ಸುರಾನ ಕಾಲೇಜಿನ ವಿದ್ಯಾರ್ಥಿನಿಯರಿಂದ ಬೈಕ್‌ ರ‍್ಯಾಲಿ ಮೂಲಕ ಸಮಾನತೆಯ ಸಂದೇಶ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಬೆಂಗಳೂರು ಮಾರ್ಚ್‌ 09: ಸುರಾನಾ ಕಾಲೇಜಿನ ರ‍್ಯಾಲಿ ವಿದ್ಯಾರ್ಥಿನಿಯರು ಇಂದು ಬೈಕ್‌ ರ‍್ಯಾಲಿ ಆಯೋಜಿಸಿ ಸಮಾನತೆಯ ಸಂದೇಶ ಸಾರುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.

ಸೌತ್‌ ಎಂಡ್‌ ಸರ್ಕಲ್‌ ಬಳಿಯಿರುವ ಸುರಾನಾ ಕಾಲೇಜಿನ ಬಳಿಯಿಂದ ಪ್ರಾರಂಭವಾದ ಬೈಕ್‌ ರ‍್ಯಾಲಿಗೆ ಮೈಕ್ರೋ ಲ್ಯಾಬ್‌ನ ಸಿಎಂಡಿ ದಿಲೀಪ್‌ ಸುರಾನಾ ಹಾಗೂ ದೇಶದ ಹೈಜಂಪ್‌ ಕ್ರೀಡಾಪಟು ಸಹನಾ ಕುಮಾರಿ ಚಾಲನೆ ನೀಡಿದರು. ನೂರಕ್ಕೂ ಹೆಚ್ಚು ಬೈಕ್‌ಗಳ ಮೇಲೆ ಬ್ರೇಕ್‌ ದ ಬಯಾಸ್‌ ಭಿತ್ತಿಪತ್ರಗಳನ್ನು ಹಿಡಿದುಕೊಂಡಂತಹ ವಿದ್ಯಾರ್ಥಿನಿಯರು ತಂಡವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ನ್ಯಾಷನಲ್‌ ಬೈಕ್‌ ರೇಸರ್‌ ಆದಂತಹ ಐಶ್ವರ್ಯಾ ಪಿಸೆ ಅವರು ನಗರದ ವಿವಿಧ ಭಾಗಗಳಲ್ಲಿ ಮುನ್ನಡೆಸಿದರು. ಮಹಿಳಾ ಮತ್ತು ಪುರುಷ ಸಮಾನತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೈಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕ್ರೀಡಾಪಟು ಸಹನಾ ಕುಮಾರಿ ಮಾತನಾಡಿ, ಅಮಿತವಾದ ಉತ್ಸಾಹ ಹಾಗೂ ಪರಿಶ್ರಮದಿಂದ ಮಹಿಳೆಯರು ಏನನ್ನು ಬೇಕಾದರೂ ಸಾಧಿಸಬಹುದಾಗಿದೆ. ಆ ಸಾಧನೆಯನ್ನು ಮಾಡುವಂತಹ ಅಮಿತ ಉತ್ಸಾಹವನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು ಎಂದರು.

ಸುರಾನಾ ಕಾಲೇಜಿನ ಕಾರ್ಯನಿರ್ವಾಹಕ ಟ್ರಸ್ಟಿ ಅರ್ಚನಾ ಸುರಾನ ಮಾತನಾಡಿ, ಮಹಿಳೆಯರಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಆದರೆ, ಅವಕಾಶಗಳ ಕೊರತೆ ಹೆಚ್ಚಾಗಿದೆ. ಇದನ್ನು ಲಿಂಗ ಸಮಾನ ಸಮಾಜ ಮಾತ್ರ ಸರಿಪಡಿಸಬಲ್ಲದು. ಮಹಿಳೆಯರು ಇರುವಂತಹ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಸಾಧನೆ ಮಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಇಂದು ವಿದ್ಯಾರ್ಥಿನಿಯರು ಬೈಕ್‌ ಓಡಿಸುವ ಮೂಲಕ ತಾವೂ ಪುರುಷರಿಗಿಂತಾ ಕಡಿಮೆಯಿಲ್ಲ ಎನ್ನುವುದನ್ನ ತೋರಿಸಿದ್ದಾರೆ ಎಂದರು.

ಸುರಾನಾ ಕಾಲೇಜಿನ ಸ್ಟೂಡೆಂಟ್‌ ಕೌನ್ಸಿಲ್‌ ಮತ್ತು ಶಿ ಸೆಲ್‌ (ಸೆಕ್ಸುಯಲ್‌ ಹರ್ರಾಸ್‌ಮೆಂಟ್‌ ಎಲಿಮಿನೇಷನ್‌) ಸೆಲ್‌ ಆಯೋಜಿಸಿದ್ದ ಬೈಕ್‌ ರ‍್ಯಾಲಿ ವಿಧಾನಸೌಧದಲ್ಲಿ ಸಮಾಪ್ತಿಯಾಯಿತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";