ರೈಲ್ವೆ ಪದೋನ್ನತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ! ಅಕ್ರಮ ನಡೆದಿರುವ ಬಗ್ಗೆ ಗಂಭೀರ ದೂರು

ಉಮೇಶ ಗೌರಿ (ಯರಡಾಲ)

ಧಾರವಾಡ:  ನೇಮಕಾತಿ ಅಕ್ರಮದ ವಾಸನೆ ಎಲ್ಲೆಡೆಯೂ ಹರಡುತ್ತಿದೆ. ರಾಜ್ಯ ಸರ್ಕಾರದ ಬಹುತೇಕ ಹುದ್ದೆಗಳಲ್ಲಿ ಅಕ್ರಮ ನಡೆದಿದ್ದು, ತನಿಖೆ ಕೂಡ ನಡೆಯುತ್ತಿರುವ ಬೆನ್ನಲ್ಲೇ ಈಗ ರೈಲ್ವೆ ಇಲಾಖೆಯಲ್ಲೊಂದು ಗಂಭೀರ ಆರೋಪ ಕೇಳಿ ಬಂದಿದೆ.

ರೈಲ್ವೆ ಪರೀಕ್ಷೆ ವಿರುದ್ಧ ರೈಲ್ವೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲ ಮರು ಪರೀಕ್ಷೆಗೂ ಒತ್ತಾಯಿಸಿದ್ದಾರೆ. ದೊಡ್ಡಮಟ್ಟದ ಅಕ್ರಮ ನಡೆದಿದೆ ಎಂದು ಅಸಮಾಧಾನಗೊಂಡ ಸಿಬ್ಬಂದಿ ಹುಬ್ಬಳ್ಳಿ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು.. ರೈಲ್ವೆಯ ಗೂಡ್ಸ್ ಟ್ರೈನ್ ಮ್ಯಾನೇಜರ್ ಸಿಇಟಿಯ ಪ್ರಶ್ನೆಪತ್ರಿಕೆ ಬಹಿರಂಗ ಆರೋಪ ಕೇಳಿಬಂದಿದೆ. ಜಿ.ಟಿ.ಎಂ ಪರೀಕ್ಷಾರ್ಥಿಗಳು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಜಿ. ಎಂ ಕಚೇರಿ ಬಳಿ ಹೋರಾಟ ನಡೆಸಿದ್ದು, ರೈಲ್ವೆ ಇಲಾಖೆಯಲ್ಲಿ ಪದೋನ್ನತಿಗಾಗಿ ನಡೆದಿದ್ದ ಸಿಇಟಿ ಸೆಪ್ಟೆಂಬರ್ 04 ರಂದು ಜಿಟಿಎಲ್ ಆಂತರಿಕ ಸ್ಪರ್ಧಾ ಪರೀಕ್ಷೆಯನ್ನು ಆನ್​ಲೈನ್​ ಮೂಲಕ ನಡೆಸಲಾಗಿತ್ತು. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ವಾಟ್ಸ್​​​ಆ್ಯಪ್​ನಲ್ಲಿ ಹರಿದಾಡಿದೆ ಎಂಬ ಆರೋಪ ಕೇಳಿ ಬಂದಿದೆ.

147 ಹುದ್ದೆಗಳಿಗೆ ಒಟ್ಟು 4,685 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 200 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಶೇ. 95 ರಿಂದ 96 ರಷ್ಟು ಅಂಕ ಪಡೆದಿದ್ದು, ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಅಂತ ಸಾಬೀತಾಗುತ್ತೆ ಅಂತ ಆರೋಪಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ನೈರುತ್ಯ ರೈಲ್ವೆಯ ಜಿ. ಎಂಗೆ ಮನವಿ ಸಲ್ಲಿಕೆ ಮಾಡಿದ್ದು, ಮರು ಪರೀಕ್ಷೆಗೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಪರೀಕ್ಷೆ ನಡೆದು ಎಂಟು ದಿನಗಳಾಗಿವೆ. ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು ಅಂತ ಈಗ ಕೆಲ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈ ಕುರಿತು ಪಾರದರ್ಶಕ ತನಿಖೆ ನಡೆಸೋದಾಗಿ ಸಿ.ಪಿ.ಆರ್.ಒ ಅನೀಶ್ ಹೆಗ್ಡೆ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಅಭ್ಯರ್ಥಿಗಳ ಆರೋಪ ಗಂಭೀರವಾಗಿ ಕೇಳಿ ಬಂದಿದ್ದು, ಕೇಂದ್ರ ಸರ್ಕಾರದ ವ್ಯವಸ್ಥೆ ಹಾಳು ಮಾಡಲು ಕೆಲವೊಂದು ಜಾಲ ಸಕ್ರಿಯವಾಗಿರುವುದು ಕಂಡುಬರುತ್ತಿದೆ. ಈ ಬಗ್ಗೆ ರೈಲ್ವೆ ಇಲಾಖೆ ಸೂಕ್ತ ತನಿಖೆ ನಡೆಸಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅರ್ಹರಿಗೆ ಪದೋನ್ನತಿ ನೀಡುವ ಕೆಲಸವನ್ನು ಮಾಡಬೇಕಿದೆ.

 

 

 

 

 

 

 

 

 

 

(Etv)

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";