ಜಾರಿಯಾಗಲಿದೆ 8ನೇ ವೇತನ ಆಯೋಗ!ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್

ಉಮೇಶ ಗೌರಿ (ಯರಡಾಲ)

ದೇಶಾದ್ಯಂತ ಇರುವ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಸ್ತುತ 7ನೇ ವೇತನ ಆಯೋಗದ ಶಿಫಾರಸುಗಳು ಅನ್ವಯಿಸುತ್ತಿವೆ, ಉದ್ಯೋಗಿಗಳೂ ಇದರ ಲಾಭ ಸಿಗುತ್ತಿದೆ. ಆದರೆ, ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ವೇತನ ವೇತನ ಸಿಗುತ್ತಿದೆ ಎಂಬುದು ನೌಕರರ ಕ್ಲೇಶವಾಗಿದೆ. ಈ ಸಂಬಂಧ ಜ್ಞಾಪಕ ಪತ್ರವನ್ನು ಸಿದ್ಧಪಡಿಸುತ್ತಿದ್ದು, ಶೀಘ್ರವೇ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ನೌಕರರ ಸಂಘಗಳು ತಿಳಿಸಿವೆ. ಈ ಜ್ಞಾಪಕ ಪತ್ರದಲ್ಲಿನ ಶಿಫಾರಸ್ಸುಗಳ ಪ್ರಕಾರ ವೇತನ ಹೆಚ್ಚಿಸಬೇಕು ಅಥವಾ 8ನೇ ವೇತನ ಆಯೋಗ ಜಾರಿಗೆ ತರಬೇಕು ಎಂಬ ಬೇಡಿಕೆ ಅದರಲ್ಲಿ ಇದೆ ಎನ್ನಲಾಗಿದೆ.

ಪ್ರಸ್ತುತ ಕನಿಷ್ಠ ವೇತನ ಮಿತಿಯನ್ನು 18 ಸಾವಿರ ರೂ.ಗೆ ಇರಿಸಲಾಗಿದೆ ಎಂದು ಕೇಂದ್ರ ನೌಕರರ ಸಂಘಟನೆಗಳು ಹೇಳುತ್ತವೆ. ಇದರಲ್ಲಿ ಇನ್‌ಕ್ರಿಮೆಂಟ್‌ನಲ್ಲಿ ಫಿಟ್ ಮೆಂಟ್ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರಸ್ತುತ, ಈ ಅಂಶವು 2.57 ಪಟ್ಟು ಇದೆ, ಆದರೆ 7 ನೇ ವೇತನ ಆಯೋಗದಲ್ಲಿ ಇದನ್ನು 3.68 ಪಟ್ಟು ಉಳಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ. ಇದೇ ವೇಳೆ ನೌಕರರ ಕನಿಷ್ಠ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ

ಹೊಸ ವ್ಯವಸ್ಥೆಯನ್ನು ಕೂಡ ಸರ್ಕಾರ ಆರಂಭಿಸಬಹುದು
ಮೂಲಗಳ ಪ್ರಕಾರ ಇದೀಗ 7ನೇ ವೇತನ ಆಯೋಗದ ನಂತರ ಹೊಸ ವೇತನ ಆಯೋಗ ಬರುವುದಿಲ್ಲ ಎನ್ನಲಾಗುತ್ತಿದ್ದು. ಬದಲಾಗಿ ಹೊಸ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲು ಹೊರಟಿದ್ದು, ಇದರಿಂದ ಸರ್ಕಾರಿ ನೌಕರರ ವೇತನ ತಾನಾಗಿಯೇ ಹೆಚ್ಚಾಗಲಿದೆ. ಇದು ‘ಸ್ವಯಂಚಾಲಿತ ವೇತನ ಪರಿಷ್ಕರಣೆ ವ್ಯವಸ್ಥೆ’ ಆಗಿರುವ ಸಾಧ್ಯತೆ ಇದೆ, ಇದರಲ್ಲಿ ಡಿಎ ಶೇಕಡಾ 50 ಕ್ಕಿಂತ ಹೆಚ್ಚಿದ್ದರೆ, ಸಂಬಳದಲ್ಲಿ ಸ್ವಯಂಚಾಲಿತ ಪರಿಷ್ಕರಣೆ ಇರಲಿದೆ. ಇದು ಸಂಭವಿಸಿದಲ್ಲಿ, 68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 52 ಲಕ್ಷ ಪಿಂಚಣಿದಾರರು ಅದರ ನೇರ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಾಗ ಅಧಿಸೂಚನೆ ಹೊರಡಿಸಿ ಅಧಿಕೃತಗೊಳಿಸಲಾಗುವುದು ಎನ್ನಲಾಗುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ಲೋವರ್ ಲೆವಲ್ ನಿಂದ ಮಿಡ್ಲ್ ಲೆವಲ್ ನೌಕರರ ವೇತನ ಹೆಚ್ಚಾಗಬೇಕು ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು 2023 ರಲ್ಲಿ ಹೊಸ ವೇತನ ಸೂತ್ರವನ್ನು ಜಾರಿಗೆ ತಂದರೆ, ಮಧ್ಯಮ ಹಂತದ ಉದ್ಯೋಗಿಗಳಿಗೆ ಹೆಚ್ಚಿನ ಲಾಭ ಸಿಗದೇ ಇರಬಹುದು. ಆದರೆ,  ಕಡಿಮೆ ಆದಾಯದ ಗುಂಪಿನ ನೌಕರರು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಅವರ ಮೂಲ ವೇತನ 3 ಸಾವಿರದಿಂದ 21 ಸಾವಿರ ರೂ.ವರೆಗೆ ಹೆಚ್ಚಾಗಬಹುದು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";