ನಮ್ಮ ಸುತ್ತ ಮುತ್ತಲಿನ ಪರಿಸರ ನಿರ್ಮಲತೆಯಿಂದ ಕೂಡಿದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ: ಪಿ.ಕೆ.ನಿರಲಕಟ್ಟಿ

ಉಮೇಶ ಗೌರಿ (ಯರಡಾಲ)

ಧಾರವಾಡ : ಮನುಷ್ಯ ನೆಮ್ಮದಿಯಿಂದ ಜೀವನ ನಡೆಸಲು ಪ್ರಕತಿಯಿಂದ ದೊರೆಯುವಂತಹ ಗಾಳಿ, ಬೆಳಕು, ನೀರು ಅತ್ಯಗತ್ಯ. ನಮ್ಮ ಸುತ್ತ ಮುತ್ತ ಶುದ್ಧ ಗಾಳಿ, ಬೆಳಕು, ನೀರು ನಿರ್ಮಲತೆಯಿಂದ ಕೂಡಿದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಕೆಪಿಸಿಸಿಯ ಸಂಯೋಜಕರಾದ ಪಿ.ಕೆ.ನಿರಲಕಟ್ಟಿ ಹೇಳಿದರು.

ರಾಷ್ಟ್ರಪಿತ ಗಾಂಧೀಜಿಯವರ ಜಯಂತಿಯ ನಿಮಿತ್ತವಾಗಿ “ಪರಿಸರವನ್ನು ಉಳಿಸಬೇಕು ಪರಿಸರ ಪ್ರೇಮವನ್ನು ಬೆಳಸಬೇಕು” ಅನ್ನುವ ದೃಷ್ಟಿಯಿಂದ ಕಲಗೇರಿ ವಾಯುವ್ಯಿಹಾರ ಸಮಿತಿ ಹಾಗೂ ಧಾರವಾಡ ಜಿಲ್ಲಾ ಎನ್‌ಸಿಸಿ ಸಂಯೋಗದಲ್ಲಿ ವಿಶ್ವೇಶ್ವರಯ್ಯ ಕಟ್ಟಿರುವ ಕೆಲಗೇರಿಯ ಕೆರೆಯ ಬದಿಯಲ್ಲಿರುವ ಪಾದಾಚಾರಿಗಳ ದಾರಿ ಹಾಗೂ ಓಪನ್ ಜಿಮ್ ಸ್ಥಳಗಳ ಸ್ವಚ್ಛತಾ ಕಾರ್ಯವನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿಯ ಸಂಯೋಜಕರು ಹಾಗೂ ಕೆಲಗೇರಿ ವಾಯುವ್ಯಾರ್ ಸಮಿತಿಯ ಉಪಾಧ್ಯಕ್ಷರಾದ ಪಿ.ಕೆ.ನಿರಲಕಟ್ಟಿ ಅವರು ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ. ನಿಮ್ಮಲ್ಲಿ ದೇಶಪ್ರೇಮ ನಾಡು ನುಡಿ ಹಾಗೂ ಸ್ವಚ್ಛತಾ ಪರಿಕಲ್ಪನೆ ಜಾಗೃತಗೊಳ್ಳಬೇಕು.  ವಿದ್ಯಾರ್ಥಿ ಜೀವನದಲ್ಲಿ ತಲೆತಗ್ಗಿಸಿ ಓದಿ ತಲೆಯೆತ್ತಿ ನೋಡುವಂತ ಕಾಲ ಒಂದು ದಿನ ಬಂದೇ ಬರುತ್ತದೆ. ನೀವು ಮಾಡುವ ಕೆಲಸದಲ್ಲಿ ಶ್ರದ್ಧೆ ಭಕ್ತಿ ಗೌರವ ಆದರ್ಶ ಇದ್ದರೆ ಮುಂದೊಂದು ದಿನ ಭವ್ಯ ಭಾರತದ ನಿರ್ಮಾಣದಲ್ಲಿ ನಿಮ್ಮ ಪಾತ್ರ ಬಹಳ ಮಹತ್ವ ಪಡೆಯುತ್ತದೆ. ಭಾರತವನ್ನು ವಿಶ್ವಗುರು ಮಾಡಬೇಕಾದರೆ ನಿಮ್ಮ ಶ್ರಮ ತ್ಯಾಗ ಬಲಿದಾನ ಇವತ್ತಿನ ದಿನಮಾನಕ್ಕೆ ಬಹಳ ಮುಖ್ಯವಿದೆ. ಅದೆ ರೀತಿ ಮನುಷ್ಯ ನೆಮ್ಮದಿಯಿಂದ ಜೀವನ ನಡೆಸಲು ಪ್ರಕತಿಯಿಂದ ದೊರೆಯುವಂತಹ ಗಾಳಿ, ಬೆಳಕು, ನೀರು ಅತ್ಯಗತ್ಯ. ನಮ್ಮ ಸುತ್ತ ಮುತ್ತ ಶುದ್ಧ ಗಾಳಿ, ಬೆಳಕು, ನೀರು ನಿರ್ಮಲತೆಯಿಂದ ಕೂಡಿದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.ಆದಕಾರಣ ನಮ್ಮಲ್ಲಿ ಪರಿಸರ ಕಾಳಜಿ ಬಂದಾಗ ಮಾತ್ರ ನಮ್ಮ ಸುತ್ತಮುತ್ತಲಿನ ಎಲ್ಲಾ ಪ್ರದೇಶವು ಸ್ವಚ್ಛತೆಯಿಂದ ಕೂಡಿ ಹಸಿರಿನಿಂದ ಕಂಗೊಳಿಸಿವಂತೆ ಮಾಡಬಹುದು ಎಂದರು.

ಈ ವೇಳೆ ಮಾತನಾಡಿದ ರಮೇಶ್ ಜೋಗಿ ಅವರು ಈ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಹಾಗೂ ಗುರುವೊಂದಕ್ಕೆ ಅಭಿನಂದನೆ ಸಲ್ಲಿಸಿ “ಗಾಂಧೀಜಿ ಕಂಡ ಸ್ವಚ್ಚ ಭಾರತ ಕನಸು ನನಸು” ಮಾಡಲು ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";