ದಿನಪತ್ರಿಕೆ ಆಹಾರಗಳನ್ನು ಹಾಕಿ ಕೊಡುವುದು, ಕಟ್ಟಿ ಕೊಡುವುದು, ಸಂಗ್ರಹಿಸುವುದನ್ನು ನಿಲ್ಲಿಸಬೇಕು;FSSAI ಎಚ್ಚರಿಕೆ.

ಸುದ್ದಿ ಸದ್ದು ನ್ಯೂಸ್ 

ಬೆಂಗಳೂರು : ದಿನಪತ್ರಿಕೆ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಆಹಾರಗಳನ್ನು ಹಾಕಿ ಕೊಡುವುದು, ಕಟ್ಟಿ ಕೊಡುವುದು, ಸಂಗ್ರಹಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಾರಾಟಗಾರರಿಗೆ ತಾಕೀತು ಮಾಡಿದೆ‌.

ಆಹಾರಗಳನ್ನು ಪತ್ರಿಕೆಗಳಲ್ಲಿಟ್ಟು ಕೊಡುವುದು, ಸಂಗ್ರಹಿಸುವುದು ಅನೇಕ ಜನರಲ್ಲಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಹೀಗಾಗಿ ಮಾರಾಟಗಾರರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು FSSAI ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಮಲಾ ವರ್ಧನಾ ರಾವ್ ಅವರು ಆದೇಶಿಸಿದ್ದಾರೆ.

ಈ ನಿಯಮಾವಳಿಯನ್ನು FSSAI, ರಾಜ್ಯ ಆಹಾರ ಸುರಕ್ಷತೆ ಸಕ್ಷಮ ಪ್ರಾಧಿಕಾರಗಳ ಜೊತೆ ಜಂಟಿಯಾಗಿ ನಿಗಾ ಇಡಲಿದೆ ಎಂದು ಹೇಳಿದ್ದಾರೆ.

ಪತ್ರಿಕೆಗಳಿಗೆ ಬಳಸುವ ಇಂಕ್‌ನಲ್ಲಿ ಸೀಸ ಇನ್ನಿತರ ರಸಾಯನಿಕಗಳು ಇರುವುದರಿಂದ ಇವು ಆಹಾರಗಳ ಮೂಲಕ ಮಾನವ ದೇಹವನ್ನು ಸೇರುವ ಸಂಭವವಿದೆ. ಹಾಗಾಗಿ ಆಹಾರಗಳನ್ನು ಹಾಕಿ ಕೊಡಲು, ಸಂಗ್ರಹಿಸಲು ಪತ್ರಿಕೆಗಳನ್ನು ಬಳಸಬಾರದು. ಬದಲಿಗೆ ಆರೋಗ್ಯಕರ ಉತ್ಪನ್ನಗಳನ್ನು ಬಳಸಬೇಕು ಎಂದು ಮಾರಾಟಗಾರರಿಗೆ ಸಲಹೆ ನೀಡಿದೆ.

ಆಹಾರದಲ್ಲಿನ ಎಣ್ಣೆ ಪತ್ರಿಕೆಗಳಿಗೆ ಬಳಸಲಾದ ಇಂಕ್‌ನಲ್ಲಿನ ರಸಾಯನಿಕಗಳನ್ನು ಹೀರುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು ಮಾನವನಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರುವುದು ಎಂದು FSSAI ಎಚ್ಚರಿಸಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";