ಸುದ್ದಿ ಸದ್ದು ನ್ಯೂಸ್
ಲೇಖನ: ಶರಣಪ್ಪ ಮ ಸಜ್ಜನ
ಮಾನ್ಯತೆ ಇಲ್ಲದ ಬ್ರಾಹ್ಮಣ ಧರ್ಮ ಇದೆ ಎಂದಾದರೆ, ಹಿಂದೂ ಧರ್ಮ ಎಲ್ಲಿ ಹೋಯಿತು?
ಜೈ ಬಸವೇಶ್ವರ ಎನ್ನದೆ, ಜೈ ಶ್ರೀರಾಮ್ ಎನ್ನುವ ಲಿಂಗಾಯತ ಯುವಕರೇ,
ಜೈ ಬುದ್ಧ ಎನ್ನದೆ, ಜೈ ಶ್ರೀರಾಮ್ ಎನ್ನವ ಬೌದ್ಧ ಯುವಕರೇ,
ಜೈ ಅಂಬೇಡ್ಕರ್ ಎನ್ನದೇ, ಜೈ ಶ್ರೀರಾಮ್ ಎನ್ನುವ ಅಂಬೇಡ್ಕರ್ ವಾದಿಗಳೇ,
ನೀವು “ಹಿಂದೂ ನಾವೆಲ್ಲಾ ಒಂದು” ಎಂದು ಘೋಷಿಸಿದರೆ, ಬ್ರಾಹ್ಮಣರು ತಮಗೆ ‘ಬ್ರಾಹ್ಮಣ ಧರ್ಮ’ ಇದೆ ಎಂದು ಹೇಳುತ್ತಿರುವುದನ್ನು ನಂಬಿರುವುದನ್ನು ನೋಡಿ. ಅವರಿಗೆ ಜನಿವಾರ ಧರಿಸುವ ಹಕ್ಕನ್ನು ಶಾಸ್ತ್ರ- ಮನುಸ್ಮೃತಿಗಳು ನೀಡಿವೆ. ನಿಮಗೆ ಆ ಹಕ್ಕು ಇಲ್ಲ. ಆದರೂ ನಿಮ್ಮಿಂದ “ಹಿಂದೂ ನಾವೆಲ್ಲಾ ಒಂದು” ಎಂದು ಹೇಳಿಸಲಾಗುತ್ತಿದೆ. ಈಗ ‘ಬ್ರಾಹ್ಮಣ ಧರ್ಮ’ ಇದೆ ಎಂದ ಮೇಲೆ, ಹಿಂದೂ ಧರ್ಮವನ್ನು ಒಡೆದಂತೆ ಆಗಲಿಲ್ಲವೆ? ಬ್ರಾಹ್ಮಣರಿಗೆ ಬ್ರಾಹ್ಮಣ ಧರ್ಮ ಇದೆಯೆಂದಾದರೆ, ನಿಮಗೆ ‘ಹಿಂದೂ ಧರ್ಮ’ ಇದೆ ಎಂದು ತಲೆತುಂಬಲಾಗಿದೆ. ಭಾರತ ದೇಶದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, “ಹಿಂದೂ ಧರ್ಮ ಎಂಬುವುದು ಇಲ್ಲ, ಹಿಂದೂ ಎಂಬುವುದು ಜೀವನ ಪದ್ಧತಿ” ಎಂದು ಹೇಳಿದೆ.
ಸಾಹಿತ್ಯಿಕವಾಗಿ ಹಿಂದೂ ಪದದ ಅರ್ಥ:
ಕಳ್ಳ, ಚೋರ, ಗುಲಾಮ
SC, ST & OBC ಎಂಬ ಬಹುಜನರ ಮೇಲೆ ಹಿಂದೂ ಪದವನ್ನು ಹೇರಿ ‘ಗುಲಾಮ’ ರನ್ನಾಗಿ ಮಾಡಲಾಗಿದೆ.
