ಜಾಮೀನು ಪಡೆದ ಬಸವರಾಜನ್ ದಂಪತಿ! ದಂಪತಿಯ ಹೇಳಿಕೆ ಮುರುಘಾ ಶ್ರೀಗೆ ಮುಳುವಾಗುವ ಸಾಧ್ಯತೆ.

ಚಿತ್ರದುರ್ಗ: ಹಾಸ್ಟೆಲ್​​ನ ಮಹಿಳಾ ವಾರ್ಡನ್ ಮೇಲೆ ಅತ್ಯಾಚಾರಕ್ಕೆ ಯತ್ನ ಸಂಬಂಧ ಆರೋಪ ಎದುರಿಸುತ್ತಿದ್ದ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮತ್ತು ಪತ್ನಿ ಸೌಭಾಗ್ಯರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಸದ್ಯ ಈ ಬಗ್ಗೆ ದಂಪತಿ, ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಅವರ ಹೇಳಿಕೆ ಮುರುಘಾ ಮಠದ ಶ್ರೀಗಳಿಗೆ ಮುಳುವಾಗುವ ಸಾಧ್ಯತೆ ಇದೆ.

ಜಾಮೀನು ಪಡೆದ ಬಳಿಕ ಬಸವರಾಜನ್ ತಮ್ಮ​ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳಿಗೆ ರಕ್ಷಣೆ ಕೊಡಬೇಕಿತ್ತು, ನನ್ನ ಕೆಲಸ ನಾನು ಮಾಡಿದ್ದೇನೆ. ಪ್ರಕರಣದಲ್ಲಿ ನನ್ನದು ಯಾವುದೇ ಪಿತೂರಿ ಇಲ್ಲ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಹೆಚ್ಚು ಮಾತಾಡಲ್ಲ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಎಲ್ಲವೂ ತಿಳಿಯುತ್ತದೆ. ಸಂತ್ರಸ್ತ ಬಾಲಕಿಯರಿಗೆ ನಾನು ರಕ್ಷಣೆ ನೀಡಿದ್ದೇನೆ. ಪ್ರಕರನದಲ್ಲಿ ನನ್ನ ಕೈಲಾದಷ್ಟು ಸಹಾಯ ನಾನು ಮಾಡಿದ್ದೇನೆ. ಬಾಲಕಿಯರು ಬೆಂಗಳೂರಿನಲ್ಲಿ ಇದ್ದಾಗ ನಾವು ಹೋಗಿದ್ದೆವು. ಪತ್ನಿ & ನನ್ನ ಮಕ್ಕಳೊಂದಿಗೆ ನಾನು ಹೋಗಿದ್ದೆ. ನಾವು ಪೊಲೀಸ್ ಠಾಣೆಯಲ್ಲಿ ಬರೆದುಕೊಟ್ಟು ಕರೆದುಕೊಂಡು ಬಂದಿದ್ದೇವೆ. ಮಕ್ಕಳನ್ನ ಅವರ ಕುಟುಂಬದವರಿಗೆ ನೀಡಿದ್ದೇನೆ ಎಂದರು.

