ಗ್ರಾಮದಲ್ಲಿ ಜನರ ಜೀವ ಬಲಿ ಪಡೆಯುವುದಕ್ಕಾಗಿ ಕಾದು ಕುಳಿತಿರುವ ತಗ್ಗು ಗುಂಡಿಯ ರೋಡ್

ಉಮೇಶ ಗೌರಿ (ಯರಡಾಲ)

ದೇವರಹಿಪ್ಪರಗಿ.(ಅ.10):ತಿಳಗೂಳ ಗ್ರಾಮದಲ್ಲಿ ಜನರ ಜೀವ ಬಲಿ ಪಡೆಯುವುದಕ್ಕಾಗಿ ಕಾದು ಕುಳಿತಿರುವ ತಗ್ಗು ಗುಂಡಿಯ ರೋಡ್

ವಿಜಯಪುರ ಜಿಲ್ಲೆಯ ದೇವರ ಹೀಪ್ಪರಗಿ ತಾಲೂಕಿನ ತಿಳಗೂಳ ಗ್ರಾಮದಲ್ಲಿ ರಸ್ತೆಯ ಹಣೆಬರಹ ಇದು
ಈ ರಸ್ತೆಯು ಸಿಂದಗಿಯಿಂದ ಕಲಕೇರಿಗೆ ಹೋಗುವ ಮಾರ್ಗ ವಾಗಿದ್ದ. ಪ್ರತಿ ನಿತ್ಯ ಬಸ್ಸು, ಬೈಕು, ಲಾರಿ, ಟ್ರಾಕ್ಟರ್,ಇನ್ನಿತರ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು,

ಇಂದು ತಿಳಗೂಳ ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರ ಇರುವ ಡಾಂಬರಿಕರಣ ಹದಗೆಟ್ಟು ದೊಡ್ಡ ದೊಡ್ಡ ಗುಂಡಿಗೆ ಬಡವರಿಗೆ ದೊರಕುವ ಆಹಾರ ಸರಬರಾಜು ಮಾಡುವ ಅಕ್ಕಿ ಲೋಡ್ ಲಾರಿ (ಟ್ರಕ್) ಗುಂಡಿಗೆ ಸಿಕ್ಕಿ ಬಿದ್ದು, ಸುಮಾರು 8 ಗಂಟೆಗಳ ಕಾಲ ಅದನ್ನು ಹೋರ ತಗೆಯಲು ಜೆ ಸಿ ಬಿ ಮೂಲಕ ಹರ ಸಾಹಸ ಪಟ್ಟರು ಸಹ ಯಾವುದೇ ಪ್ರಯೋಜನ ಆಗಲಿಲ್ಲ.

ಕೊನೆಗೆ ಬೇರೆ ವಾಹನವನ್ನು ತರಸಿ ಅಕ್ಕಿ ಲೋಡ್ ಸಿಪ್ಟ್ ಮಾಡಲಾಯಿತು.

ಈ ಅವಾಂತರಕ್ಕೆ ಕಾರಣ ಇದಕ್ಕೆ ಸಂಬಂದಪಟ್ಟ ಲೋಕೋಪಯೋಗಿ ಅಧಿಕಾರಿಗಳು.
ಈ ರಸ್ತೆಯ ಕುರಿತು ಹಲವಾರು ಬಾರಿ ಅಯ್ಯಣ್ಣಗೌಡ ತುಂಬಗಿ ಇಂಜಿನಿಯರ್ ಇವರಿಗೆ ಹೇಳಿದರು ಕ್ಯಾರೆ ಎನ್ನಲಿಲ್ಲ .

ಇನ್ನೂ ದೇವರ ಹೀಪ್ಪರಗಿ ಮತ ಕ್ಷೇತ್ರದ ಶಾಸಕರಾದ ಶ್ರೀ ಸೋಮನಗೌಡ ಬ ಸಾಸನೂರ ಅವರಿಗೆ ಊರಿನ ಗ್ರಾಮಸ್ಥರು ಈ ರಸ್ತೆಯ ಕುರಿತು ಹಲವಾರು ಬಾರಿ ಮನವಿ ಮಾಡಿದರು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಶ್ರೀ ಸತೀಶ್ ನೇಲ್ಲಗಿ, ಮಡಿವಾಳಪ್ಪ ಚಿಗರಿ, ಶಿವಪುತ್ರ ಸಾತಿಹಾಳ, ಸಚಿನ್ ಕೇಸರಿ, ಹಳ್ಳೆಪ್ಪ ನಾಯ್ಕೋಡಿ, ನಬಿಲಾಲ ಸಿರಸಗಿ, ರವಿ ಮುರಡಿ ಇನ್ನೂ ಮುಂತಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಇನ್ನಾದರೂ ಇದಕ್ಕೆ ಸಂಬಂದಪಟ್ಟ ಮೇಲಾಧಿಕಾರಿಗಳು ಹಾಗೂ ಈ ಕ್ಷೇತ್ರದ ಶಾಸಕರು ಕ್ರಮ ಕೈಗೊಳ್ಳುತ್ತಾರಾ ಇಲ್ವಾ ಅಂತ ಕಾದು ನೋಡಬೇಕಾಗಿದೆ.

Share This Article
";