ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೌಶಲ್ಯ ಕೇಂದ್ರ ಪ್ರಶಿಕ್ಷಣಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ಕೃಷಿ, ಸಾಂಸ್ಕೃತಿಕ ಸಂಘದ ಸಂಚಾಲಕ ಬಸವರಾಜ ಪಾಟೀಲ ಅವರು ಜಿಲ್ಲೆಯ ಹುಮನಾಬಾದ ಶ್ರೀ ಲಕ್ಷ್ಮೀವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿದರಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಸೇಡಂ ನಮ್ಮಂತೆ ನಮ್ಮ ಮಕ್ಕಳು ಅನ್ಯರ ಎದುರು ತಿಂಗಳ ಸಂಬಳಕ್ಕಾಗಿ ಕೈ ಚಾಚುವವರಾಗದೇ ನೂರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಸಂಬಳ ನೀಡುವ ಮಾಲೀಕರಾಗಬೇಕು ಎಂದು ಸಲಹೆ ನೀಡಿದರು.
ಬಸವರಾಜ ಪಾಟೀಲ ಸೇಡಂ, ಶಿವಶಂಕರ ತರನಳ್ಳಿ, ರೇವಣಸಿದ್ದ ಜಾಡರ್, ನಾರಾಯಣರಾವ ಚಿದ್ರಿ, ರಾಘವೇಂದ್ರ ಕುಲಕರ್ಣಿ, ಗೋವಿಂದಸಿಂಗ್ ತಿವಾರಿ, ರಾಜಪ್ಪ ಹರಕಂಚಿ, ಚಂದ್ರಕಾಂತ ಮಠಪತಿ, ಗೋಪಾಲಕೃಷ್ಣ ಮೊಹಳೆ, ಇಂದುಮತಿ ಮಠ್ ಭಾಗವಹಿಸಿದ್ದರು.