ಬೀದರ್: ಜಿಲ್ಲೆಯ ಹುಮನಾಬಾದ್ ಪಟ್ಟಣದ ಗೌರ್ಮೆಂಟ್ ಜುನಿಯರ್ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಿಶ್ವಜಲ ದಿನಾಚರಣೆ ಇಂದು ನಡೆಯಿತು.
ಕಾರ್ಯಕ್ರಮ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ ಸಿದ್ದೇಶ್ವರ ಸರ್ಕಾರಿ ಕಾಲೇಜನಲ್ಲಿ ಅಧ್ಯಯನ ಮಾಡಿ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಾನೇ ನಿದರ್ಶನ ಎಂದರು. ಖಾಸಗಿ, ಸರ್ಕಾರಿ ಶಾಲೆ ಎಂಬ ಭಾವನೆ ತಂದುಕೊಳ್ಳದೇ ಶ್ರದ್ದೆಯಿಂದ ಓದಿ ಸಾಧನೆ ಗೈಯ್ಯಬಹುದೆಂದು ತಿಳಿಸಿದರು.
ಸಮುದಾಯ ಸಂಘಟನಾ ಅಧಿಕಾರಿ ಮೀನಾಕುಮಾರಿ ಬೋರಾಳಕರ್, ಜಾನಪದ ಪರಿಷತ್ ಅಧ್ಯಕ್ಷ ಶರದಕುಮಾರ ನಾರಾಯಣಪೇಟಕರ್ ಮಾತನಾಡಿದರು. ಪ್ರಾಚಾರ್ಯ ಪಿ.ಆರ್.ಹುಗ್ಗಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಹಿರಿಯ ಉಪನ್ಯಾಸಕ ಡಾ.ತುಳಸಿರಾಮ ಗಾಯದನಕರ್, ಎನ್.ಎಸ್.ಎಸ್ ಘಟಕಾಧಿಕಾರಿ ಡಾ.ತಿಪ್ಪಣ್ಣ ಕೆಂಪೆನೋರ್ , ಡಾ.ಶ್ರವಣಕುಮಾರ ಟೋಂಪೆ, ಗಾಂಧಿ ಸೂರಾಚಂದ, ಗೋರಖನಾಥ ಮತ್ತಿತರರು ಭಾಗವಹಿಸಿದ್ದರು