ಸುದ್ದಿ ಸದ್ದು ನ್ಯೂಸ್
ಬೆಳಗಾವಿ: ಬೆಳಗಾವಿ ನಗರಕ್ಕೆ ಹೊಂದಿಕೊಂಡು ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಇರುವ ಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡಿರುವದನ್ನು ಖಂಡಿಸಿ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿಗಳು ಸೋಮವಾರ ಡಿಸಿ ಕಚೇರಿ ಎದುರು ಅರಬೆತ್ತಲೆ ಸ್ಥಿತಿಯಲ್ಲಿ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅನಧಿಕೃತವಾಗಿದೆ ಸ್ಥಾಪಿಸಲಾದ ಜೈ ಕಿಸಾನ್ ಮಾರುಕಟ್ಟೆಯಿಂದಾಗಿ ಎಪಿಎಂಸಿ ಯಾರ್ಡ್ ನಲ್ಲಿ ಇದ್ದ ತರಕಾರಿ ಮಾರುಕಟ್ಟೆ ಸಂಪೂರ್ಣವಾಗಿ ಸ್ಥಗಿತವಾಗಿದೆ.ಲಕ್ಷ ಲಕ್ಷ ಹಣ ಪಾವತಿ ಮಾಡಿ ಎಪಿಎಂಸಿ ಯಾರ್ಡ್‌ನಲ್ಲಿ ಮಳಿಗೆ ಪಡೆದಿದ್ದೆವು ಆದರೆ ಖಾಸಗಿ ತರಕಾರಿ ಮಾರುಕಟ್ಟೆಯಿಂದ ಎಪಿಎಂಸಿ ತರಕಾರಿ ಮಾರುಕಟ್ಟೆ ವಹಿವಾಟು ಸ್ಥಗಿತಗೊಂಡಿದ್ದು, ಖಾಸಗಿ ತರಕಾರಿ ಮಾರುಕಟ್ಟೆ ಬಂದ್ ಮಾಡಿ ಇಲ್ಲವಾದರೆ ನಮ್ಮೆಲ್ಲರಿಗೂ ಸಾಮೂಹಿಕವಾಗಿ ದಯಾಮರಣಕ್ಕೆ ಅನುಮತಿ ನೀಡಿ ಎಂದು ಪ್ರತಿಭಟನಾ ನಿರತ ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜೈ ಕಿಸಾನ್ ಮಾರುಕಟ್ಟೆಯು ಅನಧಿಕೃತ ಎಂದು ಪ್ರಾರಂಭದಿಂದಲೂ ವಾದಿಸುತ್ತ ಬಂದಿರುವ ಎಪಿಎಂಸಿ ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳು ಎಪಿಎಂಸಿ ಆವರಣದಲ್ಲಿ ಸತ್ಯಾಗ್ರಹ ಮಾಡಿ ಜಿಲ್ಲಾಧಿಕಾರಗಳ ಕಚೇರಿಗೆ ಆಗಮಿಸಿ ಅರಬೆತ್ತಲೆಯಾಗಿ ಪ್ರತಿಭಟಿಸಿದ್ದಾರೆ.