ತಂದೆಯ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ 3 ವರ್ಷದ ಮಗು, ಅಮ್ಮ ನನಗೆ ಚಾಕೋಲೆಟ್, ಕ್ಯಾಂಡಿ ತಿನ್ನಲು ಬಿಡುವುದಿಲ್ಲ ಎಂದು ಪೋಲಿಸರಿಗೆ ದೂರು ಕೊಟ್ಟಿರುವ ಘಟನೆಯ ಬಗ್ಗೆ ಟ್ವಿಟರ್ ನಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಭುರಾನ್ ಪುರ್ ಜಿಲ್ಲೆಯ ಡೆಧಾತಲೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಾಕೋಲೇಟ್ ಕೇಳಿದರೆ ಅಮ್ಮ ಹೊಡೆಯತ್ತಾರೆ. ಈ ಬಗ್ಗೆಯೂ ಗಮನಹರಿಸಿ ಎಂದು ಮಗು ದೂರು ಕೊಟ್ಟಿದ್ದನ್ನು ಮಹಿಳಾ ಪೊಲೀಸ್ ದೂರು ಸ್ವೀಕರಿಸಿದ್ದಾರೆ. ಮಗು ಸ್ನಾನ ಮಾಡುವಾಗ ಚಾಕೋಲೆಟ್ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಸ್ನಾನ ಮುಗಿಸಿ ಬಂದಾಗ ಮಗ ಚಾಕೋಲೇಟ್ ಕೇಳಿದಾಗ ಅಮ್ಮ ಮೆಲ್ಲಗೆ ಹೊಡೆದಿದ್ದಾಳೆ. ಇದರಿಂದ ಅಳಲು ಆರಂಭಿಸಿದ್ದು, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದ್ದರಿಂದ ಕರೆದುಕೊಂಡು ಬಂದೆ ಎಂದು ತಂದೆ ಹೇಳಿದ್ದಾನೆ.
ʼಮಮ್ಮಿ ನನ್ನ ಕ್ಯಾಂಡಿ ಮತ್ತು ಚಾಕೊಲೇಟ್‌ಗಳನ್ನ ಕದಿಯುತ್ತಾರೆ, ಅವರನ್ನು ಜೈಲಿಗೆ ಹಾಕಿ ಎಂದು ಮಗು ಪೊಲೀಸರಿಗೆ ಹೇಳಿದೆʼ. ಮುಗ್ಧ ಮಗುವಿನ ಅಹವಾಲು ಕೇಳಿ ಪೊಲೀಸರು ಸೇರಿದಂತೆ ಅಲ್ಲಿದ್ದವರು ನಕ್ಕಿದ್ದಾರೆ. ಔಟ್ ಪೋಸ್ಟ್ ಇನ್ ಚಾರ್ಜ್, ಪೇಪರ್ ಎತ್ತಿಕೊಂಡು ಮಗುವಿನ ದೂರನ್ನ ದಾಖಲಿಸಿಕೊಂಡಿದ್ದಾರೆ.
ಮಗುವಿನ ಮಾತು ಕೇಳಿ ಹೊರಠಾಣೆ ಪ್ರಭಾರಿ ಎಸ್ ಐ ಪ್ರಿಯಾಂಕಾ ನಾಯಕ್‌ಗೆ ನಗು ತಡೆಯಲಾಗಲಿಲ್ಲ. ಅಮ್ಮ ನನ್ನ ಜೈಲಿಗೆ ಕಳುಹಿಸುವುದಾಗಿ ಹೇಳಿ ಎಸ್ ಐ ಪ್ರಿಯಾಂಕಾ ಕಷ್ಟಪಟ್ಟು ಮನೆಗೆ ಕಳುಹಿಸಿದ್ದಾರೆ.
मध्यप्रदेश के बुरहानपुर में तीन साल का बच्चा मम्मी की शिकायत लेकर पुलिस थाने पहुंच गया। उसने पुलिस से कहा कि मम्मी मेरी कैंडी और चॉकलेट चुरा लेतीं हैं। उनको जेल में डाल दो। बच्चे की मासूमियत देखकर सभी की हंसी छूट गई।#MadhyaPradesh #Video pic.twitter.com/iGdHVOZEF6
— Hindustan (@Live_Hindustan) October 17, 2022