Thursday, September 19, 2024

ಸೆ.5 ರಂದು ರೈತರಿಗೆ ತೊಂದರೆ ಕೊಡುತ್ತಿರುವ ಯೂನಿಯನ್ (ಕಾರ್ಪೂರೆಶನ್) ಬ್ಯಾಂಕಗೆ ಮುತ್ತಿಗೆ:ಮಹಾಂತೇಶ ಕಮತ

ಬೈಲಹೊಂಗಲ:  ರೈತರಿಗೆ ತೊಂದರೆ ಕೊಡುತ್ತಿರುವ ಯೂನಿಯನ್ (ಕಾರ್ಪೂರೆಶನ್) ಬ್ಯಾಂಕ ಹಠಾವೋ ಚಳುವಳಿ ಪ್ರಾರಂಭಿಸಬೇಕಾದ ಅನಿವಾರ್ಯತೆ ಬಂದಿದೆ ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಕೂಲಿ ಕಾರ್ಮಿಕರ ಹಿತಾಶಕ್ತಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಹೇಳಿದರು.

ನಗರದ ಪ್ರವಾಸಿ ಮಂದರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಮಹಾಂತೇಶ ಕಮತ ಅವರು 31 ಡಿಸೆಂಬರ್ 2017 ರಿಂದ ಕಟಬಾಕಿ ಆದಂತಹ ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನು ರಾಜ್ಯ ಸರ್ಕಾರ ಎರಡು ಲಕ್ಷದವರೆಗೆ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು ಆದರೆ ರಾಜ್ಯ ಸರ್ಕಾರ  ರೈತರ ಸಾಲವನ್ನು ಮನ್ನಾ ಮಾಡದೆ ರೈತರನ್ನು ಸಂಪೂರ್ಣವಾಗಿ ಸಂಕಟಕ್ಕೆ ತಂದು ನಿಲ್ಲಿಸಿದೆ. ರೈತರು ಸಾಲವನ್ನು ಕಟ್ಟದೆ ಕಟಬಾಕಿ (ಸುಸ್ತಿದಾರ) ದಾರನಾಗಿದ್ದು ಸಾಲದ ಮೊತ್ತಕ್ಕಿಂತ ಎರಡು ಪಟ್ಟು ಬಡ್ಡಿ ಹೆಚ್ಚಾಗಿರುವುದರಿಂದ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳು ಓಟಿಎಸ್ ಮುಖಾಂತರ ಅಸಲಿನಲ್ಲಿ 30 ರಿಂದ 90 ಪರ್ಸೆಂಟ್ ವರೆಗೆ ಕಡಿಮೆ ಮಾಡಿ ರೈತರಿಗೆ ಬ್ಯಾಂಕ್ ಗಳು ಸಾಲ ಮರುಪಾವತಿಸಲು ಅವಕಾಶವನ್ನು ಮಾಡಿಕೊಟ್ಟಿವೆ.

ಆದರೆ ಕಾರ್ಪೊರೇಷನ್ ಅಥವಾ ಯೂನಿಯನ್ ಬ್ಯಾಂಕ್ ಮಾತ್ರ ಅನೇಕ ಬಾರಿ ರೈತರು ಮನವಿ ಮಾಡಿಕೊಂಡರೂ ಕೂಡ ರೈತರಿಗೆ ನೋಟಿಸ್ ಕೊಡುವುದು, ಸಾಲ ವಸುಲಾತಿಗೆ ಮನೆಗೆ ಬರುವುದು, ಅಕೌಂಟ್ ಬ್ಲಾಕ್ ಮಾಡುವುದು ಹೀಗೆ ನಾನಾ ರೀತಿ ರೈತರಿಗೆ ತೊಂದರೆ ಕೊಡುತ್ತಿರುವುದರಿಂದ ಯೂನಿಯನ್ (ಕಾರ್ಪೂರೆಶನ್)ಬ್ಯಾಂಕ್  ಹಠಾವೋ ಚಳುವಳಿ ಪ್ರಾರಂಭಿಸಬೇಕಾದ ಅನಿವಾರ್ಯತೆ ಬಂದಿದೆ.ಆದ್ದರಿಂದ ಬರುವ ತಿಂಗಳು ಸಪ್ಟಂಬರ್ 5 ರಂದು ಬೆಳಗಾವಿಯ ಯೂನಿಯನ್ ಬ್ಯಾಂಕ್ (ಕಾರ್ಪೊರೇಷನ್ ಬ್ಯಾಂಕಿನ) ರಿಜನಲ್ ಆಫೀಸಿಗೆ ಬ್ಯಾಂಕ್‌ ಹಠಾವೋ ಘೋಷಣೆಯೊಂದಿಗೆ ಸಾವಿರಾರು ರೈತರು ಮುತ್ತಿಗೆ ಹಾಕುತ್ತಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಬೆಳಗಾವಿ ಜಿಲ್ಲೆಯ ರೈತ ಬಾಂಧವರು ಹಾಗು ಬ್ಯಾಂಕಿನ ಬೆಳೆಸಾಲ ಕಟಬಾಕಿದಾರರು ಮತ್ತು ಸಮಸ್ತ ರೈತ ಗ್ರಾಹಕರು ಬರುವ ಸಪ್ಟಂಬರ್ 5 ರಂದು ಮುಂಜಾನೆ 10 ಗಂಟೆಗೆ ಬೆಳಗಾವಿಯ ಖಾನಾಪೂರ ರೋಡ,  ಆರ್ ಪಿ ಡಿ ಸರ್ಕಲ್‌ ಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಬರಬೇಕೆಂದು ಮಹಾಂತೇಶ ಕಮತ ಅವರು ವಿನಂತಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9743365540,9686769096, 9008048008, 9164639912.

 

 

ಜಿಲ್ಲೆ

ರಾಜ್ಯ

error: Content is protected !!