ಮುದಗಲ್ಲ: ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಹೋಗುತ್ತಿರುವ ಪಾದಯಾತ್ರೆಗಳಿಗೆ ಕುಂಬಾರ ಓಣಿಯಲ್ಲಿ ಅಮರಪ್ಪ ಕುಂಬಾರ ಅವರ ಮನೆಯಲ್ಲಿ ಸರಿ ಸುಮಾರು 20 ವಷ೯ಗಳಿಂದ ಅನ್ನ ದಾಸೋಹ ವ್ಯವಸ್ಥೆ ಮಾಡಿಸುತ್ತಾ ಬಂದಿದ್ದಾರೆ.
ಅಮರಪ್ಪ ಕುಂಬಾರ ಅವರು ಮೊದಲು 11ಮಂದಿಯಿಂದ ಇವತ್ತು ಸರಿ ಸುಮಾರು 350 ರಿಂದ 400 ಮಂದಿ ಪಾದಯಾತ್ರೆಗಳು ಬರುತ್ತಾರೆ ಎಂದು ಹೇಳಿದರು..ಬಾಗಲಕೋಟೆ ಸಮೀಪದ ಕದಾಪೂರಯಿಂದ ಬರುವ ಪಾದಯಾತ್ರಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು..
ವಿಶೇಷ ಎಂದರೆ ನಮ್ಮ ಮನೆಯಲ್ಲಿ ಕಂಬಿ ಪೂಜೆ ಸಲ್ಲಿಸಿ ಹಾಗೂ ಕಂಬಿಗೆ ಪ್ರಸಾದ ಸಲ್ಲಿಸಿ ನಂತರ ಪಾದಯಾತ್ರೆ ಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಮರಪ್ಪ ಕುಂಬಾರ ,ಕುಟುಂಬದ ಮಂಜುನಾಥ ಕುಂಬಾರ ,ಶಿವು ,
ನಂದಿನಿ ,ಮಲ್ಲಿಕಾರ್ಜುನ ,ಮಹಾಂತೇಶ, ಉಪಸ್ಥಿತರಿದ್ದರು…
ವರದಿ: ಮಂಜುನಾಥ ಕುಂಬಾರ