ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೋಮವಾರ ತಿಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸುಮಾರು 80 ಪೈಸೆಗಳಷ್ಟು ಹೆಚ್ಚಾಗಲಿದೆ. 137 ದಿನಗಳ ನಂತರ ಇಂಧನ ದರದಲ್ಲಿ ಬದಲಾವಣೆಯಾಗಿದೆ. ಬೆಲೆ ಏರಿಕೆಯ ಬಳಿಕ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಪೆಟ್ರೋಲ್ ಬೆಲೆ ಲೀಟರ್‌ಗೆ 96.21 ರೂ ಆಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 87.47 ರೂ ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110.82 ರೂ., ಡೀಸೆಲ್ ಬೆಲೆ ಲೀಟರ್‌ಗೆ 95 ರೂ. ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕೋಲ್ಕತ್ತಾದಲ್ಲಿ ಕ್ರಮವಾಗಿ ಲೀಟರ್‌ಗೆ 105.51 ರೂ.ಮತ್ತು 90.62 ರೂ., ಚೆನ್ನೈನಲ್ಲಿ ಕ್ರಮವಾಗಿ 102.16 ರೂ. ಮತ್ತು 92.19 ರೂ. ಆಗಿದೆ. ಇನ್ನುಅಡುಗೆ ಅನಿಲದ ಬೆಲೆಯನ್ನೂ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂದಿನಿಂದಲೇ ಜಾರಿಗೆ ಬರುವಂತೆ ದೆಹಲಿ, ಮುಂಬೈ ಮತ್ತು ಇತರ ನಗರಗಳಲ್ಲಿ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಹೆಚ್ಚಿಸಲಾಗಿದೆ.
ದೆಹಲಿ- ಮುಂಬೈನಲ್ಲಿ ಬದಲಾವಣೆಯಾದ ದರವೇ ಅತಿ ಶೀಘ್ರದಲ್ಲಿ ಕರ್ನಾಟಕದಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ 101.42 ರೂ.ಡೀಸೆಲ್ ದರ 85.50 ರೂ. ಎಲ್ ಪಿಜಿ ಸಿಲಿಂಡರ್ ದರ 902.50 ರೂ.ಇದೆ. ಈ ಹಿಂದೆ ಪೆಟ್ರೋಲ್ ದರ 100.58 ರೂ.ಡೀಸೆಲ್ ದರ 85.01 ರೂ.ಎಲ್ ಪಿಜಿ ದರ 902.50ರೂ.ಇತ್ತು.