ಇಸಿಜಿ ಹೆಸರಲ್ಲಿ ನಗ್ನ ವಿಡಿಯೋ: ತನಿಖೆಗಿಳಿದ ಪೊಲೀಸರಿಗೆ ಬಿಗ್​​​​​ ಶಾಕ್​!

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಗುಂಟೂರು: 

ಆಂಧ್ರ ಪ್ರದೇಶದ ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಸಿಜಿ(Electrocardiogram) ಮಾಡಿಸಲು ಬಂದ ಯುವತಿಯ ಜೊತೆಗೆ ಅಲ್ಲಿನ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿ ಅವಳನ್ನು ನಗ್ನಗೊಳಿಸಿ ವಿಡಿಯೋ ಮಾಡಿದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಆದ್ರೆ ಆರೋಪಿಯ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಬಿಗ್ ಆಶ್ಚರ್ಯ ಕಾದಿತ್ತು. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು? ತನಿಖೆಗೆ ಆಗಮಿಸಿದ ಪೊಲೀಸರಿಗೆ ಗೊತ್ತಾಗಿದ್ದು ಏನು? ಎಂಬುದರ ಮಾಹಿತಿ ಕೆಳಗೆ ಇದೆ ನೋಡಿ.

ಇಸಿಜಿ (Electrocardiogram) ಮಾಡಿಸಲು ಆಸ್ಪತ್ರೆಗೆ ಬಂದ ಯುವತಿಯೊಬ್ಬಳ ಜೊತೆ ಅಲ್ಲಿನ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ ಘಟನೆ ಆಂಧ್ರ ಪ್ರದೇಶದ ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ತನಿಖೆ ನಡೆಸಿದ ಪೊಲೀಸರೇ ಇಸಿಜಿ ಕೊಠಡಿ (Electrocardiogram room) ಯಲ್ಲಿ ಜರುಗಿದ ಘಟನೆಯನ್ನು ನೋಡಿ ಒಂದು ಕ್ಷಣ ಆಶ್ಚರ್ಯಕ್ಕೊಳಗಾಗಿದ್ದಾರೆ. ಪಾತಗುಂಟೂರಿನ 19 ವರ್ಷದ ಯುವತಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಅವಳನ್ನು ಪರೀಕ್ಷಿಸಿದ ವೈದ್ಯರೊಬ್ಬರು ಅವಳಿಗೆ ಇಸಿಜಿ ಮಾಡಿಸುವಂತೆ ತಿಳಿಸಿದ್ದರು. ಕಾರಣ ಅವಳು ಗುಂಟೂರು ಸರ್ಕಾರಿ ಆಸ್ಪತ್ರೆಗೆ ಇಸಿಜಿ ಮಾಡಿಸಲು ಬಂದಿದ್ದಳು.

ಇಸಿಜಿ ಕೊಠಡಿಗೆ ಹೋದ ಯುವತಿಗೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹರೀಶ್​ ಎನ್ನುವ ಸಿಬ್ಬಂದಿ, ಮೈಮೇಲೆ ಇರುವ ಬಟ್ಟೆಯನ್ನು ತೆಗೆಯುವಂತೆ ಹೇಳಿದ್ದಾನೆ. ಇದಕ್ಕೆ ಯುವತಿ ಒಪ್ಪದೆ ಇದ್ದಾಗ ”ನಿನ್ನ ಸಮಸ್ಯೆ ಏನು ಎಂದು ತಿಳಿದುಕೋಳ್ಳಬೇಕೆಂದರೆ ನೀನು ಮೈಮೇಲೆ ಇರುವ ಬಟ್ಟೆಗಳನ್ನು ಕಳಚಿ ಬೆತ್ತಲಾಗಲೆಬೇಕು” ಎಂದು ಹೇಳಿದ್ದಾನೆ. ಆದಾಗ್ಯೂ ಯುವತಿ ನಿರಾಕರಿಸಿದ್ದಾಳೆ ಇದರಿಂದ ಹರೀಶ್​ ಬಲವಂತವಾಗಿ ಅವಳ ಬಟ್ಟೆ ತೆಗೆಯುವಂತೆ ಹೇಳಿ ವಿಡಿಯೋ ಚಿತ್ತೀಕರಿಸಿದ್ದಾನೆ. ಇದರಿಂದ ಮನನೊಂದ ಯುವತಿ ಅಲ್ಲಿಂದ ಹೊರಬಂದು ತನ್ನ ಪೋಷಕರೊಂದಿಗೆ ಕೊತ್ತಪೇಟ ಪೊಲೀಸ್​ ಠಾಣೆಗೆ ಆಗಮಿಸಿ ದೂರು ನೀಡಿದ್ದಾಳೆ.

ಸ್ಥಳಕ್ಕೆ ಬಂದ ಪೊಲೀಸರು ತನಿಖೆಗೆ ಮುಂದಾದರು. ತನಿಖೆಗಿಳಿದು ಆರೋಪಿಯ ವಿಚಾರಣೆ ಮಾಡಲು ಮುಂದಾದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಇಸಿಜಿ ಕೊಠಡಿಯಲ್ಲಿ ಶಂಕರ್​ ಎಂಬ ಸಿಬ್ಬಂದಿಯ ಬದಲು ಅನ್ಯವ್ಯಕ್ತಿ ಹರೀಶ್​ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ. ವಿಚಿತ್ರ ಅಂದ್ರೆ ಅವನು ಆಸ್ಪತ್ರೆಯ ಸಿಬ್ಬಂದಿಯೇ ಆಗಿರಲಿಲ್ಲ. ಈ ಕುರಿತು ಶಂಕರ್​ಗೆ ಕರೆಮಾಡಿ ವಿಚಾರಿಸಿದಾಗ ಹರೀಶ್​ ಯಾರು ಎಂಬುದು ಗೊತ್ತಿಲ್ಲ. ಅನಾರೋಗ್ಯ ನಿಮಿತ್ತ ನಾನು ರಜೆ ಹಾಕಿದ್ದೇನೆ. ಇಸಿಜಿ ನೋಡಿಕೊಳ್ಳಲು ತರಬೇತಿ ಟೆಕ್ನಿಷಿಯನ್​ಗೆ ಹೇಳಿದ್ದೆ ಎಂದಿದ್ದಾನೆ. ಈ ಕುರಿತು ವಿಚಾರಿಸಿದ ಪೊಲೀಸರಿಗೆ ಅಲ್ಲಿದ್ದ ವಿದ್ಯಾರ್ಥಿಗಳು ಶಂಕರ್​ನನ್ನು ಕರೆತಂದಿದ್ದಾಗಿ ತಿಳಿದಿದೆ. ಸದ್ಯ ಕಾಮುಕ ಹರೀಶ್​ ಪೊಲೀಸರ ವಶದಲ್ಲಿದ್ದು, ಈ ಕುರಿತು ತನಿಖೆ ಮುಂದುವೆರೆದಿದೆ.

Share This Article
";