ಕಿತ್ತೂರು:ರಾಣಿ ಚನ್ನಮ್ಮನ ರಾಜ್ಯ ಮಟ್ಟದ ಉತ್ಸವಕ್ಕೆ ಸಂಸದ ಅನಂತಕುಮಾರ ಹೆಗಡೆ ಅವರಿಗ ಕಿತ್ತೂರು ರಾಣಿ ಚನ್ನಮ್ಮನ ಅಭಿಮಾನಿಗಳಿಂದ ವಿನೂತನ ವ್ಯಂಗ್ಯವಾಗಿ ಸ್ವಾಗತ ಕೋರುವ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಸಂಸದ ಅನಂತಕುಮಾರ ಹೆಗಡೆಯವರ ಕಿತ್ತೂರು ಮತಕ್ಷೇತ್ರದ ಬಗ್ಗೆ ಇರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಿತ್ತೂರು ಕ್ಷೇತ್ರಕ್ಕೆ ಬರುತ್ತಾರೆ,ಕ್ಷೇತ್ರದ ಜನತೆ 2019 ಮತ್ತು 2020 ರಲ್ಲಿ ಮಳೆಯಿಂದ ಜನಜೀವನ ಸಂಪೂರ್ಣ ಹಾಳಾಗಿರುವ ಸಂದರ್ಭದಲ್ಲಿ ಸಂಸದರು ಜನರ ನೋವನ್ನು ಆಲಿಸಲು ನೀವು ಬರಲಿಲ್ಲ.ಕೋರೋಣ ಮಹಾಮಾರಿಯಿಂದ ಕ್ಷೇತ್ರದ ಜನತೆ ಸಾವು ನೋವಿನಿಂದ ಬಳಲಿದರು ಸಂಸದರು ಕ್ಷೇತ್ರದ ಕಡೆ ಮುಖ ಮಾಡಿಲಿಲ್ಲ. ಕನಿಷ್ಟ ಪಕ್ಷ ಅವರ ಅನುದಾನದಿಂದ ಒಂದು ಆಮ್ಲಜನಕ ಘಟಕ ಸ್ಥಾಪಿಸಲಿಲ್ಲ ಎಂದು ಕ್ಷೇತ್ರದ ಕಹಿ ನೆನಪು ಮಾಡಿಕೊಂಡಿದ್ದಾರೆ.
ಹಿಂದೂಗಳು ಮಾತ್ರ ನನಗೆ ಮತ ನೀಡಿ ಎಂದು ಜನರಲ್ಲಿ ಜಾತಿಯ ವಿಷಬೀಜ ಬಿತ್ತಿ ಚುನಾವಣೆಯಲ್ಲಿ ಗೆದ್ದ ಸಂಸದ ಅನಂತಕುಮಾರ ಹೆಗಡೆ ಅವರ ಸಿದ್ಧಾಂತದಂತೆ ಕನಿಷ್ಠ ಪಕ್ಷ ಹಿಂದೂಗಳಿಗಾದರು ಕೋರೋಣಾ ಸಂದರ್ಭದಲ್ಲಿ ತಮ್ಮ ಅನುದಾನದಿಂದ ಚಿಕಿತ್ಸೆಗೆ ಬೇಕಾದ ಅಗತ್ಯ ಸೌಲಭ್ಯ ನೀಡಿಲ್ಲ . ಮತ್ತು ಕೇಂದ್ರದ ಕೌಶಲ್ಯ ಅಭಿವೃದ್ಧಿ ಸಚಿವರಾದರು ಕಿತ್ತೂರು ಕ್ಷೇತ್ರದ ಯುವಕರ ಕೌಶಲ್ಯ ಅಭಿವೃದ್ಧಿಪಡಿಸಿ ನಿರುದ್ಯೋಗವನ್ನು ಹೋಗಲಾಡಿಸಲಿಲ್ಲ ಮತ್ತು ಸಂಸದರನ್ನು ಹುಡುಕಿಕೋಡಿ ಅನ್ನುವ ಜಾಹೀರಾತನ್ನು ನೀಡಿದರು ಸಂಸದರು ಕ್ಷೇತ್ರದ ಕಡೆ ನೋಡಿಲ್ಲ . ಈ ವರ್ಷ ಶಾಸಕರ ಪ್ರಯತ್ನದಿಂದ ರಾಜ್ಯ ಸರ್ಕಾರದ ನಮ್ಮ ನಾಡಿನ ತಾಯಿ ಚನ್ನಮ್ಮನ ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವಾಗಿ ವಿಜ್ರಂಭಣೆಯಿಂದ ಆಚರಿಸುತ್ತಿದೆ ಆದ ಕಾರಣ ಸಂಸದರು ಈ ವರ್ಷವಾದರೂ ನಮ್ಮ ಕ್ಷೇತ್ರಕ್ಕೆ ಬಂದು ಉತ್ಸವಕ್ಕೆ ಹಾಜರಾಗಿ ತಾವು ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸದ ಅನ್ನುವುದನ್ನು ಮತದಾರರು ಮರೆತುಹೋಗಿದ್ದಾರೆ ಬಂದು ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಸಂಸದರ ವೈಫಲ್ಯಗಳನ್ನು ಜ್ಞಾಪಿಸಿ ಉತ್ಸವಕ್ಕೆ ಸ್ವಾಗತ ಕೋರಿದ್ದಾರೆ.