ಮನುಸ್ಮೃತಿಯ ಪ್ರಕಾರ ಶೂದ್ರ ಮತ್ತು ಅಂತ್ಯಜರು ವರ್ಣಾಶ್ರಮದ ಮೇಲ್ಜಾತಿಗಳಾದ ಬ್ರಾಹ್ಮಣ ಕ್ಷತ್ರಿಯ & ವೈಶ್ಯರ ಸೇವೆ ಮಾಡಿಕೊಂಡಿರುವುದೇ ಧರ್ಮ ಎಂಬ ಕಟ್ಟಳೆಯನ್ನು ಮಾಡಲಾಗಿದೆ. ‘ಸೇವೆ’ ಎಂಬುವುದು ಸಮಾಜ ಸೇವೆ ಎಂಬ ಅರ್ಥ ಕೊಡುತ್ತಿದ್ದರೆ, ಕೇವಲ
೨ – ೩% ಇರುವ ಮೇಲ್ಜಾತಿಯವರಿಗೆ ೯೭% ಬಹುಜನರಿಂದ ಸಮಾಜ ಸೇವೆ ಅವಶ್ಯವೇ? ಮನುಸ್ಮೃತಿ ಹೇಳಿದ ಸೇವೆ ಎಂದರೆ ಯಾವುದೇ ಹಕ್ಕಿಲ್ಲದೆ ನಾಯಿಯಂತೆ ಮೂಲೆಯಲ್ಲಿ ಬುಕುವುದಾಗಿದೆ.
ಯಾವುದೇ ಹೋರಾಟ ಇಲ್ಲದೆ EWS ದವರಿಗೆ ೧೦% ಮೀಸಲಾತಿಯನ್ನು ಪಡೆದಂತೆ, ಬ್ರಾಹ್ಮಣ ಧರ್ಮ ಎಂಬುದಕ್ಕೆ ಮಾನ್ಯತೆಯನ್ನು ಪಡೆಯಲೆಂದು ಆಶಿಸೋಣ. ಹೀಗೆ ಬ್ರಾಹ್ಮಣ ಧರ್ಮ ಇದೆ ಎಂದ ಮೇಲೆ, ಹಿಂದೂ ಧರ್ಮ ಇಲ್ಲವೆಂದ ಮೇಲೆ, SC, ST & OBC ಗಳು ಹಿಂದೂ ಅಲ್ಲವೆಂದಾಯಿತು. ಹಿಂದೂ ಎಂಬುವುದು ಧರ್ಮವಲ್ಲವೆಂದು, ಅದು ಜೀವನ ಪದ್ಧತಿಯೆಂದು ದೇಶದ ಘನ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಎಲ್ಲಾ ಬಹುಜನರನ್ನು ಇಲ್ಲದ ಹಿಂದೂ ಧರ್ಮದ ಕೆಳಗೆ ಸೇರಿಸಿ, ಯಾವುದೇ ಧಾರ್ಮಿಕ ಹಕ್ಕುಗಳನ್ನು ನೀಡದೆ, ವರ್ಣಾಶ್ರಮ ಶೂದ್ರ & ಅಂತ್ಯಜರ ಮೇಲೆ ಹೇರಿದ ಕಟ್ಟಳೆಗಳಿಂದ ಬಂಧಿಸಿಟ್ಟಿರುವುದು ನ್ಯಾಯವೇ? “ಹಿಂದೂ ನಾವೆಲ್ಲಾ ಒಂದು” ಎಂಬ ಘೋಷಣೆಯಲ್ಲಿ ‘ಬ್ರಾಹ್ಮಣ ಧರ್ಮ’ ಎಂಬ ಪ್ರತ್ಯೇಕತೆ ಏಕೆ? ಬ್ರಾಹ್ಮಣ ಧರ್ಮ ಎಂಬ ಪ್ರತ್ಯೇಕತೆ ಬೇಕಾದರೆ, SC, ST & OBC ಎಂಬ ಬಹುಜನರು ಅವರವರ ಸಮುದಾಯಗಳ ಸಂಸ್ಕೃತಿ ಆಚಾರ ವಿಚಾರ ಧಾರ್ಮಿಕ ಸಾಂಸ್ಕೃತಿಕ ನಂಬಿಕೆ ಮತ್ತು ಹಕ್ಕುಗಳನ್ನು ಹೊಂದಲು ಸ್ವತಂತ್ರರಲ್ಲವೆ?
ಕೂಡಲಸಂಗಮದೇವಾ, ನಿಮ್ಮ ಶರಣ ಸ್ವತಂತ್ರ.
ಜಗಜ್ಜ್ಯೋತಿ ಬಸವಣ್ಣನವರು
ಲೇಖನ: ಶರಣಪ್ಪ ಮ ಸಜ್ಜ