ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕರ ಸನ್ಮಾನ

ಉಮೇಶ ಗೌರಿ (ಯರಡಾಲ)

ಯರಗಟ್ಟಿ: ‘ಮಹಿಳಾ ದಿನಾಚರಣೆಯು ಕೇವಲ ಒಂದೇ ದಿನಕ್ಕೆ ಸೀಮಿತವಾಗಿರುವುದಿಲ್ಲ. ವರ್ಷದುದ್ದಕ್ಕೂಮಹಿಳಾ ದಿನಾಚರಣೆಯಾಗಿ ರುತ್ತದೆ’ ಎಂದು ಯರಗಟ್ಟಿ ಬಾಲಕಿಯ ನಿಲಯ ಪಾಲಕರಾದ ಆಶಾ ಪರೀಟ ಹೇಳಿದರು.

ಇಲ್ಲಿಯ ಟೀಚರ್ಸ್ ಕಾಲೋನಿ ಅನ್ನಪೂರ್ಣೇಶ್ವರಿ ಸ್ವ ಸಹಾಯ ಸಂಘ ಪರಿವಾರದಿಂದ ಆಚರಿಸಿದ ವಿಶ್ವ ಮಹಿಳಾ ದಿನಾಚರಣೆ, ಹಾಗೂ ಸಾಧಕರ ಸನ್ಮಾನ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಿಂದ ಕುಟುಂಬ ಮತ್ತು ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸಿರುತ್ತದೆ ಎಂದರು.

ಮುಖ್ಯ ಅತಿಥಿ ಮುಖ್ಯ ವೈದ್ಯಾಧಿಕಾರಿ ಡಾ. ಬಿ. ಎಸ್. ಬೆಳ್ಳೂರ ಮಾತನಾಡಿ ಮಧುಮೇಹ ಕಾಯಲೆಯು, ಬಿಪಿ ಬಾಧಿಸದಂತೆ ಮಹಿಳೆಯರು ಎಚ್ಚರವಾಗಿರಬೇಕು.
ಹೆಚ್ಚು ಒತ್ತಡಕ್ಕೆ ಒಳಗಾಗ ಬಾರದು ಎಂದರು.

ಅಧ್ಯಕ್ಷತೆವಹಿಸಿದ್ದ ಅನ್ನಪೂರ್ಣೇಶ್ವರಿ ಸ್ವ ಸಹಾಯ ಸಂಘ ಅಧ್ಯಕ್ಷ ನೀತಾ ಶಿವಾನಂದ ಉಪ್ಪಿನ, ಉದ್ಘಾಟಕರಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾಂಚನಾ ಅಮಟೆ, ಅತಿಥಿಯಾಗಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಬಿ. ಬಿ. ಗೋರೋಶಿ, ಶಾಂತಾ ಕರ್ಕಿ, ಕೆ. ಎಫ್. ನದಾಫ, ಡಾ: ರಾಜಶೇಖರ ಬಿರಾದಾರ ವೇದಿಕೆಯಲ್ಲಿದ್ದರು.
ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಟೀಚರ್ಸ್ ಕಾಲೋನಿ ಸಮಸ್ತ ನಿವಾಸಿಗಳು ಉಪಸ್ಥಿತಿದ್ದರು.

ಶಕುಂತಲಾ ಕರಾಳೆ ಸ್ವಾಗತಿಸಿದರು, ಮಹಾನಂದ ತೋರಗಲ್ ನಿರೂಪಿಸಿ, ಅನುಶ್ರೀ ಬಿರಾದಾರ ವಂದಿಸಿದರು.

Share This Article
";