ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಅವರನ್ನು ಅಭಿನಂದಿಸಿದ: ಮೋಹನ ಪಾಟೀಲ

ಉಮೇಶ ಗೌರಿ (ಯರಡಾಲ)

ಬೈಲಹೊಂಗಲ: ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಷಯವಾರು ಕಾರ್ಯಾಗಾರ ನಡೆಸಿ ಮಾರ್ಗದರ್ಶನ ಮಾಡಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌. ಎಸ್.ಎಲ್.ಸಿ ಪರೀಕ್ಷೆಗೆ ಸನ್ನದ್ಧರಾಗುವಂತೆ ಪ್ರೇರೇಪಿಸಿದ ಬೈಲಹೊಂಗಲದ ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ ಇವರನ್ನು ಕೇಂದ್ರ ಬಸವ ಸಮಿತಿಯ ನಿರ್ದೇಶಕ ಮೋಹನ  ಪಾಟೀಲ ಅವರು ವಚನ ಸಾಹಿತ್ಯ ಗ್ರಂಥಗಳನ್ನು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಖಜಾಂಚಿ ಗಿರೀಶ ಚಿನ್ನಪ್ಪಗೌಡರ , ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ರಾಜು ಹಕ್ಕಿ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧೀಕ್ಷಕ ಪ್ರಶಾಂತ ತೇಗೂರ, ಮೂಗಬಸವ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಹಿರೇಮಠ , ಸಂಪಗಾವಿಯ ಆರ್.ಇ.ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ ಉಳ್ಳೇಗಡ್ಡಿ ಉಪಸ್ಥಿತರಿದ್ದರು.

Share This Article
";