ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತ ಚುನಾವಣೆ ನಡೆದರೆ ಸೋಲುತ್ತೇವೆ ಎಂಬ ಬಯದಿಂದ ಅಡ್ಡ ದಾರಿ ಹಿಡಿದ ಬಿಜೆಪಿ ನಾಯಕರು; ಬಸವರಾಜ ದಳವಾಯಿ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಮ್.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ವಿಭಿನ್ನವಾಗಿ ನಡೆದಿದ್ದು ಪಕ್ಷಾತೀತವಾಗಿ ಗ್ರಾಮದ ಸರ್ವೋತೊಮುಖ  ಅಭಿವೃದ್ದಿ ಹಿತದೃಷ್ಟಿಯಿಂದ ನಡೆದಿದೆ.

ಫಲಿತಾಂಶದ ನಂತರದಲ್ಲಿ ಬಿಜೆಪಿ ಬೆಂಬಲಿತ ೦9 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಸ್ಥಳೀಯ ಶಾಸಕರು ಅವರನ್ನು ಅಭಿನಂದಿಸಿರುವುದು ನೂತನ ಚುನಾಯಿತ ಸದಸ್ಯರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಅಸಮಾಧಾನ ಉಂಟು ಮಾಡಿದೆ.

ಸ್ಥಳೀಯ ಗ್ರಾಮದೇವಿ ದೇವಸ್ಥಾನದ ಅಭಿವೃದ್ದಿ ಗಮನದಲ್ಲಿ ಇಟ್ಟುಕೊಂಡು ಪಟ್ಟಣ ಪಂಚಾಯತ ಚುನಾವಣೆಯನ್ನು ಪಕ್ಷಾತೀತವಾಗಿ ಎದುರಿಸಲು ಗ್ರಾಮದ ಹಿರಿಯರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಮತ್ತು ಬಿಜೆಪಿ ಸೇರಿದಂತೆ ಯಾವ ಪಕ್ಷದ ಅಭ್ಯರ್ಥಿ ಬಿ ಫಾರ್ಮ್  ಪಡೆಯದೇ ಪಕ್ಷಾತೀತವಾಗಿ ಚುನಾವಣೆ ಎದುರಿಸಿದ್ದರು.

ಡಿ 30 ರಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಬೆಂಬಲಿತ ೦9 ಜನರನ್ನು ಕೆಲವು ಹಿರಿಯರು (ಬಿಜೆಪಿ ಅನುಯಾಯಿಗಳು) ಸ್ಥಳೀಯ ಶಾಸಕ ಮಹಾಂತೇಶ ದೊಡಗೌಡರ ಅವರ ಬಿಜೆಪಿ ಕಚೇರಿಗೆ ಭೇಟಿ ಮಾಡಿ ಬರೋಣ ಎಂದು ಕರೆದುಕೊಂಡು ಹೋದವರು ಶಾಸಕರ ಕಡೆಯಿಂದ ಕೇವಲ ಮಾಲಾರ್ಪಣೆ  ಮಾಡಿಸಿ ನಮ್ಮ ಒಪ್ಪಿಗೆ ಇಲ್ಲದೆ ಭಾರತೀಯ ಜನತಾ ಪಕ್ಷದ ಮಾಲೆ ಹಾಕುವ ಮೂಲಕ ಎಲ್ಲರೂ ಬಿಜೆಪಿ ಬೆಂಬಲಿತರು ಎಂದು ಹೇಳುತ್ತಿದ್ದಾರೆ. ಇದಕ್ಕೆ ಯಾರ ಒಪ್ಪಿಗೆಯನ್ನು ಪಡೆದಿಲ್ಲ. ಪಟ್ಟಣದ ನಾಗರಿಕರ ಮತ್ತು ಗ್ರಾಮದ ಹಿರಿಯರ ಆಶೋತ್ತರಗಳಿಗೆ ಚ್ಯುತಿ ಉಂಟು ಮಾಡುವ ಕಾರ್ಯ ನಡೆದಿದೆ ಎಂದು ಹೇಳಬಹುದು.

