ಬೀದರ್: ಜಿಲ್ಲೆಯ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಪಂಢರಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾತ್ರಿ ಅರ್ಥಪೂರ್ಣ ರೀತಿಯಲ್ಲಿ ಶಾಲಾ ವಾರ್ಷಿಕೋತ್ಸವ ನೆರವೇರಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಶಾಲೆ ಮುಖ್ಯಶಿಕ್ಷಕ ಚೆನ್ನಪ್ಪ ಬಿರಾದಾರ ಹಾಗೂ ಸಿಬ್ಬಂದಿ ಉತ್ಸಾಹದಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಗಮನಿಸಿ ನಿಜಕ್ಕೂ ತುಂಬಾ ಸಂತೋಷವಾಗಿದೆ. ತಾಲ್ಲೂಕಿನ ಅತ್ಯುತ್ತಮ ಶಾಲೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು. ಖಾಸಗಿ ಶಾಲೆಯಲ್ಲಿ ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾದ ಶಿಕ್ಷಕರಿದ್ದರೇ, ಸರ್ಕಾರಿ ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ನೇಮಕಗೊಂಡ 24ಕ್ಯಾರೆಟ್ ಗುಣಮಟ್ಟದ ಶಿಕ್ಷಕರಿರುತ್ತಾರೆ. ಕಾರಣ ಪಾಲಕರು ಬಣ್ಣ ನೋಡಿ ಮಾರುಹೋಗದೇ ಗುಣಗಳಿಗೆ ಮಹತ್ವ ನೀಡಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಲಕ್ಷ್ಮಣ ಹೆಂಬಾಡೆ, ಗ್ರಾ.ಪಂ ಅಧ್ಯಕ್ಷ ಬಸವರಾಜ ಬರದಾಬಾದಿ, ಸದಲಾಪುರ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ವೇದಿಕೆಯಲ್ಲಿದ್ದರು.
ದಯಾನಂದ ಹಾಳಸೇತ, ದಿಲೀಪ ಕಲ್ಲೂರ, ರಾಜಕುಮಾರ ಬನ್ನಳ್ಳಿ, ಕಲ್ಲಪ್ಪ ಪುಜಾರಿ, ಸೋಮಶೇಖರ ಪಾಟೀಲ, ಶಿವಲಿಂಗಪ್ಪ ಹಂಡಿ, ಶಿವಾನಂದ ಪರಮಶೆಟ್ಟಿ, ಶಿವಪ್ರಕಾಶ ಹಾರಕೂಡ, ನಾಗಣ್ಣ ಬಿರಾದಾರ, ಡಿ.ಕೆ.ಸುರೇಶ ಮೊದಲಾದವರು ಇದ್ದರು.