ಮುದಗಲ್ಲ:ಸರಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ” (ಎನ್.ಎಸ್.ಎಸ್.) ವತಿಯಿಂದ ಐತಿಹಾಸಿಕ ಕೋಟೆಯ ಸ್ವಚ್ಚತಾ ಅಭಿಯಾನವನ್ನು ನಡೆಯಿತು.
ಐತಿಹಾಸಿಕ ಮುದಗಲ್ಲ ಕೋಟೆಯ ಉಳಿವಿಗಾಗಿ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದು ಇದರಲ್ಲಿ ಹಲವಾರು ಸಂಘ ಸಂಸ್ಥೆಯವರು, ಕೋಟೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಐತಿಹಾಸಿಕ ಕೋಟೆಯ ಉಳಿವಿಗಾಗಿ ತಮ್ಮ ಶ್ರಮದಾನ ಮಾಡುತ್ತಿದ್ದಾರೆ. ಗುರುವಾರ ಮುದಗಲ್ಲನ ಸರಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ (ಎನ್.ಎಸ್.ಎಸ್.) ವತಿಯಿಂದ ಐತಿಹಾಸಿಕ ಕೋಟೆಯ ಸ್ವಚ್ಚತಾ ಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕ ವಿಶ್ವನಾಥ ಕೋಳೂರು ಒಂದು ಊರಿನ ಐತಿಹಾಸಿಕ ಸ್ಮಾರಕ ಸಂರಕ್ಷಣೆ ಮಾಡುವುದು ನಮ್ಮ ಹೊಣೆ ಹಾಗೂ ಕರ್ತವ್ಯ ಎಂದ ಅವರು ಕೋಟೆಯನ್ನು ರಕ್ಷಣೆ ಹಾಗೂ ಸ್ವಚ್ಛತೆ ಮಾಡುವುದು ನಮ್ಮ ಹಕ್ಕು ಪ್ರತಿ ಯೊಂದು ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳು ಕೈ ಜೋಡಿಸಬೇಕು ಇಲ್ಲಿ ಊರಿನ ಎಲ್ಲರ ಶ್ರಮ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಅಮರೆಗೌಡ,ದೊಡ್ಡ ಬಸಪ್ಪ, ವರ್ದನ ರಡ್ಡಿ ಸಿದ್ದಮ್ಮ, ಬೀಮಣ್ಣ,ಡಾ!! ವೀರಪ್ಪಣ್ಣ ಗೌಡ, ವಿಧ್ಯಾರ್ಥಿಗಳಾದ ಮಂಜುನಾಥ್ ಕುಂಬಾರ, ಮೋಸಿನ್, ಮಹಾಂತೇಶ ,ಸಾಗರ್, ಹಾಗೂ ಅಶ್ವಿನಿ,ಅಭಿಕಾ,ಗಿರೀಶ್ ಸೇರಿದಂತೆ ಅನೇಕರು ಇದ್ದರು.
ವರದಿ: ಮಂಜುನಾಥ ಕುಂಬಾರ