ಕಾನೂನು ಬಾಹಿರ ವರ್ತನೆ ನಡೆಸುತ್ತಿರುವ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು!ಅಖಂಡ ಕರ್ನಾಟಕ ರೈತ ಸಂಘದ ಆಗ್ರಹ

ಬೆಳಗಾವಿ :ರೈತರ ಮೇಲೆ ಪೋಲೀಸ್ ದೌರ್ಜನ್ಯ ಹಾಗೂ ಸುಳ್ಳು ಮೊಕದ್ದಮೆ ದಾಖಲಿಸಿ ,ಕಾನೂನು ಬಾಹಿರ ವರ್ತನೆ ನಡೆಸುತ್ತಿರುವ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪದಾಧಿಕಾರಿಗಳು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು .

ರೈತರ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಿ, ಅನಾವಶ್ಯಕವಾಗಿ ಕಾನೂನು ಬಾಹಿರವಾಗಿ,ರೈತರನ್ನು ಬಂಧಿಸಿ,ಹಿಂಡಲಗಾ ಜೈಲ್ ಬೆಳಗಾವಿಗೆ ಕರೆದೊಯ್ದ ಪೋಲಿಸರ ಕ್ರಮವನ್ನು ಖಂಡಿಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ , ಇದೇ ರೀತಿ ಬಹಳಷ್ಟು ಪ್ರಕರಣಗಳನ್ನು ಬೇರೆ ಬೇರೆ ಪೋಲಿಸ್ ಠಾಣೆಗಳಲ್ಲಿ ಸಿವಿಲ್ ಮೊಕದ್ದಮೆ ಇದ್ದಾಗಲೂ , ಪೋಲಿಸ್ ಇಲಾಖೆ ಮದ್ಯವರ್ತಿವಹಿಸುವುದು ಮತ್ತು ರಾಜಕೀಯ ಪ್ರೇರಿತವಾಗಿ ರೈತರ ಚಳುವಳಿಗಳನ್ನು ಹತ್ತಿಕ್ಕುವ ಹಾಗೂ ಚಳುವಳಿಗಳಲ್ಲಿ ಭಾಗವಹಿಸುವ ರೈತರನ್ನು ವೈಯಕ್ತಿಕವಾಗಿ ಧಮನ ಮಾಡುವ ಹಲವಾರು ಪ್ರಕರಣಗಳು ಬೆಳಗಾವಿ ಜಿಲ್ಲೆಯಾದ್ಯಂತ ನಡೆಯುತ್ತಿರುವದು ಕಳವಳಕಾರಿ ಸಂಗತಿಯಾಗಿದೆ ಎಂದರು.

ಹೈಕೋರ್ಟ್ ಹಿರಿಯ ನ್ಯಾಯವಾದಿ ಹಾಗೂ ರೈತಪರ ಹೋರಾಟಗಾರ ಪಿ ಎಚ್. ನೀರಲಕೇರಿ ಅವರು ಮಾತನಾಡಿ, ಶೀಘ್ರವಾಗಿ ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಮತ್ತು ಇನ್ನು ಮುಂದೆ ಈ ರೀತಿ ಅವ್ಯಾಹತವಾಗಿ ನಡೆಯುತ್ತಿರುವ ಕಾನೂನು ಬಾಹಿರವಾದ ಕಿರುಕುಳ ಆಗದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಕ್ರಮ ಜರುಗಿಸಬೇಕು ಹಾಗೂ ಇತ್ತೀಚೆಗೆ ಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಲವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೇಲೆ ವಿನಾಕಾರಣ ಸುಳ್ಳು ಮೊಕದ್ದಮೆ ದಾಖಲಿಸಿ,ಕಾನೂನು ಬಾಹಿರವಾಗಿ ಬಂಧಿಸಿ,ಬೆಳಗಾವಿ ಹಿಂಡಲಗಾ ಜೈಲಿಗೆ ಹಾಕಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ,ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಲು ಸರ್ಕಾರಕ್ಕೆಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೈಲಪ್ಪ (ಅಪ್ಪೇಶ) ದಳವಾಯಿ ,ರೈತ ಮುಖಂಡರಾದ ಕಲ್ಲಪ್ಪ ಕುಗಟಿ,ಬಿಷ್ಟಪ್ಪ ಶಿಂಧೆ,ಕಲಗೌಡ ಪಾಟೀಲ,ನಿಂಗಪ್ಪ ನಂದಿ,ಬಸವರಾಜ ಡೊಂಗರಗಾವಿ,ಮಡಿವಾಳಪ್ಪ ವರಗಣ್ಣವರ,ಗಿರೆಪ್ಪ ಪರವಣ್ಣವರ,ಬಸವರಾಜ ಹನ್ನಿಕೇರಿ,ಅರ್ಜುನ ಪಡೆನ್ನವರ ಸೇರಿದಂತೆ ನೂರಾರು ಜನ ರೈತ ಮುಖಂಡರು ಉಪಸ್ಥಿತರಿದ್ದರು .

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";