ಧಾರವಾಡ: ನಾಳೆ ಸೋಮವಾರ ನಡೆಯಲಿರುವ ಹೊರವಲಯದ ತಡಸಿನಕೊಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಐಐಐಟಿ ಕ್ಯಾಂಪಸ್ ಉದ್ಘಾಟನೆಗೆ ಆಗಮಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅರವಿಂದ ಬೆಲ್ಲದ ಅವರು ಸ್ವಾಗತ ಕೋರುವ ಬ್ಯಾನರನಲ್ಲಿ ರಾಷ್ಟ್ರದ ಮೊದಲ ಮಹಿಳಾ ರಾಷ್ಟ್ರಪತಿ ಎಂದು ಹಾಕಿದ್ದಾರೆ. ಇದು ಟೀಕೆಗೆ ಒಳಗಾಗಿದೆ.
ಭಾರತ ದೇಶದ ಪ್ರಥಮ ಮಹಿಳಾ ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ ಅವರು. ಆದರೆ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಕೋರುವ ಬರದಲ್ಲಿ,ರಾಷ್ಟ್ರದ ಮೊದಲ ಮಹಿಳಾ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಎಂದು ಇರುವ ಬ್ಯಾನರ್ ಶಾಸಕ ಅರವಿಂದ ಬೆಲ್ಲದ ಅವರು ಹಾಕಿದ್ದಾರೆ. ಇದನ್ನು ನೋಡಿದರೆ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಸಂದೇಹ ಬರುತ್ತಿದ್ದೆ. ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆಯೇ ಶಾಸಕರು…? ಎಂದು ಎನ್.ಎಸ್.ಯು.ಐ ಮಾಜಿ ರಾಜ್ಯ ಕಾರ್ಯದರ್ಶಿ ಮಹಾಂತೇಶ ಕಂಬಾರ ಧಾರವಾಡದಲ್ಲಿ ಮಾದ್ಯಮಕ್ಕೆ ತಿಳಿಸಿದ್ದಾರೆ.
ಎಷ್ಟೇ ಇತಿಹಾಸ ತಿರುಚಲು ಪ್ರಯತ್ನಿಸಿದರು ಅದು ಸಾಧ್ಯವಿಲ್ಲ ಎನ್ನುವುದನ್ನು ಬೆಲ್ಲದ ಅವರು ತಿಳಿದುಕೊಳ್ಳಬೇಕು. ಇನ್ನಾದರೂ ಎಚ್ಚತ್ತಕೊಂಡು ಇತಿಹಾಸ ಅಳಿಸದೆ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.