ಬೆಳಗಾವಿ ಬ್ರೇಕಿಂಗ್: ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಡಳಿತರೂಢ ಬಿಜೆಪಿ ಮತ್ತೆ ಅಧಿಕೃದ ಗದ್ದು ಹಿಡಿಯಲು ಹಲವು ತಂತ್ರಗಳನ್ನ ರೂಪಿಸುತ್ತಿದೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆಯಲ್ಲಿ ಬಿಜೆಪಿ ಕಸರತ್ತು ನಡೆಸುತ್ತಿದೆ. ಈ ಹಿನ್ನಲೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ಚಿಕ್ಕಬಾಗೇವಾಡಿಯಲ್ಲಿ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ನಿನ್ನೆ ರಾತ್ರಿ ಭರ್ಜರಿ ಮತಯಾಚನೆ ನಡೆಸಿದ್ದರು. ಈ ವೇಳೆ ಗ್ರಾಮಸ್ಥರು ತರಾಟೆ ತಗೆದುಕೊಂಡಿದ್ದಾರೆ.
ರಸ್ತೆ,ಚರಂಡಿ,ಜಲಜೀವನ್ ಮಿಷನ್ ಯೋಜನೆ,ಬಿದ್ದ ಮನೆಗಳಿಗೆ ಪರಿಹಾರ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ಮಾಡುತ್ತಲೆ ಅತಿರೇಖಕ್ಕೆ ಹೋಗಿ ಚಿಕ್ಕಬಾಗೇವಾಡಿ ಗ್ರಾಮವನ್ನ ನಿರ್ಲಕ್ಷ ಮಾಡಿದ್ದೀರಿ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಅವರನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು ಒಬ್ಬರು ಶಾಸಕರಾಗಿ ದಿವಂಗತ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರಿಗೆ ಗೌರವ ಸಲ್ಲಿಸಲಿಲ್ಲ ಎಂದು ಅಕ್ರೋಶ ಹೊರ ಹಾಕಿದ್ದರು.
ಇದೆ ಸಮಯದಲ್ಲಿ ಗ್ರಾಮದ ಯುವಕ ಶಂಕರಗೌಡ ಪಾಟೀಲ(ಪೈಲವಾನ) ನಮ್ಮ ತಮ್ಮನ ಜೀವನವನ್ನ ಹಾಳು ಮಾಡಿದ್ದೀರಿ ನೀವು ಎಂದು ಶಾಸಕರನ್ನು ಕ್ಲಾಸ್ ತಗೆದುಕೊಂಡ ಯುವಕ ನಿಜವಾದ ಬಿಜೆಪಿ ಕಾರ್ಯಕರ್ತರನ್ನ ಗುರುತಿಸುವ ಕೆಲಸ ಮಾಡಲಿಲ್ಲಾ ನನ್ನ ವ್ಯಯಕ್ತಿಕ ಜೀವನಕ್ಕೆ ಕೈ ಹಾಕಿ ಜೀವನ ಹಾಳು ಮಾಡಿದ್ದೇರಿ ಎಂದು ಆಕ್ರೋಶದಿಂದಲೇ ತರಾಟೆ ತಗೆದುಕೊಂಡಿದ್ದಾನೆ.
ಚಿಕ್ಕಬಾಗೇವಾಡಿ ಗ್ರಾಮದೇವತೆ ಗುಡಿಯ ಮುಂಬಾಗದಲ್ಲಿ ಯುವಕರು.ಮಹಿಳೆಯರು,ಹಾಗೂ ಹಿರಿಯರು ಸೇರಿದಂತೆ ಗ್ರಾಮಸ್ಥರು ಶಾಸಕರನ್ನು ತರಾಟೆ ತೆಗೆದುಕೊಂಡು ಘೇರಾವ ಹಾಕಿದ್ದರಿಂದ ಮತಯಾಚನೆ ಅರ್ಧಕ್ಕೆ ಮೊಟಕುಗೊಳಿಸಿ ಸ್ಥಳದಿಂದ ಕಾಲ್ಕಿತ್ತ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಕಾರ್ಯಕರ್ತರು.