Tuesday, October 1, 2024

ಖ್ಯಾತ ಕಥೆಗಾರ ಡಾ.ಬಸು ಬೇವಿನಗಿಡದ ಅವರಿಗೆ ಸನ್ಮಾನ

ಧಾರವಾಡ: ಖ್ಯಾತ ಕಥೆಗಾರ  ಹಾಗೂ ಅನುವಾದಕರಾದ ಡಾ. ಬಸು ಬೇವಿನಗಿಡದ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ‘ಬಾಲ ಪುರಸ್ಕಾರ’ ಕ್ಕೆ ಅವರ ‘ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿ ಆಯ್ಕೆಯಾದ ಪ್ರಯುಕ್ತ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಮಾಧ್ಯಮ ಪ್ರತಿನಿಧಿಗಳಾದ ಆಕಾಶ್ ಅರವಿಂದ ಥಬಾಜ, ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ, ಖಾನಾಪೂರ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಕಿರಣ ಸಾವಂತನವರ ಹಾಗೂ ಆಕಾಶವಾಣಿ ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಪ್ರತಿಭೆಗಳಿಗೆ ಆಕಾಶವಾಣಿಯಲ್ಲಿ ಅವಕಾಶ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸುವ ಅವರ ಗುಣ ಮೆಚ್ಚುವಂತದ್ದು.

ಡಾ.ಬಸು ಬೇವಿನಗಿಡದ ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ , ನೆರಳಿಲ್ಲದ ಮರ, ಬೀಳದ ಗಡಿಯಾರ, ದಕ್ಕದ ಕಾಡು, ಕಲ್ಲುಸಕ್ಕರೆ, ಕಾಲದ ಕನ್ನಡಿ ಮುಂತಾದ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.

ಡಾ.ಬಸು ಬೇವಿನಗಿಡದ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರಗಳನ್ನು ಸಂದಿವೆ. ರಾಷ್ಟ್ರಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ರೈತರ ಆತ್ಮಹತ್ಯೆ ಕುರಿತು ‘ಅನ್ನದಾತನ ಅಳಲು’ ನುಡಿಚಿತ್ರ ಹಾಗೂ ‘ಗೊಂಬೆಯಾಟ’ ರೂಪಕಕ್ಕೆ ಪ್ರಥಮ ಪುರಸ್ಕಾರ ದೊರೆತಿದೆ. 

ಜಿಲ್ಲೆ

ರಾಜ್ಯ

error: Content is protected !!