Thursday, September 19, 2024

ರಂಗೇರಿದ ಕಿತ್ತೂರು ಚುನಾವಣಾ ಕಣ; ಕೈ-ಕಮಲ- ಪಕ್ಷೇತರರ ನಡುವೆ ನೇರಾನೇರ ಸ್ಪರ್ಧೆ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ಮತಕ್ಷೇತ್ರ ಇದೀಗ ಚುನಾವಣಾ ಕಣ ರಣೋತ್ಸಾಹಕ್ಕೆ ಸಿದ್ದವಾಗಿದ್ದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ ಈವತ್ತು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಅವರು ನಾಳೆ ತಮ್ಮ ಬೆಂಬಲಿಗರೊಂದಿಗೆ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಆಮ್ ಆದ್ಮಿ ಪಕ್ಷದಿಂದ ಆನಂದ ಹಂಪಣ್ಣವರ ನಾಮಪತ್ರ ಸಲ್ಲಿಸಿದ್ದು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಳೆದ 20 ವರ್ಷಗಳಿಂದ ಸಾವಯವ ಕೃಷಿ, ಗೋ ಸಂರಕ್ಷಣೆ, ಸೇರಿದಂತೆ ಬಿಜೆಪಿ ತತ್ವ ಸಿದ್ದಾಂತಗಳ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತ ಮತಕ್ಷೇತ್ರದಾದ್ಯಂತ ತಮ್ಮದೆಯಾದ ಅಭಿಮಾನಿ ಬಳಗವನ್ನು ಹೊಂದಿದ ಖ್ಯಾತ ದಂತ ವೈದ್ಯ ಡಾ.ಜಗದೀಶ ಗಂಗಪ್ಪ ಹಾರುಗೊಪ್ಪ ಅವರು ಕೂಡ ಈವತ್ತೇ ನಾಮಪತ್ರ ಸಲ್ಲಿಸಿದ್ದಾರೆ. 

ಬಿಜೆಪಿ ಬಂಡಾಯ ಅಭ್ಯರ್ಥಿ ಡಾ ಜಗದೀಶ ಹಾರುಗೊಪ್ಪ ನಾಮಪತ್ರ ಸಲ್ಲಿಸುತ್ತಿರುವುದು

ಡಾ ಜಗದೀಶ ಹಾರುಗೊಪ್ಪ ಅವರು ನಾಮಪತ್ರ ಸಲ್ಲಿಸಿಸ ಬೆನ್ನಲ್ಲೇ ಇನ್ನೋರ್ವ ಬಜೆಪಿ ಬಂಡಾಯ ಅಭ್ಯರ್ಥಿ ಸುಮಾರು ಮೂರು ದಶಕಗಳ ಕಾಲ ಬಾರತೀಯ ಜನತಾ ಪಕ್ಷಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಬಿಜೆಪಿ ಶಿಸ್ತಿನ ಸಿಪಾಯಿ ಎಂದು ಖ್ಯಾತರಾದ ಹಣ್ಣಕೇರಿ ಗ್ರಾಮದ ಸಿದ್ದಯ್ಯಾ ಪೂಜೇರ ಅವರು ಸಹ ಇಂದು ನಾಮಪತ್ರ ಸಲ್ಲಿಸಿದ್ದಾರೆ,

