♦ಉಮೇಶ ಗೌರಿ (ಯರಡಾಲ)
ವಿದ್ಯಾಕಾಶಿ ಮುಕುಟ ತೊಟ್ಟಿರುವ ಪೇಢಾ ನಗರಿ ಧಾರವಾಡದ ಕೆಲಗೇರಿ ಸರಕಾರಿ ಕಿರಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು ಹಾಗು ಕಿತ್ತೂರು ತಾಲೂಕಿನ ಕಾಂಗ್ರೇಸ್ ಪಕ್ಷದ ಯುವ ಮುಖಂಡ ಪಿ.ಕೆ.ನೀರಲಕಟ್ಟಿ ಅವರ ನೇತೃತ್ವದಲ್ಲಿ “ಒಮ್ಮೆಯಾದರು ತಿರುಗಿ ನೋಡು ನೀ ಕಲಿತ ಸರಕಾರಿ ಶಾಲೆಯನ್ನು” ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಶಾಲಾಭಿವೃದ್ಧಿಗೆ ಮುಂದಾದ ಪ್ರೇರಣಾದಾಯಕ ಕತೆ ನಡೆದಿದೆ.
ಹೌದು.ಖಾಸಗಿ ಶಾಲೆಗಳ ಹಾವಳಿಯಿಂದ ಮಕ್ಕಳ ಪ್ರವೇಶ ಇಲ್ಲದೇ ಹಾಗು ಶಾಲೆಗಳಲ್ಲಿ ಕಲಿಕಾ ಸಾಮಗ್ರಿ ಕೊರತೆಯಿಂದ ಮುಚ್ಚುವ ಹಂತ ತಲುಪುತ್ತಿರುವ ಸರಕಾರಿ ಶಾಲೆಗಳ ಉಳಿವಿಗಾಗಿ ಸರಕಾರ ಮತ್ತು ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮ ನಡೆಸುತ್ತವೆ. ಇವುಗಳನ್ನು ಗಮನಿಸಿದ ಪಿ.ಕೆ.ನೀರಲಕಟ್ಟಿ ಅವರು ಶಿಕ್ಷಣ ನಮ್ಮ ಜೀವನದ ಅವಿಭಾಜ್ಯ ಅಂಗ, ಅದು ಶಾಲೆ ಆಗಿದೆ. ಆ ಜ್ಞಾನ ದೇಗುಲಕ್ಕೆ ನಮ್ಮ ಕೈಲಾದ ಸೇವೆ ಮಾಡಬೇಕೆಂದು ಪಣತೊಟ್ಟು, ಅವರು ಎಸ್.ಡಿ.ಎಮ್.ಸಿ ಸದಸ್ಯರ ಹಾಗು ಶಾಲೆಯ ಶಿಕ್ಷರ ಸಹಾದಿಂದ ಅಭಿವೃದ್ಧಿಗೆ ಮುಂದಾದರು.
ಜ್ಞಾನ ದೇಗುಲವಿದು ನಮ್ಮ ಶಾಲೆ,ಎಲ್ಲರಿಗೂ ಎರಡನೆ ಮನೆ ಇದ್ದಂತೆ.ಶಿಕ್ಷಣ ಜ್ಞಾನ ಅರಿವು ನೀಡಿ ಬದುಕು ಬೆಳಕಾಗಿಸುವ ಕೇಂದ್ರ. ದೇಶದ ಭವಿಷ್ಯಕ್ಕಾಗಿ ಮಕ್ಕಳನ್ನು ಸಿದ್ದಪಡಿಸುವ ಸ್ಥಳ “ಒಮ್ಮೆಯಾದರು ತಿರುಗಿ ನೋಡು ನೀ ಕಲಿತ ಸರಕಾರಿ ಶಾಲೆಯನ್ನು”.
