Friday, September 20, 2024

ಕಿತ್ತೂರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ ಜಗದೀಶ ಹಾರುಗೊಪ್ಪ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಬುಧುವಾರ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಡಾ ಜಗದೀಶ ಹಾರೋಗೊಪ್ಪ ಚುನಾವಣೆ ಅಧಿಕಾರಿ ರೇಷ್ಮಾ ಹಾನಗಲ್ ಅವರಿಗೆ ನಾಮ ಪತ್ರ ಸಲ್ಲಿಸಿದರು,

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ಕಳೆದ 20 ವರ್ಷದಿಂದ ಸೇವೆಯನ್ನು ಸಲ್ಲಿಸಿದ್ದೇನೆ. ಬಿಜೆಪಿ ಪಕ್ಷ ನನಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಚಾಚು ತಪ್ಪದೇ ಪಾಲಿಸಿದ್ದೇನೆ  ಆದರೆ ಈ ಸಲ ಪಕ್ಷ ನನ್ನ ಸೇವೆಯನ್ನು ಮೆಚ್ಚಿ ಟಿಕೆಟ್  ಕೊಡುತ್ತದೆ ಎಂದು ನಾನು ಮತ್ತು  ನನ್ನ ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಪಕ್ಷ ನನ್ನನ್ನು ಗುರ್ತಿಸುವಲ್ಲಿ ವಿಫಲವಾಗಿದೆ ಕಾರಣ ಬೆಂಬಲಿಗರ ಬಲವಂತಕ್ಕೆ ಮಣಿದು ನಾನು ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದೇನೆ ಎಂದು ಹೇಳಿದವರು

ನನಗೆ ಜನರ ಬಗ್ಗೆ ನಂಬಿಕೆ ಇದೆ ಕಿತ್ತೂರು ಕ್ಷೇತ್ರದ ಜನ ಸ್ವಾಭಿಮಾನಿಗಳು ಹೆಂಡ ಹಣ ಕಾಣಿಕೆಗಳ ಆಸೆಗೆ  ಬೀಳುವುದಿಲ್ಲ. ನಾನು ಕಳೆದ 20 ವರ್ಷಗಳಿಂದ ಯಾವುದೇ ತರಹದ ಅಧಿಕಾರ ಅನುಭವಿಸಿದೆ ಸಾಕಷ್ಟು ಸಾಮಾಜೀಕ ಸೇವೆ ಹಾಗೂ ಕಾರ್ಯಗಳನ್ನು ಮಾಡುತ್ತಾ ಬಂದರು ಪಕ್ಷ ನನಗೆ ಸ್ಪಂದಿಸಿಲ್ಲ ಕಾರಣ ನಾನು ಅಭಿಮಾನಿಗಳ ಒತ್ತಾಸೆಗೆ ಚುನಾವಣೆಗೆ ಸ್ಪರ್ದಿಸಿದ್ದೇನೆ.

ನನ್ನ ಕನಸುಗಳು

ಕಿತ್ತೂರು ಒಂದು ಮಾಧುರಿ ಕ್ಷೇತ್ರವಾಗಿ ಮಾಡುವ ನಿರ್ಧಾರ ಹೊಂದಿದ್ದು ಸರ್ಕಾರಿ ಕಚೇರಿಗಳಲ್ಲಿ ತ್ವರಿತ ಕಾರ್ಯಗಳಾಗುವ ಹಿತದೃಷ್ಠಿಯಿಂದ ಒಳ್ಳೆಯ ಅಧಿಕಾರಿಗಳ ನೇಮಕ ಮಾಡುವಲ್ಲಿ ಶ್ರಮ ವಹಿಸುತ್ತೇನೆ. ಮತಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಬ್ಯಾರೇಜ ನಿರ್ಮಾಣ ಮಾಡುತ್ತೇನೆ, ಸಮಯಕ್ಕೆ ಸರಿಯಾಗಿ ಎಲ್ಲಾ ಗ್ರಾಮಗಳಲ್ಲಿ ಬಸ್‌ ಸೌಲಭ್ಯ, ಗ್ರಾಮಗಳಲ್ಲಿಯೂ ಸಹ ಸುಸಜ್ಜಿತ ಆಟದ ಮೈದಾನಗಳ ನಿರ್ಮಾಣ, ಗ್ರಾಮಕ್ಕೊಂದು ಸುಸ್ಥಿರ ಗೋಶಾಲೆ, ಮಲಪ್ರಭಾ ಮತ್ತು ಸೋಮೇಶವರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದ ಅನುಧಾನ ತಂದು ಅವಳ ಪುನಶ್ಚೇನಗೋಳಿಸುತ್ತೇನೆ, ವಿಶ್ವದರ್ಜೆಯ ಕೃಷಿ ಆಧಾರಿತ  ಕೈಗಾರಿಕಾ ಕೇಂದ್ರವನ್ನು ಸ್ಥಾಪಿಸುವುದರ ಜೊತೆಗೆ ಯುವಕರ ನಿರುದ್ಯೋಗಿ ಸಮಸ್ಯೆ ಇದೆ ಇದರ ಬಗ್ಗೆ ಒಂದು ಶಾಶ್ವತವಾದ ಪರಿಹಾರ ಕಂಡುಹಿಡಿಯಬೇಕಾಗಿದೆ ಕ್ಷೇತ್ರ ಅಭಿವೃದ್ದಿ ಆಗಬೇಕಾದರೆ ಅಲ್ಲಿರುವ ರೈತ ಖುಷಿಯಿಂದ ಇರಬೇಕು ರೈತ ಖುಷಿಯಿಂದ ಇರಬೇಕಾದರೆ ರೈತರಿಗೆ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಟ್ಟು ನದಿಯಿಂದ ಕೆನಾಲ್ ನೀರು ಪ್ರತಿ ರೈತರ ಹೊಲಕ್ಕೆ ಹೋಗಬೇಕು. ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರಕಿಸುವ ಯೋಜನೆ ಹಾಕಿಕೊಂಡಿದ್ದೇನೆ . ಕಿತ್ತೂರು ಕ್ಷೇತ್ರದ ಜನ ಈ ಬಾರಿ ನನಗೆ ಅವಕಾಶವನ್ನು ಕೊಟ್ಟೆ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಅವಕಾಶ ಸಿಕ್ಕರೆ ನಿಸ್ವಾರ್ಥದಿಂದ ಜನರ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದ ಅವರ ಸೇರಿದ ಸರ್ವರಲ್ಲಿಯೂ ಮತಕ್ಕಾಗಿ ಮನವಿ ಮಾಡಿದರು.

ಜಿಲ್ಲೆ

ರಾಜ್ಯ

error: Content is protected !!