ಹಾಲಿ ಹಾಗೂ ಮಾಜಿ ಸಿ.ಎಂ,ಗಳಿಂದ:- ಮುರುಗೇಶ ನಿರಾಣಿ ಗುಣಗಾನ!.

ಉಮೇಶ ಗೌರಿ (ಯರಡಾಲ)

ಬೆಂಗಳೂರು,(ಅ.11)- ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್ ನಿರಾಣಿ ಅವರು ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಯಶೋಗಾಧೆ’ ಯನ್ನು ‌ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಗುಣಗಾನಕ್ಕೆ ವೇದಿಕೆ ಸಾಕ್ಷಿಯಾಯಿತು.

ಇಂತಹ ಅಪರೂಪದ ಸಮಾರಂಭಕ್ಕೆ ಸಾಕ್ಷೀಯಾಗಿದ್ದು, ಬೆಂಗಳೂರಿನ ಅರಮನೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಉದ್ಯಮಿಯಾಗು ಉದ್ಯೋಗ ನೀಡು, ಹಾಗೂ ಕೈಗಾರಿಕಾ ಆದಾಲತ್ ಕಾರ್ಯಕ್ರಮ.

ಕಾರ್ಯಕ್ರಮದಲ್ಲಿ ಮಾತನಾಡಿದ ಹಾಲಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ‌ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ‌ಅವರುಗಳು ಸಚಿವ ‌ನಿರಾಣಿ ಅವರು ನಡೆದು ಬಂದ‌ ದಾರಿ‌ ಹಾಗೂ ಯಶಸ್ವಿ ಉದ್ಯಮಿಯಾಗಿ ಅವರು ಕೈಗಾರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು
ಉಭಯ ನಾಯಕರು ಮುಕ್ತ ಕಂಠದಿಂದ ಶ್ಲಾಘಿಸಿದರು.

ಮೊದಲು ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ‌ಬಿ. ಎಸ್. ಯಡಿಯೂರಪ್ಪ ಅವರು, ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ ವನ್ನು ನಡೆಸಿ ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಉದ್ಯಮಿಗಳು ಹಾಗೂ ಹೂಡಿಕೆದಾರರು ಕರ್ನಾಟಕದತ್ತ ಬರುವಂತೆ ಮಾಡಿದ್ದರು. ಈಗಲೂ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿದರು.

ಹಲವು ಸುಧಾರಣಾ ಕ್ರಮಗಳ ಪರಿಣಾಮ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. ಇದೀಗ ಯುವ ಉದ್ಯಮಿಗಳನ್ನು ಸೃಷ್ಟಿಸಲು ಮತ್ತು ಕೈಗಾರಿಕಾ ವಿವಾದಗಳನ್ನು ಬಗೆಹರಿಸಲು ಆದ್ಯತೆ ನೀಡುವ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಚಿವ ‌ನಿರಾಣಿ ಶ್ರಮಿಸುತ್ತಿರುವುದು ಶ್ಲಾಘನೀಯ”ಎಂದರು.

ಸಿಎಂ ಬಸವರಾಜ ಬೊಮ್ಮಯಿ ಅವರು,ನಾನು ಮತ್ತು ನಿರಾಣಿ ಅವರು ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ಅವರು ನನಗಿಂತ ನಾಲ್ಕು ‌ವರ್ಷ ಚಿಕ್ಕವರು. ಆದರೆ ಇಂದು ಕೈಗಾರಿಕೆಯಲ್ಲಿ ಅವರು ನನಗಿಂತಲೂ ಬಹಳ ‌ದೊಡ್ಡವರಾಗಿ ‘ ಬೆಳೆದಿದ್ದಾರೆ ಎಂದು ‌ಕೊಂಡಾಡಿದರು.

ಸಣ್ಣ ಮಟ್ಟದಲ್ಲಿ ಉದ್ಯಮ ಸ್ಥಾಪಿಸಿ ಅದನ್ನೇ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿರುವ ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಅವರೇ ನಮ್ಮೆಲ್ಲರಿಗೂ ಉತ್ತಮ ಉದಹಾರಣೆ. ಅವರು ನಡೆದು ಬಂದ ಹಾದಿಯೇ ಯುವ ಜನರಿಗೆ ಪಾಠವಾಗಲಿದೆ ಎಂದು ಯುವ ಸಮೂಹಕ್ಕೆ ಕರೆ ನೀಡಿದರು.

ದೇಶದಲ್ಲೇ ಎರಡನೇ ಅತೀ ದೊಡ್ಡ ಸಕ್ಕರೆ ಉತ್ಪಾದನೆ ಹಾಗೂ ಒಂದು ‌ದಿನಕ್ಕೆ‌ 25 ಲಕ್ಷ ‌ಎಥಿನಾಲ್ ಉತ್ಪಾದನೆ ಮಾಡುವ ಏಕೈಕ ‌ಸಂಸ್ಥೆ‌ ಎಂದರೆ ಅದು ನಿರಾಣಿ ಅವರ ಒಡೆತನದ ‌ಕೈಗಾರಿಕೆ. ಇಲ್ಲಿ ಸೇರಿರುವ ಯುವ ಸಮುದಾಯಕ್ಕೆ ‌ನಿರಾಣಿ ಅವರೇ ‘ ಆದರ್ಶ ಕೈಗಾರಿಕೋದ್ಯಮಿ’. ನಿಮಗೆ ‌ಅವರೇ ಪ್ರೇರಣೆಯಾಗಬೇಕು ಎಂದು ‌ಸಿಎಂ ಹೇಳುತ್ತಿದ್ದಂತೆ ಸಭೆಯಲ್ಲಿ ಚಪ್ಪಾಳೆಗಳ ಕರಾಡತನ ಮುಗಿಲು ಮುಟ್ಟಿತ್ತು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";