ಚುನಾವಣಾ ಪೂರ್ವ  ಹೇಳಿದಂತೆ ನಡೆದುಕೊಳ್ಳದೆ ಹಿರಿಯರು (ಬಿಜೆಪಿಯವರು) ಗ್ರಾಮದೇವಿಗೆ ಮತ್ತು ಅಯ್ಕೆಯಾದ ಅಭ್ಯರ್ಥಿಗಳಿಗೆ  ಮೋಸ ಮಾಡಿದ್ದಾರೆ ಎಂದು ಸ್ಥಳೀಯ ಮುಖಂಡರೊಬ್ಬರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡು ಅಸಮಾಧಾನ ಹೊರ ಹಾಕಿರುವ ಘಟನೆ ನಡೆದಿದೆ.

ಇದು ಎಂ.ಕೆ. ಹುಬ್ಬಳ್ಳಿ ಪಟ್ಟಣದ ನಾಗರಿಕರಿಗೆ ಮತ್ತು ಕೆಲವು ನಿಷ್ಠಾವಂತ ಹಿರಿಯರಿಗೆ ಮಾಡಿದ ಮೋಸ. ಮುಂದೆ ಇಂತಹ ಸಂದರ್ಭ ಒದಗಿಬಂದರೆ ನಿಮ್ಮ ಮೇಲೆ ಯಾರು ಬರವಸೆ ಇಡುತ್ತಾರೆ ಎಂದು ಪಟ್ಟಣದ ಅನೇಕ ಪ್ರಜ್ಞಾವಂತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ʻʻಗ್ರಾಮದೇವಿಯ ದೈವದ ವತಿಯಿಂದ ಪಕ್ಷಾತೀತವಾಗಿ ಪಟ್ಟಣದಲ್ಲಿ ಚುನಾವಣೆ ಮಾಡೋಣ ಎಂದು ಹೇಳಿದ ತಕ್ಷಣ ಎಲ್ಲಾ ನಾಗರಿಕರು ಸೇರಿಕೊಂಡು ಪಕ್ಷಾತೀತವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿದೆವು. ಡಿ ೩೦ ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕೆಲ ಹಿರಿಯರು (ಬಿಜೆಪಿ ಅನುಯಾಯಿಗಳು) ಆಯ್ಕೆಯಾದ ಅಭ್ರ‍್ಥಿಗಳನ್ನು ಶಾಸಕರ ಬಳಿ ಹೋಗಿ ಬೇಟಿಯಾಗಿ ಬರೋಣ ಎಂದು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಹೋದಮೇಲೆ ಪಕ್ಷಾತೀತ ಎಂದು ಹೇಳಿದ ಹಿರಿಯರು (ಬಿಜೆಪಿ ಅನುಯಾಯಿಗಳು) ಶಾಸಕರ ಕಡೆಯಿಂದ ಹಾರ ಹಾಕಿಸಿ ನಂತರ ಬಿಜೆಪಿಯ ಮಾಲೆಯನ್ನು ಹಾಕಿ ಪಕ್ಷದ ಕರ‍್ಯರ‍್ತರ ರೀತಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಆದರೆ ನಾವು ಯಾರು ಬಿಜೆಪಿ ಪಕ್ಷದ ಅನುಯಾಯಿಗಳಾಗಲಿ ಪಕ್ಷದ ಬೆಂಬಲಿತರಾಗಲಿ ಅಲ್ಲ ಅವರು ನಮ್ಮನ್ನು ಕರೆದುಕೊಂಡು ಹೋಗಿ ಬಿಜೆಪಿ ಮಾಲೆ ಹಾಕಿದ್ದು ನಮಗೆ ಮುಜುಗರವೆನಿಸಿದೆ. ಹಿರಿಯರು (ಬಿಜೆಪಿ ಅನುಯಾಯಿಗಳು) ನಡೆದುಕೊಂಡ ರೀತಿ ಅಷ್ಟೊಂದು ಸರಿ ಕಾಣುತ್ತಿಲ್ಲ ಮತ್ತು ಇದು ಪಟ್ಟಣದ ನಾಗರಿಕರ ಮೇಲೆ ಪರಿಣಾಮ ಆಗುವುದರೊಂದಿಗೆ ಪಟ್ಟಣದ ಪ್ರತಿ ನಾಗರಿಕರಿಗೆ ಮೋಸ ಮಾಡಿದಂತ್ತಾಗಿದೆ.
ನಾವುಗಳು ಯಾವುದೆ ಪಕ್ಷದ ಮುಖಂಡರಾಗಲಿ ಅಥವಾ ಪಕ್ಷದ ಚಿಹ್ನೆಯಿಂದಾಗಲಿ ಆಯ್ಕೆಯಾದವರಲ್ಲ ಪಟ್ಟಣದ ನಾಗರಿಕರ ಅಮೂಲ್ಯವಾದ ಮತಗಳಿಂದ ಆಯ್ಕೆಯಾದವರು ಕಾರಣ ಮತದಾರರು ಹೇಳಿದಂತೆಯೇ ನಾವು ಕೇಳುತ್ತೇವೆ ಮತ್ತು ಅವರು ಹೇಳಿದ ಪಕ್ಷಕ್ಕೆ ಬೆಂಬಲ ನೀಡುತ್ತೇವೆʼʼ.

