ಬೀದರ್: ಜಿಲ್ಲೆಯ ಹುಮನಾಬಾದ್ ಆರ್ಬಿಟ್ ಸಂಸ್ಥೆಯ ವತಿಯಿಂದ ಪಟ್ಟಣದ ಆರ್ಬಿಟ್ ಸಂಸ್ಥೆ ಪ್ರಾಂಗಣದಲ್ಲಿ ಮಂಗಳವಾರ ” ಸಾಮರಸ್ಯ, ಸಮಾನತೆ, ನಮ್ಮ ಶಿಲ್ಪಿ ನಾವೇ’ ಶಿರ್ಷಿಕೆ ಅಡಿ ವಿಶ್ವ ಮಹಿಳಾ ದಿನಾಚರಣೆ ಅರ್ಥಪೂರ್ಣ ರೀತಿಯಲ್ಲಿ ನೆರವೇರಿತು.
ದಿವ್ಯಸಾನಿಧ್ಯ ವಹಿಸಿದ್ದ ಕಲ್ಬುರ್ಗಿ ಧರ್ಮಕ್ಷೇತ್ರ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂದ ಮಾತನಾಡಿ, ಮಹಿಳೆ ಈಗ ಹಿಂದೆಂದಿಗಿಂತ ಪ್ರತಿಯೊಂದು ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನ ಸ್ಪರ್ಧೆಯೊಡ್ಡಿ ಆರ್ಥಿಕ ಸಬಲೀಕರಣ ಸಾಧಿಸಿದ್ದಾರೆ. ರಾಜಕಾರಣಿಗಳಿಗೆ ಪಕ್ಷದ ಸಿದ್ಧಾಂತ ಜನರ ಅಭಿವೃದ್ದಿಗಿಂತ ವ್ಯಯಕ್ತಿಕ ಸ್ವಾರ್ಥ ಮುಖ್ಯವಾಗಿಸಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಪ್ರೊ.ಹಣಮಂತರಾವ ವಿಶೇಷ ಉಪನ್ಯಾಸ ನೀಡಿದರು. ಸಿಸ್ಟರ್ ರೀನಾ ಡಿ’ಸೋಜ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಖ್ಯಾತ ವಕೀಲೆ ವಿರೇಖಾ ಪಾಟೀಲ, ಗೀತಾ ಭರಶೆಟ್ಟಿ ಮಾತನಾಡಿದರು. ಫಾ.ವಿಕ್ಟರ್ ಅನೀಲ ವಾಸ್, ಸಿಸ್ಟರ್ ಗ್ರೆಸಿ, ಸಿಸ್ಟರ್ ಮಿನಿ ಮ್ಯಾಥ್ಯು, ಸಿಸ್ಟರ್ ರೀನಾ, ಮೇರಿ ಮತ್ತಿತರರು ಇದ್ದರು.