಳು ಪಟಪಟನೆ ಎಬಿಸಿಡಿ ಹೇಳುವುದನ್ನು ವೀಡಿಯೋ ಮಾಡಿ ಕಳುಹಿಸಿ ಎಂದು ತಾಕೀತು ಮಾಡಿದರು. ಶಾಲೆಯ ಶಿಕ್ಷಕರ ಕೊರತೆ ಬಗ್ಗೆ ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆಮಾಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಎಸಿ ಸೂಚಿಸಿದ್ದಾರೆ.

 

 

 

 

 

ಕೃಪೆ:ಟಿವಿಪಬ್ಲಿಕ್

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";