ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ವಿಶ್ವಹಿಂದು ಪರಷತ್ ಹಾಗೂ ಬಜರಂಗದಳ ಚನ್ನಮ್ಮನ ಕಿತ್ತೂರು ತಾಲೂಕಾ ಘಟಕದ ವತಿಯಿಂದ ಶೌರ್ಯ ಜಾಗರಣಾ ರಥಯಾತ್ರೆ ಹಮ್ಮಿಕೊಳಲಾಗಿದೆ.
ನಾಳೆ (ರವಿವಾರ) ಮುಂಜಾನೆ 7 ಗಂಟೆಗೆ ಐತಿಹಾಸಿಕ ರಾಣಿ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಇರುವ ರಾಜಗುರು ಸಂಸ್ಥಾನ ಕಲ್ಮಠದ ಆವರಣದಿಂದ ಪ್ರಾರಂಭವಾದ ಶೌರ್ಯ ಜಾಗರಣ ಯಾತ್ರೆಯು ಕಿತ್ತೂರು ತಾಲೂಕಿನ ಅಂಬಡಗಟ್ಟಿ, ಎಂ. ಕೆ. ಹುಬ್ಬಳ್ಳಿ, ದೇವಗಾಂವ, ಬಸರಕೋಡ. ಬೈಲಹೊಂಗಲ ತಾಲೂಕಿನ ಹೊಳಿ ಹೊಸರು, ಹಾಗೂ ಖಾನಾಪೂರ ತಾಲೂಕಿನ ಪಾರಿಶ್ವಾಡ, ಹಿರೇ ಮುನವಳ್ಳಿ, ಚಿಕ್ಕ ಮುನವಳ್ಳಿ, ಇಟಗಿ, ಬೋಗೂರು, ಗಂದಿಗವಾಡ, ತೇಗೂರು, ಅವರೊಳ್ಳಿ, ಕಡತನಬಾಗೇವಾಡಿ, ಮುಗಳಿಹಾಳ, ಬೀಡಿ, ಭೂರಣಕಿ ಹಾಗೂ ಕಕ್ಕೇರಿ ಗ್ರಾಮಗಳಿಗೆ ತೆರಳಿ ಸಾಯಂಕಾಲ ಮರಳಿ ಕಿತ್ತೂರು ಪಟ್ಟಣಕ್ಕೆ ಆಗಮಿಸಲಿದೆ.
ಸಂಜೆ 6.30 ಕ್ಕೆ ರಾಜಗುರು ಸಂಸ್ಥಾನ ಕಲ್ಮಠದ ಆವರಣದಲ್ಲಿ ಶೌರ್ಯ ಜಾಗರಣ ಬಹಿರಂಗ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಸಾನಿದ್ಯವನ್ನು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಲಿದ್ದು ವಿಶ್ವ ಹಿಂದೂ ಪರಿಷತ್ ಬೆಳಗಾವಿ ವಿಭಾಗ ಸಹ ಕಾರ್ಯದರ್ಶಿ ವಿಠ್ಠಲ ಮಾಳಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಕಿತ್ತೂರು ತಾಲೂಕಾ ಸಹ ಕಾರ್ಯದರ್ಶಿ ಸಾಗರ ಕಾಮಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.