ಪ್ರಾಮಾಣಿಕ ಸೇವೆಯಿಂದ ಜನಮನದಲ್ಲಿ ನೆಲೆ: ಡಿವೈಎಸ್ಪಿ ಹೂಲೂರು

ಮುದಗಲ್ಲ :ಪಟ್ಟಣದ ಪೊಲೀಸ್‌ ಆವರಣದಲ್ಲಿ ವರ್ಗಾವಣೆಗೊಂಡ ಪಿಎಸ್ಐ ಡಾಕೇಶ ಅವರಿಗೆ ಬೀಳ್ಕೊಡುಗೆ ಮತ್ತು ಪಿಎಸ್ಐ ಪ್ರಕಾಶ ರಡ್ಡಿ ಡಂಬಳ ಅವರ ಸ್ವಾಗತ ಸಮಾರಂಭ ನಡೆಯಿತು.

ವರ್ಗಾವಣೆಗೊಂಡ ಪಿಎಸ್ಐ ಡಾಕೇಶ  ಅವರು ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು ಪ್ರತಿಯೊಬ್ಬ ಅಧಿಕಾರಿ ಶಿಸ್ತು ಬದ್ಧವಾಗಿ, ಕಾನೂನಾತ್ಮಕವಾಗಿ ಸೇವೆ ಸಲ್ಲಿಸಿದರೆ ಅವರ ಅಧಿಕಾರವಧಿಯ ನಂತರವೂ ಗೌರವಗಳು ದೊರೆಯುತ್ತವೆ. ಇಲಾಖೆಗಳ ನಡುವಿನ ಸಂಬಂಧಗಳು ಉತ್ತಮವಾಗಿದ್ದರೆ ಕರ್ತವ್ಯ ನಿರ್ವಹಿಸುವುದು ಸುಲಭ. ಮುದಗಲ್ಲ ಜನರು ಸಹೃದಯಿಗಳಾಗಿದ್ದು, ಸರ್ವಧರ್ಮ ದವರು ಹೊಂದಾಣಿಕೆಯಿಂದ ಕಾನೂನಿಗೆ ತಲೆಬಾಗಿ ನಡೆಯುತ್ತಾರೆ. ಹೀಗಾಗಿ ಸಮಸ್ಯೆಗಳನ್ನು ಕುಳಿತು ಬಗೆಹರಿಸಿದರೆ ಎಲ್ಲವೂ ಸಾಧ್ಯ ಎಂದರು.

ಮುದಗಲ್ಲಗೆ ಆಗಮಿಸಿರುವ ಪಿಎಸ್ಐ ಪ್ರಕಾಶ ರಡ್ಡಿ ಡಂಬಳ ಮಾತನಾಡಿ, ಡಾಕೇಶ ಅವರ ಅವರ ಕಾರ್ಯವೈಖರಿ ಮೆಚ್ಚಿಕೊಂಡು ಅಭಿಮಾನ ದಿಂದ ಬೀಳ್ಕೊಡುಗೆ ಸಮಾರಂಭಕ್ಕೆ ಇಷ್ಟೊಂದು ಜನರು ಆಗ ಮಿಸಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಇದರಿಂದಾಗಿ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ
ಪಿಎಸ್ಐ ಡಾಕೇಶ ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರದೇ ಸರ್ವಧರ್ಮಿಯ ಪ್ರೀಯರಾಗಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಮುದಗಲ್ಲ ನಾಗರಿಕರು ಅವರ ಕಾರ್ಯಗಳಿಗೆ ಸಹಕಾರ ನೀಡಿದ್ದಿರೋ ಹಾಗೆ ನನಗೂ ಸಹ ಸಹಕಾರ ನೀಡಿದರೆ ಪಿಎಸ್ಐ ಡಾಕೇಶ  ಅವರ ಸ್ಥಾನ ತುಂಬುತ್ತೇನೆ ಎಂದರು. 

ಡಿವೈಎಸ್ಪಿ ಎಸ್.ಎಸ್ ಹೂಲೂರು ಮಾತನಾಡಿ, ಸರಕಾರಿ ಸೇವೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರು ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ. ವರ್ಗಾವಣೆ ಹೊಂದಿರುವ ಪಿಎಸ್ಐ ಡಾಕೇಶ ಅವರು ಸರಕಾರಿ ಸೇವೆಯಲ್ಲಿ ಸಮಾಜದಲ್ಲಿ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಸಮಾಜ ತನ್ನಿಂತಾನೆ ಅಧಿಕಾರಿಗಳನ್ನು ಗುರುತಿಸುತ್ತದೆ ಎಂಬುವುದಕ್ಕೆ ಇವರೇ ಸಾಕ್ಷಿ ಎಂದರು.

ಈ ಸಂದರ್ಭದಲ್ಲಿ ಸಿಪಿಐ ಮಾಹಾಂತೇಶ ಸಜ್ಜನ್, ಪುರಸಭೆಯ ಮುಖ್ಯಾಧಿಕಾರಿ ಮರಿಲಿಂಗಪ್ಪ , ವಿವಿಧ ಸಂಘಟನೆಯ ಮುಖಂಡರು, ನಾಗರೀಕರು ಇದ್ದರು.

ವರದಿ: ಮಂಜುನಾಥ ಕುಂಬಾರ 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";