ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಬಸವಸಿದ್ದ ಲಿಂಗ ಸ್ವಾಮೀಜಿ

ಉಮೇಶ ಗೌರಿ (ಯರಡಾಲ)

ಬೈಲಹೊಂಗಲ: ತಾಲೂಕಿನ ಯರಡಾಲ ಗ್ರಾಮದಲ್ಲಿ ಮಂಗಳವಾರ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೈ ಬಸವೇಶ ಜಯಘೋಷದೊಂದಿಗೆ ಬಸವೇಶ್ವರರ ಮೂರ್ತಿ ಮೆರವಣಿಗೆ ಮಾಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಶ್ರೀಗಳು, ಗಣ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ನೇಗಿನಹಾಳದ ಶ್ರೀ ಬಸವಸಿದ್ದ ಲಿಂಗ ಸ್ವಾಮೀಜಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮತ್ತು ಸಮಾನತೆಯ ಹರಿಕಾರ ಬಸವಣ್ಣನವರ ತತ್ವಗಳನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಿದೆ ಎಂದರು.

ಬಸವೇಶ್ವರ ಮೂರ್ತಿ ಮೆರವಣಿಗೆ ಚಾಲನೆ

ಈ ವೇಳೆ ದುಂಡಯ್ಯಾ ಹೀರೆಮಠ ಅವರು ಮಾತನಾಡಿ ಮೂರ್ತಿ ಮರವಣಿಗೆ ಹಾಗೂ ಪ್ರತಿಷ್ಠಾಪನೆಗೆ ಸೀಮಿತವಾಗಿದೆ ಬಸವಣ್ಣನವರ ಆಚಾರ ವಿಚಾರಗಳು ನಡೆ ನುಡಿಯಲ್ಲಿ ಇರಲಿ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿಜಯ ಬನಶೆಟ್ಟಿ, ಶಂಕರ ಮುರಗೋಡ,ವಿ ಎಸ್ ಪಾಟೀಲ, ಸುರೇಶ ಹೂಗಾರ, ಉಮೇಶ ಗೌರಿ, ಸಿ ಆರ್ ಪಾಟೀಲ, ಕುಮಾರ ಮುರಗೋಡ, ಬಸನಗೌಡ ಪಾಟೇಲ, ಶ್ರೀಶೈಲ ಪಾಟೀಲ, ಅರುಣ ಖೊದಾನಪೂರ, ರಾಮು ಮುರಗೋಡ, ಮಡಿವಾಳಪ್ಪ ಗೌರಿ, ದೇವೇಂದ್ರ ಮಡಿವಾಳರ,ಮಲ್ಲಿಕಾರ್ಜುನ ಮುದಿನಾಯ್ಕರ, ಸಂತೋಷ ಪಾಟೀಲ, ನಿಂಗಪ್ಪ ರಾಜಗೋಳಿ, ಮಹಾಂತೇಶ ಬೈಲಪ್ಪನವರ, ಶಿವನಿಂಗಪ್ಪ ಇಂಗಳಗಿ,ಈರಣ್ಣ ಇಂಗಳಗಿ, ರಾಜು ಕಮತಗಿ, ಎಸ್ ಎಮ್ ಪಾಟೀಲ, ಶಂಕರ ರಾಹುತ ಸೇರಿದಂತೆ ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

 

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";