ಹುಡುಗಿಯರನ್ನ ನೋಡಲ್ಲ, ಆಂಟಿಯರು ಸಿಕ್ರೆ ಬಿಡಲ್ಲ..ಅನ್ನುವ ದುಷ್ಟ ಕಾಮುಕ ಅರೆಸ್ಟ್…!

ಬೆಂಗಳೂರು: ಈಗಂತೂ ಕೆಲವು ಮಹಿಳೆಯರು ಗಂಡ-ಮಕ್ಕಳನ್ನ ಮರೆಮಾಚಿ ಇನ್ನೂ ಮದುವೆನೇ ಆಗಿಲ್ಲ ಅನ್ನೋ ರೇಂಜ್‌ಗೆ ಚಂದದ ಫೋಟೋಗಳನ್ನ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ಚಂದದ ಆಂಟಿಯರನ್ನೇ ಟಾರ್ಗೆಟ್‌ ಮಾಡಿ ಖೆಡ್ಡಗೆ ಬೀಳಿಸಿ, ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದ ಯುವಕನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ

ಹುಡುಗಿಯರ ಕಡೆಗೆ ತಿರುಗಿ ಕೂಡ ನೋಡುತ್ತಿರಲಿಲ್ಲ, ಮದುವೆ ಆಗಿದ್ದ ಚಂದದ ಆಂಟಿಯರೇ ಈತನ ಟಾರ್ಗೆಟ್‌, ಮದುವೆಯಾದ ಮಹಿಳೆಯರು ಸಿಕ್ಕರೆ ಬಿಡೋ ಪ್ರಶ್ನೇನೇ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ  ಗಾಳ ಹಾಕ್ತಿದ್ದ, ಖೆಡ್ಡಗೆ ಬೀಳಿಸಿ ಮಾನ ಹರಾಜು ಹಾಕುವುದಾಗಿ ಬೆದರಿಕೆ ಕೂಡ ಹಾಕ್ತಿದ್ದ. ಅಂತಹ ಒಬ್ಬ ಕಾಮುಕ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು. ಅಸ್ಸಾಂ ಮೂಲದ ಫೈ‌ಸಲ್‌ ಎಂಬ ಯುವಕ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದ ಫೈಸಲ್ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಓಪನ್ ಮಾಡುತ್ತಿದ್ದ. ಈ ನಕಲಿ ಖಾತೆ ಮೂಲಕ ಮದುವೆ ಆಗಿರೋ ಚೆಂದದ ಆಂಟಿಯರನ್ನ ಟಾರ್ಗೆಟ್‌ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ. ಈತನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಮೇಲೆ ದಿನ ರಾತ್ರಿಯಾದ್ರೆ ಸಾಕು ಹಾಯ್, ಗುಡ್ ಮಾರ್ನಿಂಗ್, ಗುಡ್ ನೈಟ್ ಮಸೇಜ್‌ಗಳಿಂದ ಶುರುವಾಗಿ ಮಹಿಳೆಯರಿಗೆ ಸ್ವಾತಂತ್ರ್ಯ, ಗಂಡಂದಿರ ದೌರ್ಜನ್ಯ ಅಂತಾ ಉದ್ದೂದ್ದ ಭಾಷಣ ಬಿಗಿದು ನೈಸಾಗಿ ಖೆಡ್ಡಕ್ಕೆ ಬೀಳಿಸಿಕೊಳ್ತಿದ್ದ. ಅದು ಎಷ್ಟರಮಟ್ಟಿಗೆ ಅಂದ್ರೆ ತನ್ನ ಖಾಸಗಿ ಜಾಗಕ್ಕೆ ಕರೆಸಿಕೊಂಡು ಅವರ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿ ಅದನ್ನ ಯಾರಿಗೂ ಗೊತ್ತಾಗದ ಹಾಗೇ ವೀಡಿಯೋ ಕೂಡ ಮಾಡಿಕೊಳ್ಳುತ್ತಿದ್ದ.

ಇದಾದ ಕೆಲ ದಿನಗಳ ನಂತರ ಆ ಆಂಟಿಯರಿಗೆ ಕರೆ ಮಾಡ್ತಿದ್ದ  ಫೈಸಲ್, ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ, ಆಮೇಲೆ ಲಕ್ಷ ಲಕ್ಷ ಹಣ ಕೇಳೋಕೆ ಶುರುಮಾಡ್ತಿದ್ದ. ಗಾಬರಿಯಾದ ಆಂಟಿಯರು, ಹಣ ಕೊಡಲ್ಲ, ಬರೋದು ಇಲ್ಲ ಅಂತಾ ಅಂದ್ರೆ ದೈಹಿಕ ಸಂಪರ್ಕದ ವೀಡಿಯೋ ಕಳಿಸಿ ನಿನ್ನ ಗಂಡನಿಗೆ ಕಳಿಸ್ತೀನಿ. ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಹಾಕ್ತೀನಿ ಅಂತಾ ಬೆದರಿಕೆ ಹಾಕ್ತಿದ್ದ.

ಇಂತಹ ಪ್ರಕರಣದಿಂದ ಬೇಸತ್ತ ಹೆಚ್‌ಎಸ್‌ಆರ್ ಬಡಾವಣೆಯ ಮಹಿಳೆಯೊಬ್ಬರು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಮಹಿಳೆಯಿಂದ ಮಸೇಜ್ ಮಾಡಿ ಲೊಕೆಷನ್‌ ಹೇಳೋಕೆ ಹೇಳಿದ್ದಾರೆ. ಆಗ ಕಾಮುಕ ಚೆನ್ನೈನ ಒಂದು ಲಾಡ್ಜ್‌ಗೆ ಬರೋಕೆ ಹೇಳಿದ್ದಾನೆ. ಆ ಮಹಿಳೆ ಬರುತ್ತಾಳೆ ಎಂದು ಕಾದು ಕುಳಿತಿದ್ದ ಫೈಸಲ್‌ನನ್ನು ಬೆಂಗಳೂರು ಪೊಲೀಸರು ಎಡೆಮುರಿ ಕಟ್ಟಿದ್ದಾರೆ.

ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರಿಗೆ ಈತ ಈ ಹಿಂದೆಯೂ ಇದೇ ರೀತಿಯ ಕೃತ್ಯಗಳನ್ನ ಎಸೆಗಿರುವ ಬಗ್ಗೆ ಮೊಬೈಲ್‌ನಲ್ಲಿ ಒಂದಷ್ಟು ಸಾಕ್ಷಿಗಳು ಸಿಕ್ಕಿವೆ. ತನಿಖೆ ಮುಂದುವರಿದಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";