Friday, September 20, 2024

ತಿಗಡೊಳ್ಳಿ ಸರಕಾರಿ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ಜರುಗಿತು

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು: ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಶಾಲಾ ಮಕ್ಕಳ ಗ್ರಾಮ ಸಭೆ ಜರುಗಿತು

ಶಾಲಾ ಮಕ್ಕಳ ಗ್ರಾಮ ಸಭೆ ಅತಿಥಿ ಸ್ಥಾನ ವಹಿಸಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗರತ್ನಾ ಲಕ್ಕನ್ನವರ ಮಾತನಾಡಿ ಶಾಲೆಯಲ್ಲಿ ಇರವು ಪ್ರತಿ  ವಸ್ತುಗಳು ನಮ್ಮ ಮನೆಯ ವಸ್ತುಗಳು ಎಂದು ತಿಳಿದು ಬಳಸಬೇಕು. ಶಾಲೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕುಡಿಯು ಮತ್ತು ಬಳಸುವ ನೀರನ್ನು ಮಿತವಾಗಿ ಬಳಸಬೇಕು. ಶಾಲೆಯ ಯಾವುದೇ ವಸ್ತುಗಳಿಗೆ ಹಾನಿ ಮಾಡಬಾರದು ಎಂದು ಶಾಲೆಯ ಮಕ್ಕಳಿಗೆ ಕಿವಿ ಮಾತು ಹೇಳಿದರು.

ಈ ವೇಳೆ ಶಾಲೆಯ ಮಕ್ಕಳು ತಮಗೆ ಕಂಪ್ಯೂಟರ್, ಸಿಸಿ ಕ್ಯಾಮರಾ, ಮ್ಯಾಟುಗಳು, ಶುದ್ಧ ಕುಡಿಯು ನೀರು, ಆಟವಾಡಲು ಕ್ರೀಡಾ ಸಾಮಗ್ರಿಗಳು, ಗ್ರಂಥಾಲಯ, ಲ್ಯಾಭ್‌ ಸೇರಿದಂತೆ ಇನ್ನೂ ಅನೇಕ ಕುಂದು ಕೊರತೆಗಳ ಕುರಿತು ಮಕ್ಕಳು ತಮ್ಮ ಅಳಲನ್ನು ತೋಡಿಕೊಂಡು  ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಅಧಿಕಾರಿಗಳಿಗೆ ಸಾದ್ಯವಾದಷ್ಟು ಬೇಗನೆ ಈ ಎಲ್ಲ ತೊಂದರೆಗಳನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷ ಗೋಪಾಲ ಹುಕ್ಕೇರಿ ಮಾತನಾಡಿ ಶಾಲಾ ಮಕ್ಕಳಿಗೆ ಆಗಿರುವ ತೊಂದರೆಗೆ ಸ್ಪಂದಿಸಿ ತಕ್ಷಣ ಕೆಲಸವನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಬರವಸೆ ನೀಡಿದರು.

ಈ ವೇಳೆ ಶಾಲಾ ಶಿಕ್ಷಕರಾದ ಎಸ್‌ಎಸ್‌ಹುಲಮನಿ, ವಿ.ಎಮ್‌ಪಾಗಾದ, ಸಿ. ಬಿ. ಮುರಗೋಡ, ಗ್ರಾಮ ಪಂಚಾಯತ ಮತ್ತು ಎಸ್‌ಡಿಎಮ್‌ಸಿಯ ಸರ್ವ ಸದಸ್ಯರು, ವಿದ್ಯಾರ್ಥಿಗಳು,  ಗ್ರಾಮಸ್ಥರು ಸೇರಿದಂತೆ ಇನ್ನೂ ಅನೇಕರು ಇದ್ದರು

 

ಜಿಲ್ಲೆ

ರಾಜ್ಯ

error: Content is protected !!