Friday, September 20, 2024

ಕಿತ್ತೂರು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಜರುಗಿತು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಸ್ಥಳಿಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಇಂದು ಕಿತ್ತೂರು ತಾಲೂಕಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಜರುಗಿತು.

ತಾಲೂಕಾ ಅಧ್ಯಕ್ಷ ಡಾ ಎಸ್‌ ಬಿ ದಳವಾಯಿ ಮಾತನಾಡಿ ಡಿ 10 ರಂದು ಕಿತ್ತೂರು ತಾಲೂಕಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಮುಂಜಾನೆ 8 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು ಮೇಜರ ಡಾ ಮೋಹನ ಅಂಗಡಿ ಅವರು ರಾಷ್ಟ್ರಧ್ವಜ, ಕಸಾಪ ಬೆಳಗಾವಿ ಜಿಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರು ನಾಡಧ್ವಜ ಮತ್ತು ಡಾ ಎಸ್‌ ಬಿ ದಳವಾಯಿ ಅವರು ಸಾಹಿತ್ಯ ಪರಿಷತ್ತ ಧ್ವಜಗಳ ಧ್ವಜಾರೋಹಣ ಮಾಡಲಿದ್ದಾರೆ.

9 ಗಂಟೆಗೆ ಕಿತ್ತೂರು ರಾಣಿ  ಚನ್ನಮ್ಮನ ವರ್ತುಳದಿಂದ  ತಾಯಿ ಭುವನೇಶ್ವರಿ ದೇವಿಯ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣೆಗೆ ನಡೆಯಲಿದ್ದು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ.

10.30 ಗಂಟೆಗೆ ಸಮ್ಮೇಳನದ ಉದ್ಘಾಟನೆಯನ್ನು ಶಾಸಕ ಮಹಾಂತೇಶ ದೊಡ್ಡಗೌಡರ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ, ಕೃತಿ ಬಿಡುಗಡೆ ಮಾಡಲಿದ್ದಾರೆ.  2022 ಸಾಲಿನ ಕನ್ನಡ ಮಾದ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ತಾಲೂಕಿಗೆ  ಪ್ರಥಮ, ದ್ವಿತೀಯ, ತೃತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನಾಲ್ಕು ದಶಕಗಳಿಂದ ದಿನ ಪತ್ರಿಕೆಗಳ ವಿತರಣೆ ಮಾಡುತ್ತ ಇತ್ತಿಚೇಗೆ ಕನ್ನಡ ರಾಜೋತ್ಸವ ಪ್ರಶಸ್ತಿ ಪಡೆದ ಮಹಾದೇವ ತುರಮರಿ ಅವರಿಗೆ ಗೌರವ ಸನ್ಮಾನ ಜರುಗಲಿದೆ.

ಮದ್ಯಾಹ್ನ 1.30 ಕ್ಕೆ ತುರಕರ ಶೀಗಿಹಳ್ಳಿ ಸರಕಾರಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ಮಹೇಶ ಚನ್ನಂಗಿ ಅವರಿಂದ “ಕಿತ್ತೂರು ನಾಡಿನ ಸಾಹಿತ್ಯ ಮತ್ತು ಕನ್ನಡ ಭಾಷೆ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವಲ್ಲಿ ಕಿತ್ತೂರಿನ ಸ್ವಾತಂತ್ರ ಹೋರಾಟ” ಹಾಗೂ ಬೇಳಗಾವಿ ಎಮ್‌ಎನ್‌ಆರ್‌ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ನಿರ್ಮಲಾ ಬಟ್ಟಲ ಅವರಿಂದ “ಆಡಳಿತ ಭಾಷೆಯಾಗಿ ಕನ್ನಡ”  ವಿಷಯಗಳ ಕುರಿತು ವಿಚಾರ ಗೋಷ್ಠಿ ಜರುಗಲಿದೆ.

3 ಗಂಟೆಗೆ ಕರ್ನಾಟಕ ಜಾನಪದ ಪರಿಷತ್ತ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಜನ ಜಾಗೃತಿ ಅಧ್ಯಕ್ಷರು, ಖ್ಯಾತ ದಂತ ವೈದ್ಯರಾದ ಡಾ ಜಗದೀಶ ಹಾರುಗೊಪ್ಪ ಅವರ ಗೌರವ ಉಪಸ್ಥಿತಿಯಲ್ಲಿ ಕವಿಗೋಷ್ಠಿ ಜರುಗಲಿದ್ದು ಸುಮಾರು 25 ಕ್ಕೂ ಹೆಚ್ಚು ಕವಿಗಳು ಸ್ವರಚಿತ ಕವನಗಳ ವಾಚನ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಸಮಾರೋಪ ಮತ್ತು ಗೌರವ ಸನ್ಮಾನ ಜರುಗಲಿದೆ ಎಂದು ಮಾಹಿತಿ ನೀಡಿದರು.

ಪೂರ್ವಭಾವಿ ಸಭೆಯ ಸಾನಿದ್ಯವನ್ನು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ವಹಿಸಿದ್ದರು,  ಬಸವರಾಜ ದಳವಾಯಿ ನಿರೂಪಣೆ ಮಾಡಿದರು,  ವಿವೇಕ ಕುರಗುಂದ, ವಂದಿಸಿದರು.

ಈ ವೇಳೆ ರಮೇಶ ಶಹಾಪೂರ, ಮಹೇಶ ಹೊಂಗಲ, ಗಂಗಾಧರ ಹನುಮಸಾಗರ, ಚಂದ್ರಕಾಂತ ಚಿನಗುಡಿ ಸೇರಿದಂತೆ ಇನ್ನು ಅನೇಕರು ಇದ್ದರು

ಜಿಲ್ಲೆ

ರಾಜ್ಯ

error: Content is protected !!