ಶಾಲೆಯ ವಿದ್ಯೆಯ ಋಣ ತೀರಿಸಲಾಗದು.ನಿನ್ನನು ತೆಲೆ ಎತ್ತಿ ನೋಡುವಂತೆ ಮಾಡಿದ ಶಾಲೆಯನ್ನು ನೋಡಲು ಇಂದೇ ಸದಾವಕಾಶ. ಶಾಲಾಭಿವೃದ್ಧಿ ಮಾಡುವಲ್ಲಿ ಕೈ ಜೋಡಿಸಿ ಮಾದರಿ ಶಾಲೆಯನ್ನಾಗಿಸಿ ಕಲಿತ ಶಾಲೆಗೆ ಗೌರವ ನೀಡೋಣ “ಒಮ್ಮೆಯಾದರು ತಿರುಗಿ ನೋಡು ನೀ ಕಲಿತ ಸರಕಾರಿ ಶಾಲೆಯನ್ನು”. ತನು ಮನ ಧನದಿಂದ ಸಹಕಾರ ನೀಡಿ ಬೆಳಸೋಣ ನಮ್ಮ ಜ್ಞಾನ ದೇಗುಲ ಎಂದು ಶಾಲೆಯಲ್ಲಿ ಕಲಿತು ಉದ್ಯೋಗಸ್ಥರಾದ ಶಿಕ್ಷಕರು,ಚುನಾಯಿತ ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳನ್ನು ಸಂಪರ್ಕಿಸಿ ಸುಮಾರು ರೂ.2.5 ಲಕ್ಷ ಹಣ ದೇಣಿಗೆ ರೂಪದಲ್ಲಿ ಪಡೆದು, ಹಣವನ್ನು ಸದ್ಭಳಕೆ ಮಾಡಲು ಯೋಜನೆ ರೂಪಿಸಿಸಿದರು.
ದೇಣಿಗೆ ಹಣದಲ್ಲಿ ನಲಿ-ಕಲಿ ಮತ್ತು ಶಾಲಾ ಪೀಠೋಪಕರಣಗಳನ್ನು ಕೊಡಿಸುವಲ್ಲಿ ಯಶಸ್ವಿಯಾದರು. ದಾನಿಗಳಾದ ಭಾಸ್ಕರ ರಾವ್,ಮಂಜುನಾಥ ಗರಗ,ಮಾದರಾಯ ಚೌದರಿ,ಪ್ರೇಮಜೀತ,ಜಗದೀಶ ಟಬಲೆ, ಮಯೂರ ಮೊರೆ ಪೌಂಡೇಶನ್,ಶ್ರೀಧರ ರೆಡ್ಡಿ ಸೇರಿದಂತೆ ಶಾಲೆಯ ಶಿಕ್ಷಕರಾದ ಜಗದೀಶ ಪೂಜಾರ,ಶಂಕರ ಹುಲಿಕಟ್ಟಿ,ವಿರೇಂದ್ರ ಪಾಟೀಲ ಶಾಲಾಭಿವೃದ್ಧಿಗೆ ಕೈಜೋಡಿಸಿದ್ದಾರೆ. ಇದರಿಂದ ಮಕ್ಕಳಿಗೆ ಕಲಿಕಾ ವಾತಾವರಣ ಇಮ್ಮಡಿಗೊಳಿಸಿದೆ.
ಈ ಸಾಧನೆ ಫಲವಾಗಿ ಇಂದು ಗಣ್ಯರಿದಂದ ನಲಿ-ಕಲಿ ಮತ್ತು ಶಾಲಾ ಪೀಠೋಪಕರಣಗಳ ಉದ್ಘಾಟನಾ ಹಾಗು ದಾನಿಗಳಿಗೆ ಗೌರವ ಸನ್ಮಾನ ಸಮಾರಂಭ ಶಾಲೆಯಲ್ಲಿ ನಡೆಯುತ್ತಿದೆ.
ಆ ಶಾಲೆಯ ಶಿಕ್ಷಕರು ಹಾಗೂ ಕೆಲಗೇರಿಯ ಮೂಲ ನಿವಾಸಿಗಳಿಂದ ಸರಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಿ ಮಕ್ಕಳ ಕಲಿಕೆಗೆ ಪೂರಕ ಕಾರ್ಯ ಶ್ಲಾಘನೀಯ. ಶಿಕ್ಷಣ ಇಲಾಖೆ ವತಿಯಿಂದ ಎಲ್ಲರಿಗೂ ವಿಶೇಷವಾದ ಧನ್ಯವಾದಗಳನ್ನು ತಿಳಿಸುತ್ತೇನೆ.
ಗೀರಿಶ ಪಡಕಿ .ಕ್ಷೇತ್ರ ಶಿಕ್ಷಣಾಧಿಕಾರಿ ಧಾರವಾಡ ಶಹರ. |
ಸ್ಥಳೀಯ ಶಿಕ್ಷಕರು ಸಮುದಾಯದ ಸಹಭಾಗಿತ್ವವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದು ಇಲಾಖೆಗೆ ಹೆಸರು ತಂದಿದೆ ಇದರಿಂದ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಕೊಳ್ಳಬಹುದಾಗಿದೆ.ಆ ಶಾಲೆಯ ಎಲ್ಲ ಶಿಕ್ಷಕರಿಗೂ ಧನ್ಯವಾದಗಳು
ವಿಜಯಲಕ್ಷ್ಮಿ ಕಮ್ಮಾರ ಸಿ.ಆರ್.ಪಿ |