Thursday, September 19, 2024

ಪ್ರಧಾನಿ ನೇರಂದ್ರ ಮೋದಿ ಪ್ರತಿನಿಧಿಸುವ ಗುಜರಾತ್ ಮೂಲದ ಉದ್ಯಮಿಗಳಿಂದ ಮತ್ತೊಂದು ದೇಶದ ಅತಿ ದೊಡ್ಡ ಬ್ಯಾಂಕ್ ವಂಚನೆ

ಸುದ್ದಿ ಸದ್ದು ನ್ಯೂಸ್

ಮತ್ತೊಂದು ಅತಿದೊಡ್ಡ ಬ್ಯಾಂಕ್ ವಂಚನೆ ನಡೆದಿದ್ದು ವಂಚನೆ ಮೊತ್ತವು 22,842 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಪ್ರಧಾನಿ ನೇರಂದ್ರಮೋದಿ ಅವರು ಪ್ರತಿನಿಧಿಸುವ ಗುಜರಾತ್ ಮೂಲದ ಉದ್ಯಮಿಗಳು ವಂಚನೆ ಎಸಗಿದ ಕಿರಾತಕರು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಮೂಲದ ನೀರವ್ ಮೋದಿ ಪಂಜಾಬ್ ನ್ಯಾನಷಲ್ ಬ್ಯಾಂಕಿಗೆ 14,000 ಕೋಟಿ ರೂಪಾಯಿ ವಂಚನೆ ಮಾಡಿದ್ದು ಇದುವರೆಗಿನ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣವಾಗಿತ್ತು. ಆದರೆ ಅದನ್ನು ಮಿರಿಸುವ ಪ್ರಕರಣ ನಡೆದಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. 

ಗುಜರಾತ್ ಮೂಲದ ಎಬಿಜಿ ಶಿಪ್ಯಾರ್ಡ್ ಎಂಬ ಕಂಪನಿ ದೇಶದ ಪ್ರಮುಖ 28 ಬ್ಯಾಂಕುಗಳಿಂದ 22,842 ಕೋಟಿ ರೂಪಾಯಿ ಸಾಲ ಪಡೆದು ಸಕಾಲದಲ್ಲಿ ಅಸಲು ಅಷ್ಟೇ ಅಲ್ಲ ಬಡ್ಡಿಯನ್ನು ಪಾವತಿ ಮಾಡಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಯಾವ ಉದ್ದೇಶಕ್ಕೆ ಸಾಲ ಪಡೆಯಲಾಗಿದೆಯೋ ಆ ಉದ್ದೇಶಕ್ಕೆ ಹಣವನ್ನು ಬಳಸಿಲ್ಲ. ಬೃಹತ್ ಪ್ರಮಾಣದ ಸಾಲವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳ ನಾಯಕರುಗಳು ಆರೋಪ ಮಾಡಿದ್ದಾರೆ.

ಈ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌‌ಬಿಆಯ್) ಲಿಖಿತ ದೂರು ನೀಡಿದ್ದರೂ ಸಹ ತನಿಖೆ ಬಹಳ ಮಂದಗತಿಯಲ್ಲಿ ನಡೆದಿದ್ದು, ಕಳೆದ ವಾರವಷ್ಟೇ ಕೇಂದ್ರೀಯ ತನಿಖಾ ದಳ (ಸಿಬಿಐ) ವಂಚನೆ ಪ್ರಕರಣ ದಾಖಲಿಸಿದೆ.

ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ಸಂಸ್ಥೆ ಮತ್ತು ಅದರ ನಿರ್ದೇಶಕ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ, ಅಶ್ವಿನಿ ಕುಮಾರ್ ಸೇರಿದಂತೆ ಇನ್ನೂ ಅನೇಕರ ಮೇಲೆ ಎಫ್ಐಆರ್ ದಾಖಲಿಸಿದೆ ಎಂದು ಸಿಬಿಐ ಖಚಿತಪಡಿಸಿದೆ.

ಈ ಕಂಪನಿಯು ಎಬಿಜಿ ಸಮೂಹದ ಪ್ರಮುಖ ಕಂಪನಿಯಾಗಿದ್ದು, ಇದು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಕಾರ್ಯದಲ್ಲಿ ತೊಡಗಿದೆ. ಗುಜರಾತಿನ ದಹೇಜ್ ಮತ್ತು ಸೂರತನಲ್ಲಿ ಹಡಗು ನಿರ್ಮಾಣ ಮತ್ತು ದುರಸ್ತಿ ಕಟ್ಟೆಗಳಿವೆ.

