ಬೆಳಗಾವಿ ಸೇರಿದಂತೆ ಬಿಜೆಪಿಯ16 ಹಾಲಿ ಶಾಸಕರಿಗೆ ಟಿಕೆಟ್ ಡೌಟ್?

ಉಮೇಶ ಗೌರಿ (ಯರಡಾಲ)

ಬಿಜೆಪಿ ಟಿಕೆಟ್ ವಿಳಂಬ ಆಗ್ತಿರುವ ಹಿನ್ನೆಲೆಯಲ್ಲಿ ಶಾಸಕರು ಮತ್ತು ಟಿಕೆಟ್ ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿದೆ. ಪಟ್ಟಿ ಬಿಡುಗಡೆ ಆಗುವ ತನಕ ಆತಂಕದಲ್ಲೇ ಇರಬೇಕಾದ ಸ್ಥಿತಿ ಆಕಾಂಕ್ಷಿಗಳಾದ್ದಾಗಿದೆ. ದೆಹಲಿಯಿಂದ ಬರುವ ಸಂದೇಶಕ್ಕಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕಾಯ್ತಿದ್ದಾರೆ. ಟಿಕೆಟ್ ಅಂತಿಮಗೊಳಿಸುವ ಮುನ್ನ ಹೈಕಮಾಂಡ್ ಹೆಚ್ಚುವರಿ ಮಾಹಿತಿ ಮೊರೆ ಹೋಗಿದೆ.

30 ರಿಂದ 40 ಕ್ಷೇತ್ರದಲ್ಲಿ ಮತ್ತೊಂದು ಸರ್ವೆಗೆ ನಾಯಕರು ಮುಂದಾಗಿದ್ದು, ಮೊನ್ನೆ ರಾತ್ರಿಯಿಂದಲೇ ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬೊಮ್ಮಾಯಿ ಸರ್ವೆಗೆ ಸೂಚಿಸಿದ್ದರು. ಒಟ್ಟು ಮೂರು ಪ್ರತ್ಯೆಕ ಸಂಸ್ಥೆಗಳಿಂದ ಸರ್ವೆ ನಡೆಸಿದ್ದಾರೆ ಎನ್ನಲಾಗಿದ್ದು, ಸರ್ವೆಯ ಆಧಾರದ ಮೇಲೆ ಟಿಕೆಟ್ ಫೈನಲ್ ಆಗಲಿದೆ.ನಿನ್ನೆ ಸಂಜೆಯ ಒಳಗೆ ಮೂರು ಸರ್ವೆಯ ವರದಿ ಬರಲಿದ್ದು. ವರದಿ ಬಂದ ನಂತರ ಮತ್ತೊಂದು ಸುತ್ತಿನ ನಾಯಕರ ಸಭೆ ನಡೆಸಲಾಗುವುದು ತದ ನಂತರವೆ ಟಿಕೆಟ್ ಫೈನಲ್ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ಹೇಳಿತ್ತು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿತ್ತು.

ಇದರ ಹಿನ್ನೆಲೆಯಲ್ಲಿ ಮತ್ತೆ ಸರ್ವೇ ನಡೆಸಿದ್ದು, ಹೈಕಮಾಂಡ್ ಈ ನಿಲುವಿನಿಂದ ಆಕಾಂಕ್ಷಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿ. ಕೆಲ ಶಾಸಕರು ಟಿಕೆಟ್ ಸಿಗುತ್ತಾ ಇಲ್ವೋ ಅನ್ನೋ ಭಯಕ್ಕೆ ಬಿದ್ದಿದ್ದಾರೆ. ಕೆಲ ಹಾಲಿ ಶಾಸಕರಿಗೆ ಟಿಕೆಟ್ ಡೌಟ್ ಅನ್ನೋ ಸಂದೇಶ ಕೇಳಿ ಶಾಸಕರು ಬೆಚ್ಚಿಬಿದ್ದಿದ್ದಾ

ಮತ್ತೆ ಸರ್ವೇ ನಡೆಸಿದ ಪ್ರಕಾರ ಬೆಳಗಾವಿ ಜಿಲ್ಲೆಯ ಬೆಳಗಾವಿ ಉತ್ತರ, ಕಿತ್ತೂರು, ರಾಮದುರ್ಗ, ಅಥಣಿ, ಕ್ಷೇತ್ರ ಸೇರಿದಂತೆ ವಿವಿಧ ಜಿಲ್ಲೆಗಳ 16 ಹಾಲಿ ಶಾಸಕರಿಗೆ ಟಿಕೆಟ್ ಡೌಟ್ ಎಂದು ಬಲ್ಲ ಮೂಲಗಳ ಪ್ರಕಾರ ಹೇಳಲಾಗುತ್ತಿದೆ

ಟಿಕೆಟ್ ಸಿಗುವ ಸ್ಪಷ್ಟತೆ ಇಲ್ಲದ ಶಾಸಕರೆಲ್ಲರೂ ಮಾಧ್ಯಮಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ. ದೆಹಲಿ ಚರ್ಚೆಯ ಬಗ್ಗೆ ತಿಳಿದುಕೊಳ್ಳುವ ಧಾವಂತಕ್ಕೆ ಶಾಸಕರು ಮತ್ತು ಅವರ ಬೆಂಬಲಿಗರು ಮಾಧ್ಯಮಗಳತ್ತ ಕಣ್ಣಿಟ್ಟಿದ್ದಾರೆ  ಎನ್ನಲಾಗುತ್ತಿದೆ.

 

 

Share This Article
";