ಬೆಳಗಾವಿ:ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಬೆಳಗಾವಿ ಜಿಲ್ಲಾಧ್ಯಂತ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೆ.
ಹೌದು. ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ ತನು-ಮನ-ಧನಗಳಿಂದ ಸಂಘಟನಾ ಚತುರರಾಗಿ ನಿಷ್ಠಾವಂತ ನೌಕರರ ಪರ ಹೋರಾಡುತ್ತಾ ಸತತ ನಾಲ್ಕು ವರ್ಷ ಕಾಲ ಕೆಲಸ ಮಾಡಿದ ಸಂಗಮೇಶ ಖನ್ನಿನಾಯ್ಕರ ಅವರನ್ನು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯನಾಯಕರು 2021 ಡಿ.31 ರಂದು ಉಚ್ಚಾಟನೆ ಮಾಡಿದ್ದರು. ಇದರಿಂದ ಬೆಳಗಾವಿ ಜಿಲ್ಲಾಧ್ಯಂತ ಸಂಘದ ಸದಸ್ಯರು ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ.
ಸತತ ನಾಲ್ಕು ವರ್ಷಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನು, ಶಿಕ್ಷಣ ಮಂತ್ರಿಗಳನ್ನು, ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳನ್ನು ನಿರಂತರ ಭೇಟಿ ಮಾಡಿ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಈಡೇರಿಸಲು ಹಗಲಿರುಳು ದಕ್ಷತೆಯಿಂದ ದುಡಿಯುತ್ತಿದ್ದ ಒಬ್ಬ ನಿಷ್ಠಾವಂತ ಸೇವಕ ಸಂಗಮೇಶ ಖನ್ನಿನಾಯ್ಕರ ಅವರನ್ನು ಯಾವುದೇ ಕಾರಣಗಳಿಲ್ಲದೇ, ಇವರೊಬ್ಬ ರಾಜ್ಯ ನಾಯಕರಾಗುತ್ತಾರೆ ಎಂಬ ದುರ್ಬುದ್ಧಿಯಿಂದ ಉಚ್ಚಾಟಿಸಿ ಮತ್ತೆ 2022 ಜ.24 ಉಚ್ಚಾಟನೆ ವಾಪಸ್ ಪಡೆದಿದ್ದೇವೆ ಎಂದು ಸಂದೇಶ ರವಾನಿಸಿದ್ದರು.
ಇದಲ್ಲದೆ ಅದೇ ಸಂಘಟನೆಯ ನಾಯಕರು ಇಲಾಖೆಯಲ್ಲಿ ಇವರಿಗಾದ ಅನ್ಯಾಯವನ್ನು ಸರಿಪಡಿಸುವುದು ಇರಲಿ, ಸೌಜನ್ಯಕ್ಕಾದರೂ ಅದರ ಕುರಿತು ನ್ಯಾಯಬದ್ದ ಹೇಳಕೆಗಳನ್ನು ನೀಡದಿರುವುದು ಒಬ್ಬ ನಿಷ್ಠಾವಂತ ಸಂಘಟನಾಕಾರನಿಗೆ ಅನ್ಯಾಯ ಎಸಗಿದಂತಾಗಿದೆ.
ಇದನ್ನ ಎಲ್ಲವನ್ನು ಗಮನಿಸಿದ ಬೆಳಗಾವಿ ಜಿಲ್ಲಾಧ್ಯಂತ ಸಂಘದ ಸದಸ್ಯರು ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ. ಇಗಾಗಲೇ ಬೆಳಗಾವಿ ಜಿಲ್ಲೆಯ ಸಾವಿತ್ರಿ ಗದಗ,ಮೀನಾಕ್ಷಿ ಸುತಗಟ್ಟಿ,ಎಮ್ ಎಸ್ ಪಾಟೀಲ. ರಾಮದುರ್ಗ ತಾಲೂಕಿನ ಆರ್.ವಾಯ್.ಪಾಟೀಲ,ಎಚ್.ಬಿ. ಸಿದ್ರಾಮಪ್ಪಗೋಳ, ಸವದತ್ತಿ ತಾಲೂಕಿ ಎಮ್ ಒಡೆಯರ್,ಎಸ್.ವಾಯ್. ಉಪ್ಪಾರ್ , ಆಯ್.ಸಿ. ಭರಮನಾಯ್ಕ, ಬಿ.ಟಿ.ಭಜಂತ್ರಿ, ಆನಂದ್ ಹಂಚಿನಮನಿ.ಬೈಲಹೊಂಗಲ ತಾಲೂಕಿನ ಜಿ.ಜಿ. ಅಂಗಡಿ,ರಾಜು ಬಡ್ಲಿ .ಚೆನ್ನಮ್ಮ ಕಿತ್ತೂರು ತಾಲೂಕಿನ ಬಾಬು ಹಿರೇಮಠ್ ,ಸುರೇಶ್ ಸಕ್ರನ್ನವರ್, ಹುರಕಡ್ಲಿ ಸೇರಿದಂತೆ ಬೆಳಗಾವಿ ಜಿಲ್ಲಾಧ್ಯಂತ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ.