Friday, September 13, 2024

ಪರೋಪಕಾರವನ್ನು ಮಾಡುವುದು ಧರ್ಮ ಪರರ ಪೀಡೆ ಮಾಡುವದೇ ಅಧರ್ಮ; ಡಾ ಜಗದೀಶ ಹಾರುಗೊಪ್ಪ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು: ಸಮಿಪದ ಎತ್ತಿನಕೇರಿ (ಮಲ್ಲಾಪೂರ) ಗ್ರಾಮದ ಶ್ರೀ ಬಸವ ಮಂಟಪ ಆವರಣದಲ್ಲಿ ಸುಕ್ಷೇತ್ರ ಕೂಡಲ ಸಂಗಮದಲ್ಲಿ ನಡೆಯಲಿರುವ 36 ನೇ ಶರಣ ಮೇಳದ ಪ್ರಚಾರ ಸಭೆ ಜರುಗಿತು.

ಬೆಳಗಾವಿಯ ಲಿಂಗಾಯತ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಬಸವರಾಜ ಮಾತನಾಡಿ ಶರಣರು, ಶರಣರಿಂದ ಶರಣರಿಗಾಗಿ ಶರಣರೆ ನಡೆಸುವ ಮೇಳ ಇದಾಗಿದೆ ಇದೊಂದು ಹೆಣ್ಣುಮಗಳು ತವರು ಮನೆಗೆ ಹೋದಂತೆ ತವರ ಪ್ರವಾಸ, ಆದ್ದರಿಂದ ಎಲ್ಲ ಶರಣ ಶರಣೆಯರು 36 ನೇ ಶರಣ ಮೇಳದಲ್ಲಿ ಬಂದು ತಮ್ಮ ಜೀವನವನ್ನು ಪಾವಣ ಮಾಡಿಕೊಳ್ಳಬೇಕು ಎಂದರು.

ಎಂ. ಕೆ. ಹುಬ್ಬಳ್ಳಿಯ ಖ್ಯಾತ ದಂತ ವೈದ್ಯರಾದ ಡಾ ಜಗದೀಶ ಹಾರುಗೊಪ್ಪ ಮಾತನಾಡಿ ಜಗತ್ತಿನಲ್ಲಿ ಯಾವ ಧರ್ಮವೂ ದೊಡ್ಡದಲ್ಲ ಯಾವ ಧರ್ಮವೂ ಸಣ್ಣದಲ್ಲ ಪರೋಪಕಾರವೇ ಪುಣ್ಯ ಪರಪಿಡೆಯೆ ಪಾಪ. ಪರೋಪಕಾರವನ್ನು ಮಾಡುವುದು ಧರ್ಮ ಪರರ ಪೀಡೆ ಮಾಡುವದೇ ಅಧರ್ಮ. ಧರ್ಮದ ಅನುಯಾಯಿಗಳು ಒಳ್ಳೆಯ ಕೆಲಸ ಮಾಡಿ ಗುರುವನ್ನು ಮಿರಿಸಿದಾಗ ಧರ್ಮ ದೊಡ್ಡದಾಗುತ್ತದೆ. 12 ನೇ ಶತಮಾನದಲ್ಲಿ ನಡೆದದ್ದು ಸಾಮಾನ್ಯವಾದ ಕ್ರಾಂತಿಯಲ್ಲ, ಜಾತಿ,ಮತ,ಪಂಥಗಳನ್ನ ಮೆಟ್ಟಿ ನಿಂತ ಕ್ರಾಂತಿ. ದುಶ್ಚಟಗಳಿಂದ ದೂರವಾಗಲು ಶರಣರ ಸಂಘ ಮಹತ್ವದ್ದು ಆದ್ದರಿಂದ ಇಂತಹ ಶರಣರ ಸಂತ್ಸಂಗಗಳಲ್ಲಿ ಭಾಗಿಯಾಗಬೇಕು. ಎಲ್ಲರೂ ಕೂಡಿ ಸಮತಾ ಭಾವನೆಯಲ್ಲಿ ಬೆಸೆಯುವಂತೆ ಮಾಡಿದ್ದು  ಶರಣ ಮೇಳ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಬೆಳಗಾವಿ ಬಸವ ಮಂಟಪದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಮಾತನಾಡಿ ಪ್ರತಿಯೊಂದು ಪ್ರಗತಿ ಪರ ಧರ್ಮದ ಅನುಯಾಯಿಗಳು ವರ್ಷದಲ್ಲಿ ಒಂದು ದಿನ ತಮ್ಮ ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆ,  ಈ ಹಿನ್ನಲೆಯಲ್ಲಿ ಸುಕ್ಷೇತ್ರ ಕೂಡಲ ಸಂಗಮದಲ್ಲಿ ನಡೆಯುವ 36 ನೇಯ ಶರಣ ಮೇಳಕ್ಕೆ ಎಲ್ಲಾ ಶರಣರು ಬರುತ್ತಾರೆ, ಇತಿಹಾಸದ ಹಿನ್ನಲೆಯಾಗಿ ಇಟ್ಟುಕೊಂಡು ಐತಿಹಾಸಿಕ, ಚಾರಿತ್ರಿಕ, ವೈಶಿಷ್ಟಪೂರ್ಣವಾದ ಮೇಳ ಈ ಶರಣ ಮೇಳ, ಲಿಂಗಾಯತರಿಗೆ ಬಸವಣ್ಣನೆ ಧರ್ಮಗುರು, ಕೂಡಲಸಂಗಮವೆ ದರ್ಮಕ್ಷೇತ್ರ ಎಂದು ಎಲ್ಲಾ ಲಿಂಗಯತರನ್ನ ಜಾಗೃತಗೊಳಿಸಿದ್ದೆ ಶರಣ ಮೇಳ, ಶರಣ ಮೇಳಕ್ಕೆ ನಾಡಿನ ಜನರಲ್ಲದೆ ದೇಶ ವಿದೇಶಗಳಿಂದ ಶರಣರು ಆಗಮಿಸುತ್ತಾರೆ ಎಂದ ಅವರು  ಶರಣ ಮೇಳಕ್ಕೆ ಸರ್ವರನ್ನು ಆಮಂತ್ರಿಸಿದರು.

ಪ್ರಾಸ್ತಾವಿಕವಾಗಿ ಶರಣ ಅಶೋಕ ಅಳ್ನಾವರ, ಡಿ. ಆರ್.‌ ಪಾಟೀಲ, ಬಸವ ದಳದ ಬೆಳಗಾವಿ ಜಿಲ್ಲಾಧ್ಯಕ್ಷ ಅಶೋಕ ಬೆಂಡಿಗೇರಿ ಮಾತನಾಡಿದರು. 

ಈ ವೇಳೆ ಮಡಿವಾಳೆಪ್ಪ ಕೋರಿಶೆಟ್ಟರ, ಜಗದೀಶ ವರಗಣ್ಣವರ, ಸಿದ್ರಾಮ ತಳವಾರ, ವಿಠ್ಠಲ ಮಿರಜಕರ, ಅಕ್ಷಯ ವಾಲಿ ಸೇರಿದಂತೆ ಇನ್ನೂ ಅನೇಕ ಶರಣರು ಇದ್ದರು.

ಶರಣ ಮಡಿವಾಳೆಪ್ಪ ಕೋಟಿ ಸ್ವಾಗತಿಸಿದರು, ಶರಣ ಜಗದೀಶ ಕಂಭಾರಗಣವಿ ನಿರೂಪಿಸಿ ವಂದಿಸಿದರು.

 

 

 

 

 

 

 

ಜಿಲ್ಲೆ

ರಾಜ್ಯ

error: Content is protected !!