ಲೈಂಗಿಕ ಆರೋಪ ಇಲ್ಲ ಅನ್ನಲಾಗಲ್ಲ, ಸುಳ್ಳು ಅನ್ನುವುದಕ್ಕೆ ಆಗಲ್ಲ

ಶ್ರೀಗಳ ವಿರುದ್ಧ ಕೇಸ್ ದಾಖಲಾಗಿದ್ದಕ್ಕೆ ನನ್ನ ವಿರುದ್ಧ ಸುಳ್ಳು ಕೇಸ್‌ ದಾಖಲಿಸಿದ್ದಾರೆ. ಬೆಂಗಳೂರಿನಿಂದ ಮಕ್ಕಳನ್ನು ಕರೆದುಕೊಂಡು ಬಂದಿದ್ದು ನಿಜ. ನನ್ನ ಮನೆಯಲ್ಲಿ ಮಕ್ಕಳನ್ನು ಇಟ್ಟುಕೊಂಡಿದ್ದು ನಿಜ. ಬಳಿಕ ಮಠಕ್ಕೆ ಮಕ್ಕಳು ಹೋಗಿದ್ದು ನಿಜ. ಮಠದಲ್ಲಿ ಮಕ್ಕಳನ್ನು ಬಿಟ್ಟುಕೊಳ್ಳದಿದ್ದಕ್ಕೆ ಪೋಷಕರಿಗೆ ಒಪ್ಪಿಸಿದ್ದೆ. ಯಾರು, ಯಾರನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಕೆಲವರ ಅಹಂನಿಂದ ಸಂಸ್ಥೆ ಹಾಳಾಗುತ್ತಿದೆ. ಯಾರು ತಪ್ಪು ಮಾಡಿದ್ದಾರೆಂದು ಕೋರ್ಟ್‌ನಲ್ಲಿ ತೀರ್ಮಾನವಾಗುತ್ತೆ. ಲೈಂಗಿಕ ಆರೋಪ ಇಲ್ಲ ಅನ್ನಲಾಗಲ್ಲ, ಸುಳ್ಳು ಅನ್ನುವುದಕ್ಕೆ ಆಗಲ್ಲ. ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಆರೋಪ ಸುಳ್ಳು ಅನ್ನಲು ಆಗಲ್ಲ. ಅವರಿಗೆ ಅಧಿಕಾರ ಇದೆ, ಹೀಗಾಗಿ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಶ್ರೀಗಳನ್ನು ತೆಗೆದುಹಾಕುವುದು ಭಕ್ತರಿಗೆ ಬಿಟ್ಟಿದ್ದು. ಮಠ ಸಾರ್ವಜನಿಕರಿಗೆ ಸೇರಿದ ಆಸ್ತಿ ಎಂದು ಎಸ್‌.ಕೆ.ಬಸವರಾಜನ್ ಹೇಳಿಕೆ ನೀಡಿದ್ದಾರೆ.

ಮೊದಲು ಮಕ್ಕಳು, ಆ ಮೇಲೆ ಶ್ರೀಗಳು, ಮಕ್ಕಳಿಗೆ ರಕ್ಷಣೆ ಸಿಗಲಿ. ಸಂಧಾನ ಸಭೆ ನಡೆದಿಲ್ಲ, ಸೌಹಾರ್ದ ಸಭೆ ನಡೆದಿದೆ. ಪೋಕ್ಸೋ ಕೇಸ್‌ನಲ್ಲಿ ನಾನು ರಾಜಿ ಮಾಡಿಕೊಳ್ಳಲು ಸಾಧ್ಯವಾಗಲ್ಲ. ಶ್ರೀಗಳ ಜೊತೆ ನಾನು ರಾಜಿಯಾದ್ರೆ ಪೋಕ್ಸೋ ಕೇಸ್ ರದ್ದಾಗಲ್ಲ ಎಂದರು.

ಇನ್ನು ಮತ್ತೊಂದು ಕಡೆ ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಲೈಂಗಿಕ ಆರೋಪದ ಬಗ್ಗೆ ಯಾರಿಗೂ ಸರ್ಟಿಫಿಕೆಟ್ ಕೊಡಲು ಆಗಲ್ಲ. ಶ್ರೀಗಳು, ಪತಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿ. ಆರೋಪ ಮಾಡಿರುವ ವಾರ್ಡನ್‌ ನನಗೆ ಪರಿಚಯವೇ ಇಲ್ಲ. ಸೋಮವಾರ ಮಾತ್ರ ನಾನು ಪೂಜೆಗಾಗಿ ಮಠಕ್ಕೆ ಹೋಗುತ್ತಿದ್ದೆ. ಮಠದ ಆಡಳಿತಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಹೆಣ್ಣು ಮಕ್ಕಳು ಆಗಿದ್ದರಿಂದ ನಾನು ಬೆಂಗಳೂರಿಗೆ ಕರೆತಂದಿದ್ದೆ. ಬಾಲಕಿಯರು ಭಯಗೊಂಡಿದ್ದರಿಂದ ಮನೆಯಲ್ಲಿ ಆಶ್ರಯ ನೀಡಿದ್ದೆವು. ಬಳಿಕ ಬಾಲಕಿಯರನ್ನು ಮಠಕ್ಕೆ ಕರೆದುಕೊಂಡು ಹೋಗಿದ್ದೆವು. ಮಠಕ್ಕೆ ಕರೆದೊಯ್ದದಾಗ ಲೇಡಿ ವಾರ್ಡನ್ ಕೆಟ್ಟದಾಗಿ ನಡೆದುಕೊಂಡ್ರು. ನಾನಾಗಲಿ, ಪತಿಯಾಗಲಿ ಯಾವುದೇ ಷಡ್ಯಂತ್ರ ಮಾಡಿಲ್ಲ. ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿ ಎಂದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";