ಎಸ್ಬಿಐ ನೀಡಿರುವ ದೂರಿನ ಪ್ರಕಾರ, ಎಬಿಜಿ ಶಿಪ್ಯಾರ್ಡ್ ಕಂಪನಿಯು ಎಸ್‌ಬಿಐ ಬ್ಯಾಂಕಿಗೆ 2,925 ಕೋಟಿ ರೂಪಾಯಿ ಸೇರಿದಂತೆ ಐಸಿಐಸಿಐ ಬ್ಯಾಂಕಿಗೆ 7,089 ಕೋಟಿ, ಐಡಿಬಿಐ ಬ್ಯಾಂಕಿಗೆ 3,634 ಕೋಟಿ, ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿಗೆ 1,614 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 1,244 ಕೋಟಿ, ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕಿಗೆ 1,228 ಕೋಟಿ ರೂಪಾಯಿ ಬಾಕಿ ಪಾವತಿ ಬೇಕಾಗಿದ್ದು

ಎಬಿಜಿ ಶಿಪ್ಯಾರ್ಡ್ ಕಂಪನಿಯು ಬ್ಯಾಂಕುಗಳು ಬಿಡುಗಡೆ ಮಾಡಿದ್ದ ಹಣವನ್ನು ಮೂಲ ಉದ್ದೇಶಕ್ಕೆ ಬಳಸದೇ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ಸಿಬಿಐ ಹೇಳಿದೆ. 

ಎಸ್‌ಬಿಐ 08-11-2019 ರಂದು ತನ್ನ ಮೊದಲ ದೂರು ದಾಖಲಿಸಿತ್ತು. ದೂರು ಆಧರಿಸಿ ಸಿಬಿಐ 12-03-2020 ರಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ಕೇಳಿತ್ತು. ಸ್ಪಷ್ಟೀಕರಣ ನೀಡಿದ್ದಲ್ಲದೇ ಬ್ಯಾಂಕ್ 2020 ಆಗಸ್ಟ್ ತಿಂಗಳಲ್ಲಿ ಎರಡನೇ ದೂರನ್ನು ಸಲ್ಲಿಸಿತು. ಇನ್ನುಳಿದ ಪ್ರಕರಣಗಳಂತೆ ಸಿಬಿಐ ತ್ವರಿತವಾಗಿ ಕಾರ್ಯಪ್ರವೃತ್ತವಾಗಿಲ್ಲ. ಗುಜರಾತ್ ಮೂಲದ ಕಂಪನಿಯಾದ್ದರಿಂದ ದೂರನ್ನು ಒಂದೂವರೆ ವರ್ಷಗಳ ಕಾಲ “ಪರಿಶೀಲನೆ” ನೆಪ ಮಾಡಿ ನಂತರ 7-02-2022 ರಂದು ಎಫ್ಐಆರ್ ದಾಖಲಿಸಿತ್ತು.

       ಎಬಿಜೆ ಶಿಪ್ಯಾರ್ಡ ಸಂಸ್ಥೆ

 

ಏಪ್ರಿಲ್ 2012 ರಿಂದ ಜುಲೈ 2017 ರಿ ಈ ಅವಧಿಯಲ್ಲಿ ಮೆಸರ್ಸ್ ಅರ್ನ್ಸ್ಟ್ ಮತ್ತು ಯಂಗ್ ಎಲ್ಪಿ ಸಂಸ್ಥೆ ಸಲ್ಲಿಸಿದ ತಳಸ್ಪರ್ಶಿ ಲೆಕ್ಕಪರಿಶೋಧನಾ ವರದಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಲಾಗಿದೆ. ಆರೋಪಿಗಳು ಒಟ್ಟಾಗಿ ಸೇರಿಕೊಂಡು ಹಣದ, ದುರುಪಯೋಗ ಮತ್ತು ನಂಬಿಕೆ ದ್ರೋಹ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದು ಲೆಕ್ಕಪರಿಶೋಧನಾ ವರದಿ ಬಹಿರಂಗಪಡಿಸಿದೆ. 

 

ಜಿಲ್ಲೆ

ರಾಜ್ಯ

error: Content is protected !!