ಮಿಸಲಾತಿ ಹಕ್ಕೊತ್ತಾಯಿಸಿ ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ ಜರುಗಿತು

ಪೂರ್ವಭಾವಿ ಸಭೆಯಲ್ಲಿ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿದರು
ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್‌

ವರದಿ: ಬಸವರಾಜ ಚಿನಗುಡಿ ಕಿತ್ತೂರು.

ನ್ನಮ್ಮನ ಕಿತ್ತೂರು:ಸೆ 10 ರಂದು ನಿಪ್ಪಾನಿಯಲ್ಲಿ ನಡೆಯುವ ಲಿಂಗಾಯತರಿಗೆ ರಾಜ್ಯ ಸರ್ಕಾರವು 2ಎ ಮಿಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದ ಓಬಿಸಿ ಮಿಸಲಾತಿಗೆ ಸೇರ್ಪಡೆಗೊಳಿಸಿ ಶಿಪಾರಸ್ಸು ಮಾಡುವಂತೆ  ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಸಮೂಹಿಕ ಇಷ್ಟಲಿಂಗ ಪೂಜೆ ಮಾಡುವುದರೊಂದಿಗೆ ಮತ್ತೆ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡು ಇರುವ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಜರುಗಿದ ಮಿಸಲಾತಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಿಸಲಾತಿ ಹೋರಾಟದಿಂದ ಲಿಂಗಾಯತ ಪಂಚಮಸಾಲಿ ಸಮಾಜದ ಸ್ವಾಭಿಮಾನ ಮತ್ತು ಆತ್ಮ ವಿಶ್ವಾಸ ಹೆಚ್ಚಾಗಿದ್ದು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ನೆಲೆ ಕಂಡುಕೊಂಡಿದ್ದು ವಿವಿಧ ರಂಗಗಳಲ್ಲಿ ನಮ್ಮ ಸಮಾಜದ ಮುಖಂಡರನ್ನು ಗುರುತಿಸುವ ಕಾರ್ಯಗಳು ಆಗುತ್ತಿವೆ. ಈ ಹಿಂದೆ ನಮ್ಮ ಸಮಾಜದವರು ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಹೋರಾಟ ಮಾಡಿದ್ದಾರೆ, ಮಿಸಲಾತಿಗಾಗಿ ಎಂದೂ ಹೋರಾಟ ಮಾಡಿಲ್ಲ ಎಂದ ಅವರು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬದ್ದತೆಯಿಂದ ಕೂಡಿದವರಾಗಿದ್ದು ಮನಸ್ಸು ಮಾಡಿದರೆ ಮಿಸಲಾತಿ ಕೊಡಬಹುದು ಎಂದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಚನ್ನಮ್ಮನ ಕಿತ್ತೂರು ತಾಲೂಕ ಘಟಕದ ಅಧ್ಯಕ್ಷ ಡಿ ಆರ್ ಪಾಟೀಲ ಮಾತನಾಡಿ ಮಿಸಲಾತಿಗಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಹಿಂದಿನ ಮತ್ತು ಇಂದಿನ ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡುತ್ತಾ ಬಂದರೆ ವಿನಹ ಮಿಸಲಾತಿ ನೀಡಲಿಲ್ಲ ಹಾಗಾಗಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮಿಸಲಾತಿ ನೀಡಲಿ ಎಂಬ ಉದ್ದೇಶದಿಂದ ಸರ್ಕಾರದ ಕಣ್ಣು ತೆರಸಬೇಕಾಗಿದೆ ಆದ್ದರಿಂದ ಸೆ 10 ರಂದು ಮುಂಜಾನೆ 10 ಗಂಟೆಗೆ ನಿಪ್ಪಾಣಿಯಲ್ಲಿ ಮಿಸಲಾತಿ ಹೋರಾಟಕ್ಕೆ ಚಾಲನೆ ನೀಡುವ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಸಹಸ್ರ ಸಂಖ್ಯೆಯಲ್ಲಿ ಕಿತ್ತೂರು ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಭಾಗವಹಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ ಅಧಿಕಾರ ಇಂದು ಬರಬಹುದು ನಾಳೆ ಹೋಗಬಹುದು ನಾವು ಯಾವತ್ತು ಸಮಾಜದ ಏಳಿಗೆಗಾಗಿ ಸಮಾಜದ ಹಾಗೂ ಶ್ರೀಗಳ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.

ಈ ವೇಳೆ ಉದ್ಯಮಿಗಳಾದ ಚಂದ್ರಗೌಡ ಪಾಟೀಲ ಹಾಗೂ ನಿಂಗನಗೌಡ ಪಾಟೀಲ ಮಾತನಾಡಿದರು.

ಈ ವೇಳೆ ಕಿತ್ತೂರು ತಾಲೂಕಾ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ಬಸವರಾಜ ಚಿನಗುಡಿ, ಪಂಚಸೇನಾ ಅಧ್ಯಕ್ಷ ದೊಡ್ಡಗೌಡ ಹುಚ್ಚಗೌಡರ, ಶಂಕರ ಹೊಳಿ, ಚಿಂತು ಮರಡಿ, ಮಂಜುಳಾ ಕಾಪ್ಸೆ, ವಿನಾಯಕ ಮರಡಿ, ಮುದಕಪ್ಪ ಮರಡಿ, ನಿಂಗಪ್ಪ ಕೂಗಟಿ, ಸೇರಿದಂತೆ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಮುಖರು ಇದ್ದರು

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";