ಮುದಗಲ್ಲ ಪುರಸಭೆ ಗದ್ದುಗೆ ಏರಿದ ಅಮೀನ ಬೇಗಂ

ಉಮೇಶ ಗೌರಿ (ಯರಡಾಲ)

ಮುದಗಲ್ : ಕಳೆದ 5 ತಿಂಗಳ ಹಿಂದೆ ಮಾಜಿ ಅಧ್ಯಕ್ಷೆ ಅಮೀನಾ ಬೇಗಂ ಮೈಬೂಬ ಸಾಬ್ ಬಾರೀಗಿಡ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ನಡೆಯಿತು.

ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಲ್ಲಿ ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ 8 ನೇ ವಾರ್ಡ್ ಸದಸ್ಯೆ ರಬಿಯ ಬೇಗಂ ಹುಸೇನ್ ಅಲಿ, 03ನೇವಾರ್ಡ್ ಸದಸ್ಯೆ ಅಮೀನ ಬೇಗಂ ಸೈಯದ್ ಸಾಬ್, ಮಧ್ಯ ಭಾರಿ ಪೈಪೋಟಿ ನಡೆಯಿತು.

ಬಳಿಕ ಅಮೀನ ಬೇಗಂ ಸೈಯದ್ ಸಾಬ್ ಒಬ್ಬರೇ ನಾಮಪತ್ರ
ಸಲ್ಲಿಸುವ ಮೂಲಕ ಅವಿರೋಧ ವಾಗಿ 03ನೇ ವಾರ್ಡಿನ ಅಮೀನ ಬೇಗಂ ಸೈಯದ್ ಸಾಬ್ ರನ್ನು ಪುರಸಭೆ ಅಧ್ಯಕ್ಷರ ಗದ್ದುಗೆಗೆ ಏರಿಸಲು ಪುರಸಭೆ ಸದಸ್ಯರು ಆಯ್ಕೆ ಮಾಡಿದರು.

ವರದಿ: ಮಂಜುನಾಥ ಕುಂಬಾರ

Share This Article
";