ಪ್ರಕಾಶ ಗಿರಜಿಮನಿ

ಬಿಜೆಪಿ ನಾಯಕರು ಎಲ್ಲಿ ಚುನಾವಣೆ ನಡೆದರೆ ನಾವು ಸೋಲುತ್ತೇವೆ ಎಂದು ಈ ತರಹದ ಅಡ್ಡ ದಾರಿ ಹಿಡಿದಿದ್ದಾರೆ ನಮ್ಮ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೇವಲ ನಾಲ್ಕೈದು ಬಿಜೆಪಿ ಬೆಂಬಲಿತ ಅಭ್ರ‍್ಥಿಗಳು ಅಯ್ಕೆಯಾಗಿದ್ದಾರೆ. ಆದರೆ ಬಜೆಪಿ ಮುಖಂಡರು ಮತ್ತು ಜನಪ್ರತಿನಿಧಿಗಳು ೧೦ ಜನ ಬಿಜೆಪಿ ಬೆಂಬಲಿತ ಸದಸ್ಯರು ಅಯ್ಕೆಯಾಗಿದ್ದಾರೆ ಎಂದು ಉತ್ತರಕುಮಾರನಂತೆ ಜಂಬಕೊಚ್ಚಿಕೊಳ್ಳುತ್ತಿದ್ದಾರೆ. ಚುನಾವಣೆ ಪರ‍್ವ ಅಭ್ರ‍್ಥಿಗಳ ಅವಿರೋಧ ಆಯ್ಕೆ ಮಾಡುವಾಗ ಪಟ್ಟಣದ ಹಿರಿಯರು (ಬಿಜೆಪಿ ಅನುಯಾಯಿಗಳು) ಬಿಜೆಪಿ ನಾಯಕರುಗಳ ಬಕೇಟ್ ಹಿಡಿಯುವವರಿಗೆ ಮಣಿ ಹಾಕಿದ್ದರು ಇದನ್ನು ಪಟ್ಟಣದ ಕೆಲ ಬಿಜೆಪಿ ಯುವಕರು ನಮಗೂ ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿದರೂ ಕ್ಯಾರೆ ಅನ್ನದೆ ಕಡೆಗಣಿಸಿದರು ಕಿತ್ತೂರು ಮತಕ್ಷೇತ್ರದಲ್ಲಿ ತೇಜಸ್ವಿ ಯುವಕರನ್ನು ಕೇವಲ ಬಾವುಟ ಹಿಡಿದು ತಿರಿಗಾಡಲು ಮತ್ತು ಪಕ್ಷದ ಪೋಸ್ಟ್ರ್ ಅಂಟಿಸಲು ಮಾತ್ರ ಬಳಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಯುವಕರ ಪಕ್ಷ ಎಂಬುದು ಬಾಯಿಮಾತಿನಲ್ಲಿ ಮಾತ್ರ ಉಳಿದೆದೆ.

ಬಸವರಾಜ ದಳವಾಯಿ ಯುವ ಮುಖಂಡರು ಎಂ.ಕೆ.ಹುಬ್ಬಳ್ಳಿ

 

 

 

Share This Article
";