ಬಾಯ್ ಫ್ರೆಂಡ್ ಟಾರ್ಚರ್​ಗೆ ಬೇಸತ್ತು ಸಾವೀಗೀಡಾದಳಾ ಪಿಯುಸಿ ಓದುತ್ತಿದ್ದ ಯುವತಿ.!

ಉಮೇಶ ಗೌರಿ (ಯರಡಾಲ)

ಬೀದರ್​ : ಬಾಯ್ ಫ್ರೆಂಡ್ ಟಾರ್ಚರ್​ಗೆ ಬೆಸತ್ತು ಪಿಯುಸಿ ಓದುತ್ತಿದ್ದ ಬಾಲಕಿಯೋರ್ವಳು ಮನೆಯಲ್ಲಿಯೇ ನೇಣು ಬಿಗಿದುಕೊಂಡು  ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಬಾಲಕಿ ಆತ್ಮಹತ್ಯೆ ಮಾಡಿಕೊಂಡ ವಾರದ ಬಳಿಕ ವಿಚಾರ ಬೆಳೆಕಿಗೆ ಬಂದಿದೆ. ಈ ಕುರಿತಾಗಿ ಆತ್ಮಹತ್ಯೆಗೆ ಪ್ರಚೋಧನೆ ಕೊಟ್ಟ ಯುವಕನ ಮೇಲೆ ದೂರು ಕೊಡಲು ಹೋದರೆ, ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲವಂತೆ. ಹೌದು, 2023 ಅಗಷ್ಟ್ 17 ರಂದು ಬೀದರ್ ಜಿಲ್ಲೆಯ ಚಿಟಗುಪ್ಪಾ ಬೆಮಳಖೇಡ ಗ್ರಾಮದ ತನ್ನ ಮನೆಯಲ್ಲಿಯೇ ಪ್ರಿಯಾಂಕಾ(17) ಆತ್ಮಹತ್ಯೆಗೆ ಶರನಾಗಿದ್ದಳು.

ಹೀಗೆ ತನ್ನ ಮಗಳ ಪೋಟೋ ಹಿಡಿದುಕೊಂಡು ಅಳುತ್ತಾ ಕುಳಿತಿರುವ ಈ ತಾಯಿಯ ಹೆಸರು ಗಂಗಮ್ಮ, ತನ್ನ ಮಗಳ ಸಾವಿನ ನ್ಯಾಯಕ್ಕಾಗಿ ಎಸ್ಪಿ ಕಛೇರಿಗೆ ಓಡಾಡುತ್ತಿದ್ದಾಳೆ. ಇನ್ನು ತನ್ನ ಮಗಳ ಸಾವಿಗೆ ಇದೆ ಗ್ರಾಮದ ಅಂಬ್ರೇಷ್ ಎಂಬಾತ ಕಾರಣವಂತೆ. ಹೌದು, ಕಳೆದೊಂದು ವರ್ಷದಿಂದ ಇವರಿಬ್ಬರು ಪ್ರೀತಿಸುತ್ತಿದ್ದರು, ಅದೇ ಪ್ರೀತಿಯ ಸಲುಗೆಯಿಂದ ಇಬ್ಬರು ಪೋಟೋ ತೆಗೆಸಿಕೊಂಡಿದ್ದಾರೆ. ಕೆಲವು ವಿಡಿಯೋಗಳನ್ನು ಕೂಡ ಆ ಯುವಕ ಮಾಡಿಕೊಂಡು ತನ್ನ ಮೊಬೈಲ್​ನಲ್ಲಿ ಇಟ್ಟುಕೊಂಡಿದ್ದಾರೆ.

ನಂತರ ಪ್ರೀಯಾಂಕಾಳಿಗೆ ಹಣ ಕೊಂಡುವಂತೆ ಹೆದರಿಸಲು ಶುರುಮಾಡಿದ್ದಾನೆ. ಹಣ ಕೊಡದೆ ಹೋದರೆ, ನಾನು ನೀನು ಮಾತನಾಡಿರುವ ಆಡಿಯೋ, ವಿಡಿಯೋ ಹಾಗೂ ಪೋಟೋಗಳನ್ನು ವಾಟ್ಸಪ್, ಪೇಸ್​ ಬುಕ್​ನಲ್ಲಿ ಅಫ್ ಲೋಡ್ ಮಾಡಿ ನಿನ್ನ ಮಾನ ಕಳೆಯುವೆ ಎಂದು ಹೆದರಿಸಲು ಶುರು ಮಾಡಿದ್ದಾನೆ. ಅವನ ಕಿರುಕುಳಕ್ಕೆ ಹೆದರಿ ಸರಿ ಸುಮಾರು 30 ಸಾವಿರದ ವರೆಗೆ ಹಣವನ್ನು ಪೋನ್ ಪೇ ಮಾಡಿದ್ದಾಳೆ. ಕೇಳಿದಾಗೊಮ್ಮ ಹಣ ಕೊಡಲು ಶುರುಮಾಡಿದ ಪ್ರಿಯಾಂಕಾಗೆ ಹಣ ಕೊಡುತ್ತಾಳೆಂದು ತಿಳಿದ ಅಂಬ್ರೇಷ್ ಪದೇ ಪದೇ ಹಣ ಕೊಡುವಂತೆ ಪೀಡಿಸಲು ಶುರುಮಾಡಿದ್ದಾನೆ.