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸುತ್ತಿರುವ ಸಿದ್ದಯ್ಯ ಹಿರೇಮಠ

ಬಿಜೆಪಿಯಲ್ಲಿ ಭಿನ್ನಮತ

ಇಷ್ಟು ದಿನ ಕೈ ಪಾಳಯದಲ್ಲಿ ಭಿನ್ನಮತ ಬುಗಿಲೇಳುವ ಸಾಧ್ಯತೆ ಹೆಚ್ಚು ಇರುವುದರಿಂದ ಸ್ಥಳೀಯ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕರ ಗೆಲುವು ಸುಲಭ ಅನ್ನೋ ಮಾತುಗಳು ಈ ಹಿಂದೆ ಇಲ್ಲಿ ಕೇಳಿ ಬಂದಿತ್ತು. ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಅನಾರೋಗ್ಯದ ಕಾರಣದಿಂದ ಅವರಿಗೆ ಈ ಬಾರಿ ಟಿಕೇಟ್ ಕೈ ತಪ್ಪಿದ್ದು ಅವರ ಕುಟುಂಬದವರು ಚುನಾವಣಾ ಕಣದಿಂದ ಹಿಂದೆ ಸರಿದು ತಟಸ್ಥ ನಿಲುವು ಹೊಂದಿದ್ದು ಇನ್ನೋರ್ವ ಟಿಕೇಟ್ ಆಕಾಂಕ್ಷಿ ಹಬೀಬ ಶಿಲೇದಾರ ಬಂಡಾಯ ಏಳುವ ಸಾದ್ಯತೆ ದಟ್ಟವಾಗಿ ಕಾಣುತ್ತಿತ್ತು ಆದರೆ ಹಬೀಬ ಶಿಲೇದಾರ ಅವರ ರಾಜಕೀಯ ಗುರು ಕೆಪಿಸಿಸಿಸ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕಳೆದೆರಡು ದಿನಗಳ ಹಿಂದೆ ಮಾಡಿದ ಸಂದಾನದಿಂದ ಹಬೀಬ ಶಿಲೇದಾರ ಕೂಡ ಬಾಬಾಸಾಹೇಬ ಪಾಟೀಲ ಅವರಿಗೆ ಬೆಂಬಲ ಸೂಚಿಸಿ ಎಂದು ನಾಮಪತ್ರ ಸಲ್ಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಕ್ರಿಯರಾಗಿದ್ದಾರೆ.

ಅಷ್ಟೇ ಅಲ್ಲದೆ ಎರಡು ಭಾರಿ ಭಾರತೀಯ ಜನತಾ ಪಕ್ಷದ ಶಾಸಕರಾಗಿ ಆಯ್ಕೆಯಾದ ಸುರೇಶ ಮಾರಿಹಾಳ ಕುಟುಂಬದ ಸದಸ್ಯರು ಕೂಡ ಕಾಂಗ್ರೇಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳುವುದರ ಮೂಲಕ ಕೈ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದು ಬಾಬಾಸಾಹೇಬ ಪಾಟೀಲ ಅವರಿಗೆ ಆನೆ ಬಲ ಬಂದಂತಾಗಿದೆ. ಸದ್ಯ ಕಾಂಗ್ರೇಸ್‌ ಪಕ್ಷದಲ್ಲಿ ಯಾವುದೇ ತರಹದ ಬಂಡಾಯದ ಅಲೇ ಶಮನವಾಗಿದ್ದು ಬಂಡಾಯದ ವಾಸನೆ ಬಿಜೆಪಿಯಲ್ಲಿ ದಟ್ಟವಾಗಿದೆ ಡಾ. ಜಗದೀಶ ಹಾರುಗೊಪ್ಪ ಹಾಗೂ ಸಿದ್ದಯ್ಯ ಹಿರೇಮಠ ಅವರ ಸ್ಪರ್ಧೆಯಿಂದ ಬಿಜೆಪಿ ಮತ ವಿಭಜನೆ ಸಾಧ್ಯತೆ ಇದ್ದು ಹಾಲಿ ಶಾಸಕರ ಆಡಳಿತ ವಿರೋಧಿ ಅಲೆ ಹಾಗೂ ಭಿನ್ನಮತದ ಲಾಭ ಈ ಬಾರಿ ಕಾಂಗ್ರೆಸ್‌ಗೆ ವರದಾನವಾಗಲಿದೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಅಲ್ಲದೇ ಆಪ್ ಪಕ್ಷದ ಅಭ್ಯರ್ಥಿ ಆನಂದ ಹಂಪಣ್ಣವರ ಮತ್ತು ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕೂಡ ಸ್ಥಳೀಯ ಬಿಜೆಪಿ ಶಾಸಕರ ಆಡಳಿತದ ವಿರುದ್ದ ಸಾಕಷ್ಟು ಪ್ರತಿಭಟನೆಗಳನ್ನು ಮಾಡುವ ಮೂಲಕ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದು ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ಬಹುಶಃ ಈ ಬಾರಿ ಬಿಜೆಪಿಗೆ ಸೋಲಿನ ಭೀತಿ ಎದುರಾದಂತಿದೆ ಒಟ್ಟಾರೆ ಬಿಜೆಪಿ ಕಾಂಗ್ರೆಸ್ ಹಾಗೂ ಪಕ್ಷೇತರರ ನಡುವೆ ನೇರಾನೇರ ಫೈಟ್ ಇರುವುದರಿಂದ ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಅನ್ನೋದನ್ನು ಕಾದು ನೋಡಬೇಕಿದೆ

 

ಜಿಲ್ಲೆ

ರಾಜ್ಯ

error: Content is protected !!