ಕಿತ್ತೂರು ಕರ್ನಾಟಕ ಭಾಗದ ರೈತ ಸಂಘದ ಪ್ರಮುಖ ರೈತ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು : ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಹಾಗೂ ಕಾರವಾರ ಜಿಲ್ಲೆಗಳ ವ್ಯಾಪ್ತಿಯ ರೈತ ಸಂಘದ ಪ್ರಮುಖ ಮುಖಂಡರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಧಾರವಾಡ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ಕಾರ್ಯಾಧ್ಯಕ್ಷ  ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ಮಾಜಿ ಸಚಿವರಾದ, ಡಿ.ಬಿ. ಇನಾಮದಾರ, ಪಿ. ಎಚ್‌ ನೀರಲಕೇರಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಇವರೆಲ್ಲರನ್ನೂ ಪಕ್ಷಕ್ಕೆ ಬರಮಾಡಿಕೊಂಡರು,

ಸೇರ್ಪಡೆಯಾದ ಪ್ರಮುಖರು: ಕಲ್ಲಪ್ಪ ಕೂಗಟಿ, ಶಿವಾನಂದ ಹೊಳೆಹಡಗಲಿ, ಬೈಲಪ್ಪ ದಳವಾಯಿ, ಸಿದ್ದಣ್ಣ ಕಂಬಾರ, ಬಿಷ್ಟಪ್ಪ ಶಿಂಧೆ, ಮಡಿವಾಳಪ್ಪ ವರಗಣ್ಣವರ, ಕಲಗೌಡ ಪಾಟೀಲ, ಮಹಾಂತೇಶ ರಾಹುತ, ನಿಂಗಪ್ಪ ನಂದಿ, ನೀಲಕಂಠ ನೀರೋಳ್ಳಿ, ನಾಗಯ್ಯ ಪೂಜಾರ, ಭೀಮಣ್ಣ ಕಾಸಾಯಿ, ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಸೇರ್ಪಡೆಯಾದರು.

Share This Article
";