ಇದಕ್ಕೆ ಬೇಸತ್ತು ಹಣ ಕೊಡಲಾಗದೇ ಹೋದರೆ, ಎಲ್ಲಿ ನಾನು ಅವನ ಜೊತೆಗೆ ಮಾತನಾಡಿದ ಆಡಿಯೋ ಹಾಗೂ ಜೊತೆಗೆ ಇದ್ದ ಪೋಟೋವನ್ನು ಫೇಸ್​ಬುಕ್​ಗೆ ಅಪ್​ಲೋಡ್ ಮಾಡುತ್ತಾನೊ ಎಂದು ತಿಳಿದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳಿಗೆ ನ್ಯಾಯ ಬೇಕು, ನ್ಯಾಯಕೊಡಿಸಿ ಎಂದು ತಾಯಿ ಗಂಗಮ್ಮ ಪೊಲೀಸರಿಗೆ ಮನವಿ ಮಾಡುತ್ತಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡಿರುವ ಪ್ರಿಯಾಂಕಾ ಏಕೈಕ ಪುತ್ರಿಯಾಗಿದ್ದು, ಮನೆಯಲ್ಲಿ ಚನ್ನಾಗಿಯೇ ಬೆಳೆಸಿದ್ದರು. ಆದರೆ, ಇದೆ ಊರಿನ ಅಂಬ್ರೇಷ್ ಅನ್ನೋ ಯುವಕ ತಂಗಿ ಎನ್ನುತ್ತಲೇ ಪ್ರೀಯಾಂಕಾ ಜೊತೆಗೆ ಮಾತನಾಡುತ್ತಿದ್ದ. ಆದರೆ, ಪೋನ್​ನಲ್ಲಿ ಮಾತ್ರ ಇಬ್ಬರು ಪ್ರೇಮಿಗಳ ಹಾಗೇ ಮಾತನಾಡುತ್ತಿದ್ದರು. ಇದ್ಯಾವ ವಿಚಾರವೂ ಕೂಡ ಮನೆಯವರಿಗೆ ಗೊತ್ತಾಗಿರಲಿಲ್ಲ. ಆದರೆ, ಅಂಬ್ರೇಷ್ ಮಾತ್ರ ಈಕೆಯ ಜೊತೆಗೆ ಇರುವ ಪೋಟೋ ಹಾಗೂ ಆಡಿಯೋವನ್ನ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ್ದ. ಇದರಿಂದ ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೇಸ್​ ದಾಖಲಿಸಿದ ಪೊಲೀಸರು:

ಆತ್ಮಹತ್ಯೆ ಮಾಡಿಕೊಂಡು ವಾರದ ಬಳಿಕೆ ಆಕೆಯ ಪೋನ್ ಚೇಕ್ ಮಾಡಿದಾಗ ಪ್ರಿಯಾಂಕಾ ಅಂಬ್ರೇಷಗೆ ಹಣ ಹಾಕಿರುವ ಮಾಹಿತಿ ಸಿಕ್ಕಿದೆ. ಜೊತೆಗೆ ಕೆಲವು ಪೋಟೋಗಳು ಕೂಡ ಸಿಕ್ಕಿದ್ದು, ಇನ್ನೂ ಆತನ ಜೊತೆಗೆ ಮಾತನಾಡಿರುವ ಆಡೀಯೋ ಕೂಡ ಸಿಕ್ಕದೆ. ಹೀಗಾಗಿ ವಾರದ ಬಳಿಕ ಮಗಳ ಸಾವಿಗೆ ಕಾರಣರಾದ ಅಂಬ್ರೇಷ್ ಮೇಲೆ ಕೇಸ್ ಕೊಡಲು ಹೋದರೆ ಪೊಲೀಸರು ಕೇಸ್ ತೆಗೆದುಕೊಳ್ಳುತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ದಿನ ನಮಗೆ ಕಂಪ್ಲೇಟ್ ಕೊಡಬಹುದಿತ್ತು. ಆದರೆ, ವಾರದ ಬಳಿಕ ನಾವು ಕಂಪ್ಲೇಟ್ ತೆಗೆದಕೊಳ್ಳುವುದಿಲ್ಲ ಎಂದು ಪೊಲೀಸರು ಹೇಳುತ್ತಿರುವುದು ಈ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಒಬ್ಬ ಯುವಕನ ಹಣದ ದಾಹಕ್ಕೆ ಬದುಕಿ ಬಾಳಬೇಕಾಗಿದ್ದ ಯುವತಿಯೊಬ್ಬಳು ಸಾವೀಗೀಡಾಗಿದ್ದಾಳೆ. ಆದರೆ, ಈ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾದ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದು ಹೆಣ್ಣು ಹೆತ್ತವರ ದುಃಖ ಹೆಚ್ಚಿಸುವಂತೆ ಮಾಡಿದೆ. ಇದ್ದಕ್ಕಿದ್ದಂತೆ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಈ ಸಾವಿನ ಮರ್ಮವನ್ನು ಪೊಲೀಸರು ತನಿಖೆ ಮೂಲಕ ಬಯಲಿಗೆ ತರಬೇಕಿದೆ.

 

 

 

 

ಕೃಪೆ:ಟಿವಿ9

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";