ಐದು ಸಾವಿರ ಹೆರಿಗೆ ಮಾಡಿಸಿದ್ದ ನರ್ಸ್‌ ತಮ್ಮ ಹೆರಿಗೆ ನಂತರ ನಿಧನ!

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್              

ಮುಂಬೈ: ಸುಮಾರು 5 ಸಾವಿರ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ಖ್ಯಾತ ನರ್ಸ್‌ ಜ್ಯೋತಿ ಗಾವ್ಲಿ (38) ಶಿಶುವಿಗೆ ಜನ್ಮವಿತ್ತ ಕೆಲವೇ ದಿನಗಳಲ್ಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.                        

ಕಳೆದ ಎರಡು ವರ್ಷಗಳಿಂದ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಇವರು ನವೆಂಬರ್ 1ನೇ ತಾರೀಖಿನ ವರೆಗೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿ ನವೆಂಬರ್ 2 ರಂದು ಅದೇ ಆಸ್ಪತ್ರೆಯಲ್ಲಿ ಅವರಿಗೆ ಹೆರಿಗೆ ಆಗಿದೆ. ಆದರೆ ಹೆರಿಗೆ ನಂತರ ಅವರು ನ್ಯುಮೋನಿಯಾದಿಂದ ಬಳಲಿದ್ದು, ಭಾನುವಾರ ಕೊನೆಯುಸಿರೆಳೆದಿದ್ದಾರೆ. 

ನರ್ಸ್ ಆಗಿ ಆರು ವರ್ಷ ಕೆಲಸ ಮಾಡಿದ್ದ ಜ್ಯೋತಿ ಇದುವರೆಗೆ ಸುಮಾರು 5 ಸಾವಿರ ಹೆರಿಗೆ ಮಾಡಿಸಿದ್ದರು. ಆದರೆ ಇಂದು ನಮ್ಮ ಕೈಯಿಂದ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ನೋವಿನಿಂದ ಹೇಳಿಕೊಂಡಿದ್ದಾರೆ.

Share This Article
";