ಬಿಜೆಪಿಯಲ್ಲಿ ಲಿಂಗಾಯತ ಕಾರ್ಯಕರ್ತರಿಗೆ ಗೌರವವಿಲ್ಲ: ರಾಜು ಟೋಪಣ್ಣವರ್

ಉಮೇಶ ಗೌರಿ (ಯರಡಾಲ)

ಬೆಳಗಾವಿ: ಬಿಜೆಪಿಯಲ್ಲಿ ಲಿಂಗಾಯತ ಕಾರ್ಯಕರ್ತರಿಗೆ ಅಥವಾ ಮುಖಂಡರಿಗೆ ಯಾವುದೇ ಗೌರವವಿಲ್ಲ. ಹೀಗಾಗಿ ಪಕ್ಷ ತ್ಯಜಿಸಿದ್ದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಜ್‌ಕುಮಾರ್ ಟೋಪಣ್ಣವರ್ ಅವರು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮತ್ತು ಉನ್ನತ ಹುದ್ದೆಗಳಲ್ಲಿ ಸಮುದಾಯದ ಹಲವಾರು ಸಕ್ರೀಯ ಕಾರ್ಯಕರ್ತರು ತಾರತಮ್ಯಗಳನ್ನು ಅನುಭವಿಸಿದ್ದಾರೆಂದು ಹೇಳಿದರು.

ಇದೇ ವೇಳೆ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ವಂಚಿತ ಮಾಜಿ ಕಾರ್ಪೊರೇಟರ್ ದೀಪಕ ಜಮಖಂಡಿ ಹಾಗೂ ಬೆಳಗಾವಿ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಗೂಳಪ್ಪ ಹೊಸಮನಿ ಅವರಂತಹ ಲಿಂಗಾಯತ ಸಮಾಜದ ಉತ್ತಮ ನಾಯಕರನ್ನು ಬಿಜೆಪಿ ಕಡೆಗಣಿಸಿದ ರೀತಿಯನ್ನು ಪ್ರಸ್ತಾಪಿಸಿದರು.

Share This Article
";