ಬೆಳಗಾವಿಯಲ್ಲಿ ರವಿವಾರ ದಿ. 24 ರಂದು ಸ್ವರ-ಸಾಹಿತ್ಯ-ಸಂಗಮ “ಭಾವಮಂಗಳ” ಧ್ವನಿ ತಟ್ಟೆ ಲೋಕಾರ್ಪಣೆ

ಉಮೇಶ ಗೌರಿ (ಯರಡಾಲ)

ಬೆಳಗಾವಿ 21 : ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ರಚಿಸಿದ ಭಕ್ತಿ ಗೀತೆ, ನಾಡ ಗೀತೆ, ಜಾನಪದ ಗೀತೆ ಮತ್ತು ಬಾವ ಗೀತೆಯನ್ನೊಳಗೊಂಡ ಸುಮಾರು 20 ಹಾಡುಗಳ “ಭಾವಮಂಗಳ” ಧ್ವನಿತಟ್ಟೆ ರವಿವಾರ ದಿ.24 ರಂದು ಸಂಜೆ 4 ಗಂಟೆಗೆ ನಗರದ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಲಾದ ಭವ್ಯ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳಗಾವಿ ಕಾರಂಜಿಮಠದ ಶ್ರೀ.ಮ.ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕೆ.ಎಲ್.ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ “ಸ್ವರ-ಸಾಹಿತ್ಯ-ಸಂಗಮ” ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಪರಾಧ ವಿಭಾಗದ ಡಿ.ಸಿ.ಪಿ ಪಿ.ವಿ.ಸ್ನೇಹಾ, ಕೆ.ಎಲ್.ಇ ನಿರ್ದೇಶಕ ಶ್ರೀಶೈಲ ಮೆಟಗುಡ್ಡ ಮತ್ತು ಬೆಳಗಾವಿ ರಾಣಿ ಚೆನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ರೀಮತಿ ಆಶಾ ಕೋರೆ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ದ್ವನಿ ತಟ್ಟೆ ಸಂಗೀತ ನಿರ್ದೇಶಕ, ಗಾಯಕ ಶಿಕ್ಷಕ ಕುಮಾರ ಕಡೇಮನಿ, ಕೆ.ಎಲ್.ಇ ಸಂಗೀತ ಮಹಾವಿದ್ಯಾಲಯದ ಅಧ್ಯಾಪಕ ಯಾದವೇಂದ್ರ ಪೂಜಾರಿ, ಡಿ.ಜೆ. ಸಮರ್ಥ, ಕೆ.ಎಲ್.ಇ ಸಂಗೀತ ಮಹಾವಿದ್ಯಾಲಯದ ಅಧ್ಯಾಪಕಿ ಡಾ. ಸುನೀತಾ ಪಾಟೀಲ ಗಾನ ಸಂಗೀತ ಸಂಯೋಜಿಸಲಿದ್ದಾರೆ.

ಅರುಣ ಶಿರಗಾಪುರ, ಮುರಗೇಶ ಶಿವಪೂಜಿ, ರಾಹುಲ ಮಂಡೋಲ್ಕರ, ಬಾಳನಗೌಡ ದೊಡ್ಡಬಂಗಿ, ಶಾಂತಾರಾಮ ಎಂಟೆತ್ತಿನವರ, ಲಕ್ಮೀ ಪಾಟೀಲ,  ಪ್ರತಿಭಾ ಕಳ್ಳಿಮಠ, ಡಾ. ಹೇಮಾ ಪಾಟೀಲ,  ಸ್ವಾತಿ ಹುದ್ದಾರ, ನಂದಿತಾ ಮಾಸ್ತಿಹೊಳಿಮಠ, ಜ್ಯೋತಿ ಬಿರಾದಾರ, ಡಾ. ದರ್ಗಾ ನಾಡಕರ್ಣಿ, ವಿದ್ಯಾ ಹೆಗಡೆ,  ಲೀನಾ ಕೋಳಿ, ಶಿವಾಂಗಿ ಶರ್ಮಾ, ಸ್ಮೀತಾ ಕುಲಕರ್ಣಿ,  ಸುಜಾತಾ ಕಲ್ಮೇಶ, ಕಾಜಲ ಧಾಮನೇಕರ, ರೂಪಾ ವಸ್ತ್ರದ, ಜಯಶ್ರೀ ನಾಯಕ,ಉಜ್ವಲಾ ದೇಶಪಾಂಡೆ,ಅನುರೀಟಾ ಭಿಕಾಜಿ, ಲಕ್ಮೀ ಮೂಗಡ್ಲಿಮಠ,  ಸವಿತಾ ಗುಡ್ಡೀನ, ಒಳಗೊಂಡಂತೆ ಅನೇಕ ಗಾಯಕ ಗಾಯಕಿಯರು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ರಚಿಸಿದ ಭಕ್ತಿ ಗೀತೆ, ನಾಡ ಗೀತೆ, ಜಾನಪದ ಗೀತೆ ಮತ್ತು ಬಾವ ಗೀತೆಯನ್ನೊಳಗೊಂಡ ವಿಭಿನ್ನ ಹಾಡುಗಳನ್ನು ಹಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಸರ್ವರಿಗೂ ಪ್ರವೇಶ ಉಚಿತವಿದ್ದು ಸಾಹಿತ್ಯ ಸಂಗೀತ ಪ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
";